ರಾಗಿಣಿ ಜಾಮೀನು ಅರ್ಜಿ ಮುಂದೂಡಿಕೆ

ಬೆಂಗಳೂರು:

    ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ .ಸೋಮವಾರ  14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ನಟಿ ರಾಗಿಣಿಯವರ ಜಾಮೀನು ಅರ್ಜಿ ಇಂದು ನ್ಯಾಯಾಲಯದ ಮುಂದೆ ಬಂದಾಗ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 19ಕ್ಕೆ  ಮುಂದೂಡಿ ಆದೇಶಿಸಿದೆ. 

   ತನಿಖೆ ಪ್ರಗತಿಯಲ್ಲಿದ್ದು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಬೇಕೆಂದು ಸಿಸಿಬಿ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆಯನ್ನು ಮತ್ತೆ ಮೂರು ದಿನಗಳ ಕಾಲ ಮುಂಡೂಡಿದೆ. ಇದರಿಂದ ನಟಿ ರಾಗಿಣಿಗೆ ಇನ್ನೂ ಮೂರು ದಿನಗಳ ಕಾಲ ಜೈಲು ವಾಸ ಖಚಿತವಾದಂತಾಗಿದೆ. 

    ಇದೇ ವೇಳೆ ಇನ್ನೋರ್ವ ನಟಿ ಸಂಜನಾ  ಗಲ್ರಾನಿ ಪೊಲೀಸ್ ಕಸ್ಟಡಿ ಇಂದಿಗೆ ಕೊನೆಯಾಗಲಿದ್ದು ಆಕೆಯನ್ನು ಇಂದು ಪೋಲೀಸರು ನ್ಯಾಯಾಲಯದ  ಮುಂದೆ ಹಾಜರು ಪಡಿಸಲಿದ್ದಾರೆ. ಇನ್ನೊಬ್ಬ ಕನ್ನಡ ಚಿತ್ರರಂಗದ ಸ್ಟಾರ್ ಕಪಲ್ ಗಳಾದ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೆ ಸಹ ಇಂದು ಸಿಸಿಬಿ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link