ಪಾಕಿ್ತಾನ : ಪ್ರಧಾನಿ ತಕ್ಷಣವೇ ರಾಜೀನಾಮೆ ನೀಡಬೇಕು : ವಿಪಕ್ಷಗಳ ಒಕ್ಕೂಟ

ಇಸ್ಲಾಮಾಬಾದ್:

      ಪ್ರಧಾನಿ ಸ್ಥಾನಕ್ಕೆ ಇಮ್ರಾನ್ ಖಾನ್ ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಪಾಕಿಸ್ತಾನದ ವಿರೋಧ ಪಕ್ಷಗಳು ಒತ್ತಾಯ ಮಾಡಿವೆ. ಅಷ್ಟೇಅಲ್ಲದೇ, ಈ ಬಗ್ಗೆ ದೇಶವ್ಯಾಪಿ ಪ್ರತಿಭಟನೆ ನಡೆಸಲು ಒಟ್ಟಾಗಿ ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್ ಮೆಂಟ್ (ಪಿಡಿಎಂ) ಮೈತ್ರಿಕೂಟವನ್ನು ರಚನೆ ಮಾಡಿವೆ

      ಪ್ರಧಾನಿ ಇಮ್ರಾನ್​ ಖಾನ್ ಅವರ​ ರಾಜೀನಾಮೆಗೆ ಆಗ್ರಹಿಸಿ ಹೋರಾಟದ ಬಗ್ಗೆ ಚರ್ಚಿಸಲು ಭಾನುವಾರ ನಡೆದ ಸಭೆಯಲ್ಲಿ 26 ಅಂಶಗಳನ್ನು ಒಳಗೊಂಡ ಜಂಟಿ ನಿರ್ಣಯ ಕೈಗೊಳ್ಳಲಾಗಿದ್ದು, ಪಾಕಿಸ್ತಾನ ಫೀಪಲ್ಸ್ ಪಾರ್ಟಿ (ಪಿಪಿಪಿ), ಪಾಕಿಸ್ತಾನ್ ಮುಸ್ಲಿಂ ಲೀಗ್ –ನವಾಜ್ (ಪಿಎಂಎಲ್–ಎನ್), ಜಮಾಯಿತ್ ಉಲೆಮಾ ಇ ಇಸ್ಲಾಂ ಫಾಜಿಲ್ (ಜೆಯುಐ–ಎಫ್) ಹಾಗೂ ಇತರೆ ಪಕ್ಷಗಳು ಸಭೆಯಲ್ಲಿ ಭಾಗಿಯಾಗಿದ್ದವು.

      ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೆಯುಐ–ಎಫ್ ಮುಖ್ಯಸ್ಥ ಮೌಲಾನಾ ಫಾಜಿಲ್ ಉರ್ ರೆಹಮಾನ್ ಅವರು ಈ ನಿರ್ಣಯವನ್ನು ಓದಿದರು. ಅಕ್ಟೋಬರ್ ತಿಂಗಳಿನಿಂದ ಆಡಳಿತರೂಢ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಸರ್ಕಾರದ ವಿರುದ್ಧ ಜನಾಂದೋಲನವು ಆರಂಭವಾಗಲಿದೆ ಎಂದಿದ್ದಾರೆ

    ನಿರ್ಣಯದ ಅನುಸಾರ, ಹಂತ, ಹಂತವಾಗಿ ಪ್ರತಿಭಟನೆ ಆರಂಭವಾಗಲಿದೆ. ಮೊದಲ ಹಂತದಲ್ಲಿ 4 ಪ್ರಾಂತ್ಯಗಳಲ್ಲಿ ಜಾಥಾ, ಎರಡನೇ ಹಂತದಲ್ಲಿ (ಡಿಸೆಂಬರ್) ದೇಶದಾದ್ಯಂತ ಪ್ರತಿಭಟನಾ ಸಭೆ ನಡೆಯಲಿವೆ. ಅಂತಿಮವಾಗಿ ಜನವರಿ ತಿಂಗಳಲ್ಲಿ ಇಸ್ಲಾಮಾಬಾದ್​​ಗೆ ಜಾಥಾ ಹೊರಡಲಿದ್ದು, ಚಳವಳಿಯನ್ನು ತೀವ್ರಗೊಳಿಸಲಾಗುತ್ತದೆ.ಮತ್ತೆ ಚುನಾವಣೆ ನಡೆಸಬೇಕು. ಮುಕ್ತ ಮತ್ತು ನ್ಯಾಯಸಮ್ಮತವಾದ ಅಗತ್ಯ ಸುಧಾರಣಾ ಕ್ರಮಗಳ ಜಾರಿ ಆಗಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ.

 

Recent Articles

spot_img

Related Stories

Share via
Copy link