ನವದೆಹಲಿ:
ನವದೆಹಲಿಯ ಕರ್ನಾಟಕ ಭವನದಲ್ಲಿ ಶನಿವಾರ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕರ್ನಾಟಕ ಭವನದ ವಿಶೇಷ ನಿವಾಸಿ ಆಯುಕ್ತ ವಿಜಯ್ ರಂಜನ್ ಸಿಂಗ್ ಅವರು ಧ್ವಜಾರೋಹಣ ನೆರವೇರಿಸಿದರು. ವಿಶೇಷ ನಿವಾಸಿ ಆಯುಕ್ತರಾದ ಮೀರಾ ಶ್ರೀವಾತ್ಸವ, ಉಪ ನಿವಾಸಿ ಆಯುಕ್ತ ಬಿ.ವಿ. ವಿಠ್ಠಲ್, ಕರ್ನಾಟಕ ಭವನದ ಅಧಿಕಾರಿಗಳು ಹಾಗು ಸಿಬ್ಬಂದಿ, ಕೆಎಸ್ಆರ್ಪಿ ಆರ್ಎಸ್ಐ ಮಹಮ್ಮದ್ ಹ್ಯಾರೀಸ್ ಹಾಗೂ ಶ್ರೀಧರ ವಾಘ್ಮೋರೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








