ಸಾವಿನ ಸಂಖ್ಯೆ 101ಕ್ಕೆ: 3312 ಜನರಿಗೆ ಪಾಸಿಟೀವ್

ತುಮಕೂರು

     ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 101 ಜನರಿಗೆ ಕೋವಿಡ್ ಸೋಂಕು ತಗುಲಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 3312ಕ್ಕೆ ಏರಿಕೆಯಾಗಿದೆ. ಜೊತೆಗೆ ಮತ್ತೆ ಐದು ಜನ ಸೋಂಕಿನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಕೊರೊನ ಸೋಂಕಿನಿಂದ ಮೃತರಾದವರ ಸಂಖ್ಯೆ 101ಕ್ಕೆ ಏರಿದೆ. ಇವರಲ್ಲಿ ತುಮಕೂರು ತಾಲ್ಲೂಕಿನ 68 ಜನ ಸೇರಿದ್ದಾರೆ.

     ತುಮಕೂರು ನಗರದ ಶಾಂತಿನಗರದ 50 ವರ್ಷದ ಪುರುಷ ಕೊರೊನಾ ಸೊಂಕಿಗೆ ಬಲಿಯಾಗಿದ್ದಾರೆ. ಜ್ವರ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇವರ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಪಾಸಿಟಿವ್ ವರದಿ ಬಂದಿತ್ತು. ಇವರು ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

     ತುಮಕೂರಿನ ಉಪ್ಪಾರಹಳ್ಳಿಯ 63 ವರ್ಷದ ಗಂಡಸಿಗೆ ಕೊರೊನಾ ಪಾಸಿಟೀವ್ ಖಚಿತವಾಗಿತ್ತು. ಜ್ವರ, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇವರು, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು ತುಮಕೂರು ತಾಲ್ಲೂಕಿನ ಡಿ.ಎಸ್.ಪಾಳ್ಯದ 63 ವರ್ಷದ ಪುರುಷ ಕೋವಿಡ್ ಸೋಂಕಿನಿಂದ ಮೃತರಾಗಿದ್ದಾರೆ. ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆಯಿಂದ ಇವರು ನರಳುತ್ತಿದ್ದರು, ಇವರಿಗೆ ಕೊರೊನಾ ಪಾಸಿಟೀವ್ ಖಚಿತವಾಗಿತ್ತು.

    ಪಾವಗಡ ತಾಲ್ಲೂಕು ಮರಿದಾಸರಹಳ್ಳಿಯ 35 ವರ್ಷದ ಗಂಡಸು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರು ಕೆಮ್ಮು, ಜ್ವರ, ಉಸಿರಾಟ ಸಮಸ್ಯೆಯಿಂದ ನರಳುತ್ತಿದ್ದರು. ಇವರಿಗೆ ಕೋವಿಡ್ ಸೋಂಕು ಖಚಿತವಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮೃತರಾದರು.
ತುರುವೇಕೆರೆ ಪಟ್ಟಣದ ಶಕ್ತಿನಗರ ಬಡಾವಣೆಯ 50 ವರ್ಷದ ಗಂಡಸು ಸೋಂಕು ತಗುಲಿ ಮರಣ ಹೊಂದಿದ್ದಾರೆ. ಇವರು ಜ್ವರ ಉಸಿರಾಟದ ತೊಂದರೆ ಇತ್ತು. ಇವರ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಪಾಸಿಟೀವ್ ವರದಿ ಬಂದಿದ್ದು ಮೃತಪಟ್ಟರು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

    ಶನಿವಾರ ವರದಿಯಾದ 101 ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನ 38, ಪಾವಗಡ ತಾಲ್ಲೂಕಿನ 12, ಗುಬ್ಬಿ ತಾಲ್ಲೂಕಿನ 11, ತುರುವೇಕೆರೆ ತಾಲ್ಲೂಕಿನ 10, ತಿಪಟೂರು ತಾಲ್ಲೂಕಿನ 8, ಕುಣಿಗಲ್ ತಾಲ್ಲೂಕಿನ 7, ಮಧುಗಿರಿ ತಾಲ್ಲೂಕಿನ 6, ಕೊರಟಗೆರೆ ತಾಲ್ಲೂಕಿನ 6, ಶಿರಾ ತಾಲ್ಲೂಕಿನ 7 ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಒಬ್ಬರಿಗೆ ಕೊರೊನಾ ಸೋಂಕು ಖಚಿತವಾಗಿದೆ. ಇವರಲ್ಲಿ 64 ಪುರುಷರು, 37 ಮಹಿಳೆಯರು, 60 ವರ್ಷ ಮೇಲ್ಪಟ್ಟ 22 ಜನರಿದ್ದಾರೆ.

    ಇದೂವರೆಗೆ ಜಿಲ್ಲೆಯಲ್ಲಿ ವರದಿಯಾಗಿರುವ ಒಟ್ಟು 3312 ಸೋಂಕು ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನಲ್ಲಿ 1258, ಕುಣಿಗಲ್ ತಾ. 353, ಪಾವಗಡ ತಾ. 264, ಶಿರಾ ತಾ. 246, ತಿಪಟೂರು ತಾ. 236, ಮಧುಗಿರಿ ತಾ. 213, ಕೊರಟಗೆರೆ ತಾ. 204 ಗುಬ್ಬಿ ತಾ. 204, ತುರುವೇಕೆರೆ ತಾ. 172, ಚಿಕ್ಕನಾಯಕನಹಳ್ಳಿ ತಾ. 162 ಪ್ರಕರಣ ವರದಿಯಾಗಿವೆ.

    ಈವರೆಗೆ ಜಿಲ್ಲೆಯ 3312 ಮಂದಿಗೆ ಕೊರೊನಾ ಸೋಂಕು ತಗುಲಿ, ಇವರಲ್ಲಿ 101 ಜನ ಮೃತಪಟ್ಟಿದ್ದಾರೆ. ಮೃತರಲ್ಲಿ ತುಮಕೂರು ತಾಲ್ಲೂಕಿನ 68 ಜನ ಸೇರಿದ್ದಾರೆ. ಉಳಿದಂತೆ, ಕುಣಿಗಲ್ ತಾಲ್ಲೂಕಿನ 6, ಶಿರಾ ತಾಲ್ಲೂಕಿನ 5, ತಿಪಟೂರು ತಾಲ್ಲೂಕಿನ 4, ಚಿಕ್ಕನಾಯಕನಹಳ್ಳಿ, ಗುಬ್ಬಿ, ಪಾವಗಡ ಹಾಗೂ ಮಧುಗಿರಿ ತಾಲ್ಲೂಕಿನ ತಲಾ ಮೂವರು ಕೊರೊನಾ ಸೋಂಕಿನಿಂದ ಮರಣ ಹೊಂದಿದ್ದಾರೆ. ಕೊರಟಗೆರೆ, ತುರುವೇಕೆರೆ ಹಾಗೂ ತಾಲ್ಲೂಕಿನ ತಲಾ ಇಬ್ಬರು ಕೋವಿಡ್‍ಗೆ ಬಲಿಯಾಗಿದ್ದಾರೆ.ಜಿಲ್ಲೆಯಲ್ಲಿ 1017 ಸೋಂಕು ಸಕ್ರಿಯ ಪ್ರಕರಣಗಳಿವೆ. ಶನಿವಾರ ಗುಣಮುಖರಾಗಿ ಆಸ್ಪತ್ರೆಯಿಂದ 119 ಮಂದಿ ಬಿಡುಗಡೆಯಾಗಿದ್ದು, ಈವರೆಗೆ 2194 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link