ಟ್ರಂಪ್ ವಿರುದ್ಧ ಕೇಳಿ ಬಂದ ತರಿಗೆ ವಂಚನೆ ಆರೋಪ..!

ಅಮೇರಿಕ :

      ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತೆರಿಗೆ ವಂಚಿಸಿದ್ದಾರೆ ಎಂದು ‘ದಿ ನ್ಯೂಯಾರ್ಕ್‌ ಟೈಮ್ಸ್‌ ‘ ಗಂಭೀರ ಆರೋಪ ಮಾಡಿದೆ.  ಈ ಕುರಿತಂತೆ ವರದಿಯೊಂದನ್ನು ಪ್ರಕಟಿಸಿರುವ ದಿ ನ್ಯೂಯಾರ್ಕ್‌ ಟೈಮ್ಸ್, 2016ರಲ್ಲಿ ಟ್ರಂಪ್‌ ಶ್ವೇತಭವನವನ್ನು ಪ್ರವೇಶಿಸಿದಾಗ ಅವರು ಆ ವರ್ಷ (2016-17) 750 ಡಾಲರ್ ‌(ಸುಮಾರು 55,000 ರೂ.) ತೆರಿಗೆಯನ್ನು ಪಾವತಿಸಿದ್ದರು. 2017ರಲ್ಲಿಯೂ ಅವರು 750 ಡಾಲರ್‌ ತೆರಿಗೆ ಮಾತ್ರ ಪಾವತಿಸಿದ್ದರು. ಆದರೆ ಟ್ರಂಪ್‌ ಒಡೆತನದ ಸಂಸ್ಥೆಯು ಭಾರತದಲ್ಲಿ 1,45,400 ಡಾಲ್‌ (ಸುಮಾರು 1.07 ಕೋಟಿ ರೂ.) ತೆರಿಗೆ ಪಾವತಿಸಿದೆ ಎಂದು ದಿ ನ್ಯೂಯಾರ್ಕ್‌ ಟೈಮ್ಸ್ ಹೇಳಿದೆ.

     ವರದಿಯ ಪ್ರಕಾರ ಕಳೆದ 15 ವರ್ಷಗಳಲ್ಲಿ 10 ವರ್ಷ ಅವರು ಯಾವುದೇ ತೆರಿಗೆಯನ್ನು ಪಾವತಿಸಿಲ್ಲ. ಇದು ಈಗ ಅಮೆರಿಕದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದ್ದು, ಟ್ರಂಪ್‌ ಎರಡನೇ ಬಾರಿಗೆ ಚುನಾವಣಾ ರಂಗದಲ್ಲಿ ಸ್ಪರ್ಧಿಸುತ್ತಿರುವಾಗ ತೆರಿಗೆ ಪಾವತಿಗೆ ಸಂಬಂಧಿಸಿದ ವಿಷಯ ಬಂದಿದೆ. ಇದು ಟ್ರಂಪ್‌ಗೆ ನುಂಗಲಾರದ ತುತ್ತಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

     ಆದರೆ ನ್ಯೂಯಾರ್ಕ್‌ ಟೈಮ್ಸ್ ವರದಿಯನ್ನು ಟ್ರಂಪ್‌ ಸುಳ್ಳು ಎಂದಿದ್ದಾರೆ. ಅದರ ಜತೆಗೆ ಯು.ಎಸ್‌.ಎ. ಅಧ್ಯಕ್ಷರು ತಮ್ಮ ವೈಯಕ್ತಿಕ ಹಣಕಾಸಿನ ವಿವರಗಳನ್ನು ಬಿಡುಗಡೆ ಮಾಡುವುದು ಅನಿವಾರ್ಯವಲ್ಲ ಎಂದು ಟ್ರಂಪ್‌ ಹೇಳಿದ್ದಾರೆ. ಆದರೆ ರಿಚರ್ಡ್‌ ನಿಕ್ಸನ್‌ (1969-74)ರಿಂದ ಬರಾಕ್‌ ಒಬಾಮ (2008-16)ರ ವರೆಗಿನ ಅಧ್ಯಕ್ಷರು ವೈಯಕ್ತಿಕ ಹಣಕಾಸು ಖಾತೆಗಳ ವಿವರಗಳನ್ನು ನೀಡಿದ್ದಾರೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ನಿರಾಕರಿಸುವ ಮೂಲಕ ಟ್ರಂಪ್‌ ಈ ಸಂಪ್ರದಾಯವನ್ನು ಮುರಿದಿದ್ದಾರೆ ಎಂದು ವಿಪಕ್ಷ ಮುಗಿ ಬಿದ್ದಿದೆ. ಟ್ರಂಪ್‌ ಅವರ ತೆರಿಗೆ ರಿಟರ್ನ್ಸ್ 2016ರ ಚುನಾವಣೆಯಲ್ಲಿ ಒಂದು ಪ್ರಮುಖ ವಿಷಯವಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link