ಆಮದು ಸುಂಕ ಹೆಚ್ಚಳ : ಟಿವಿಗಳ ಬೆಲೆ ಏರಿಕೆ

ನವದೆಹಲಿ:

    ಇಷ್ಟು ದಿನ ಪೆಟ್ರೋಲ್,ಡೀಸಲ್ ಮತ್ತು ತರಕಾರಿ ಬೆಲೆಗಳಲ್ಲಿ ಏರಿಕೆ ಕಂಡಿದನ್ನು ಜನ ನೋಡಿದ್ದರು ಆದರೆ ಈಗ ಕೇಂದ್ರ ಸರ್ಕಾರ ಆಮದು ಸುಂಕ ಹೆಚ್ಚಳ ಮಾಡಿದ್ದರಿಂದ  ಅಕ್ಟೋಬರ್ 1 (2020)ರಿಂದ ಎಲ್‌ಇಡಿ, ಎಲ್ ಸಿಡಿ ಟಿವಿಗಳ ಬೆಲೆಯಲ್ಲಿ ಏರಿಕೆಯಾಗಲಿದೆ ಎಂದು ವರದಿ ತಿಳಿಸಿದೆ.

   ದೇಶೀಯ ಬಿಡಿ ಭಾಗಗಳ ಉತ್ಪಾದನೆ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಭಾರತದ ಇಂಡಸ್ಟ್ರಿ ಹೆಚ್ಚಿನ ಸಮಯಾವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರಿಂದ ಕೇಂದ್ರ ಸರ್ಕಾರ ಕಳೆದ ವರ್ಷ ಆಮದು ಸುಂಕಕ್ಕೆ ಸೆಪ್ಟೆಂಬರ್ 30ರವರೆಗೆ ವಿನಾಯ್ತಿ ನೀಡಿತ್ತು.

   ವಿತ್ತ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, ಎಲ್ ಇಡಿ, ಎಲ್ ಸಿಡಿ ಟಿವಿ ಪ್ಯಾನೆಲ್ ಗಳ ಮೇಲೆ ಶೇ.5ರಷ್ಟು ಆಮದು ಸುಂಕ ವಿಧಿಸಲಾಗುವುದು ಎಂದು ತಿಳಿಸಿದೆ. ಇವೈ ಟ್ಯಾಕ್ಸ್ ಪಾರ್ಟನರ್ ಅಭಿಷೇಕ್ ಜೈನ್ ಪ್ರಕಾರ, ಆಮದು ಸುಂಕದ ಮುಖ್ಯ ಉದ್ದೇಶ ಭಾರತದಲ್ಲಿ ಟೆಲಿವಿಷನ್ಸ್ ಬಿಡಿಭಾಗಗಳ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡುವುದಾಗಿದೆ ಎಂದು ತಿಳಿಸಿದ್ದಾರೆ.

   ಆದರೆ ಬಿಡಿ ಭಾಗಗಳ ಮೇಲಿನ ಆಮದು ಸುಂಕದಿಂದಾಗಿ ಕೆಲವು ಟಿವಿ ತಯಾರಕರಿಗೆ ಹೆಚ್ಚಿನ ಹೊರೆಯಾಗಲಿದೆ.ದೇಶೀಯವಾಗಿ ಬಿಡಿಭಾಗಗಳ ಉತ್ಪಾದನೆ ಆರಂಭಿಸಿದರೆ ಟಿವಿಗಳ ಬೆಲೆಯಲ್ಲಿ ಇಳಿಕೆಯಾಗಲಿದೆ ಎಂದು ಹೇಳಿದರು.

   ಕಳೆದ ವರ್ಷದವರೆಗೆ ಬರೋಬ್ಬರಿ 7 ಸಾವಿರ ಕೋಟಿ ರೂಪಾಯಿಯಷ್ಟು ಬಿಡಿಭಾಗಗಳು ಆಮದಾಗಿದೆ. ಈ ವರ್ಷದ ಜುಲೈ ನಂತರ ಅನ್ವಯವಾಗುವಂತೆ ಟೆಲಿವಿಷನ್ ಆಮದು ಕೂಡಾ ನಿರ್ಬಂಧಿತ ಕೆಟಗರಿಯಲ್ಲಿ ಕೇಂದ್ರ ಸರ್ಕಾರ ಸೇರಿಸಿರುವುದಾಗಿ ವರದಿ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link