ವಾಟ್ಸಾಪ್ ನಿಂದ ವಂಚನೆ : ಸುಳಿವು ಕೊಟ್ಟ ಎಸ್ ಬಿ ಐ..!

ನವದೆಹಲಿ:

    ಇತ್ತೀಚಿನ ದಿನಗಳಲ್ಲಿ ಸೈಬರ್​ ವಂಚನೆ ಸಾಮಾನ್ಯವಾಗಿಬಿಟ್ಟಿದೆ. ಈ ವಂಚನೆಗೆ ಒಳಗಾಗಿ ಅಸಂಖ್ಯ ಮಂದಿ ಹಣವನ್ನು ಕಳೆದುಕೊಂಡಿದ್ದಾರೆ.

      ಇದೀಗ ವಾಟ್ಸ್​ಆಯಪ್​ ಕರೆಗಳು ಮತ್ತು ಸಂದೇಶಗಳ ಮೂಲಕ ವಂಚನೆಯ ಜಾಲ ಶುರುವಾಗಿದ್ದು, ಗ್ರಾಹಕರು ಎಚ್ಚರಿಕೆಯಿಂದ ಇರಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಹೇಳಿದೆ.ಅಪರಿಚಿತ ವಾಟ್ಸ್​ಆಯಪ್​ ಕರೆಗಳು ಮತ್ತು ಸಂದೇಶಗಳಲ್ಲಿ ಏನಾದರೂ ಮಾಹಿತಿ ಕೇಳಿದರೆ ನೀಡಬೇಡಿ. ಬ್ಯಾಂಕ್​ನವರು ಎಂದು ಹೇಳಿಕೊಂಡು ಕರೆ ಮಾಡಲಾಗುತ್ತದೆ. ಆದರೆ ಅವರು ಯಾವುದೇ ಮಾಹಿತಿ ನೀಡಿದರೂ ಅದನ್ನು ಕೊಡಬೇಡಿ ಎಂದು ಎಚ್ಚರಿಸಿದೆ.

    3 ತಿಂಗಳಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ನೂರಾರು ಕೋಟಿ ರೂಪಾಯಿ ವಂಚನೆಯಾಗಿದೆ. ಇದೀಗ ಗ್ರಾಹಕರು ಎಚ್ಚೆತ್ತುಕೊಂಡಿರುವ ಹಿನ್ನೆಲೆಯಲ್ಲಿ ವಾಟ್ಸ್​ಆಯಪ್​ ಮೂಲಕ ಗುರಿ ಮಾಡಿಕೊಳ್ಳಲು ಶುರು ಮಾಡಲಾಗಿದೆ. ಸೈಬರ್ ಕ್ರಿಮಿನಲ್​ಗಳು ನಿಮ್ಮನ್ನು ಮೂರ್ಖರನ್ನಾಗಿ ಮಾಡಲು ಅವಕಾಶ ನೀಡಬೇಡಿ, ಜಾಗೃತರಾಗಿರಿ ಹಾಗೂ ಎಚ್ಚರಿಕೆಯಿಂದ ಇರಿ ಎಂದು ಎಸ್​ಬಿಐ ತನ್ನ ಟ್ವಿಟರ್​ನಲ್ಲಿ ಹೇಳಿದೆ.

      ಆನ್​ಲೈನ್ ಬ್ಯಾಂಕಿಂಗ್ ವಹಿವಾಟು ಹೆಚ್ಚುತ್ತಿರುವ ನಡುವೆಯೇ ವಂಚನೆಯೂ ಹೆಚ್ಚಾಗುತ್ತಿದೆ. ವಂಚಕರು ಕಳಿಸುವ ಇ-ಮೇಲ್​ಗಳು ಥೇಟ್ ಬ್ಯಾಂಕ್ ಅಧಿಕಾರಿಗಳ ಇ-ಮೇಲ್​ನಂತೆಯೇ ಇರುತ್ತವೆ. ಎಚ್ಚರ ಇರಲಿ. ಬ್ಯಾಂಕ್​ನಿಂದ ಯಾವುದೇ ಕಾರಣಕ್ಕೂ ವೈಯಕ್ತಿಕ ವಿವರ, ಖಾತೆ ಮಾಹಿತಿ ಕೇಳುವುದಿಲ್ಲ. ಆದ್ದರಿಂದ ಅದನ್ನು ಕೇಳಿದರೆ ದಯವಿಟ್​ಟು ನೀಡಬೇಡಿ ಎಂದು ಎಚ್ಚರಿಕೆ ನೀಡಿದೆ.

     ನಮ್ಮ ಬ್ಯಾಂಕ್​ ಹೆಸರಿನಲ್ಲಿ ಬರುವ ಇ-ಮೇಲ್​ಗಳನ್ನು ಕ್ಲಿಕ್ ಮಾಡಬೇಡಿ. ವಾಟ್ಸ್​ಆಯಪ್​ನಲ್ಲಿ ಲಿಂಕ್​ ಬಂದರೆ ಕೂಡಲೇ ಡಿಲೀಟ್​ ಮಾಡಿ, ಕ್ಲಿಕ್​ ಮಾಡಲು ಹೋದರೆ ನಿಮ್ಮ ಖಾತೆ ಹ್ಯಾಕ್​ ಆಗಬಹುದು. ನಮ್ಮಲ್ಲಿ ಯಾವುದೇ ಲಾಟರಿ ಸ್ಕೀಮ್ ಇಲ್ಲ. ಲಾಟರಿ ಯೋಜನೆ ಅಥವಾ ಅದೃಷ್ಟವಂತ ಗ್ರಾಹಕರಿಗೆ ಕೊಡುಗೆ ನೀಡುವುದಿಲ್ಲ. ಆದ್ದರಿಂದ ಬ್ಯಾಂಕ್​ ಹೆಸರಿನಲ್ಲಿ ಆಫರ್​, ಲಾಟರಿ ಎಂದೆಲ್ಲಾ ಸಂದೇಶ ಬಂದರೆ ಅದನ್ನು ನಂಬಬೇಡಿ ಎಂದಿದೆ.

     ಒಂದು ವೇಳೆ ಬ್ಯಾಂಕ್ ಕಡೆಯಿಂದ ತಪ್ಪಾಗಿ, ಗ್ರಾಹಕರಿಗೆ ವಂಚನೆ ಆದಲ್ಲಿ ಪರಿಹಾರ ದೊರೆಯುತ್ತದೆ.ಆದರೆ ಗ್ರಾಹಕರ ನಿರ್ಲಕ್ಷ್ಯದಿಂದ ನಷ್ಟವಾದಲ್ಲಿ ಪರಿಹಾರ ಸಿಗುವುದಿಲ್ಲ ಎಂದೂ ಬ್ಯಾಂಕ್​ ಎಚ್ಚರಿಕೆ ನೀಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link