ಕನಕಾಂಬರ ಜೊತೆ ಗಾಂಜಾಗಿಡ ಬೆಳೆದು ತಲೆ ಮರೆಸಿಕೊಂಡಿರುವ ರೈತ

ಮಿಡಿಗೇಶಿ

    ಇತ್ತೀಚಿನ ದಿನಗಳಲ್ಲಿ ವಿವಿಧ ಕ್ಷೇತ್ರಗಳ ಜನರು ಡ್ರಗ್ಸ್‍ಗೆ ಬಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಕೆಲವರು ಪೊಲೀಸರ ವಶವಾಗಿ, ಜೈಲಿನ ಕಂಬಿಗಳನ್ನು ಎಣಿಸುತ್ತಿದ್ದಾರೆ. ಇದರ ಜೊತೆಗೆ ಗಾಂಜಾ (ಭಂಗಿಸೊಪ್ಪು) ಬೆಳೆದು ಮಾರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಾಗೂ ಗಾಂಜಾ ಮಾರಾಟ ಮಾಡುವಾಗ ಕೆಲವರು ಸಿಕ್ಕಿ ಬಿದ್ದಿರುವ ಬಗ್ಗೆ ವರದಿಗಳಾಗಿವೆ.

    ಅದರಂತೆಯೇ ಕಳೆದ ವರ್ಷ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಪೊಲೀಸ್ ಠಾಣಾ ಸರಹದ್ದಿನ ಹೊಸಹಳ್ಳಿ ಗ್ರಾಮದ ಹಳೆಯ ಮನೆಯ ಕಾಂಪೌಂಡಿನಲ್ಲಿ ಗಾಂಜಾ ಬೆಳೆದು ಪೊಲೀಸರಿಗೆ ಸಿಕ್ಕಿ ಬಿದ್ದು ಒಂದೂವರೆ ತಿಂಗಳ ಕಾಲ (52 ದಿನ) ಜೈಲು ವಾಸ ಅನುಭವಿಸಿ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

    ಇದೀಗ ಮಿಡಿಗೇಶಿ ಪೋಲಿಸ್ ಠಾಣಾ ವ್ಯಾಪ್ತಿಯ ಗರಣಿ ಗ್ರಾಪಂಗೆ ಸೇರಿದ ಬಡಯ್ಯನ ಗೊಲ್ಲರಹಟ್ಟಿ ಗ್ರಾಮದ ಬಣ್ಣದ ನಾಗಪ್ಪನ ಮಗ ಪಾಪಣ್ಣ ಸ.ನಂ.39 ದೊಡ್ಡಕ್ಕ ಕೋಂ ನಾಗಪ್ಪನವರ ಹೆಸರಿನಲ್ಲಿರುವ ಜಮೀನಿನಲ್ಲಿ ಕನಕಾಂಬರ ಹೂವಿನ ತೋಟದಲ್ಲಿ ಹತ್ತಕಿಂತ ಹೆಚ್ಚಿನ ಗಾಂಜಾ ಗಿಡಗಳನ್ನು ಬೆಳೆಸಿರುವ ಬಗ್ಗೆ ವರದಿಯಾಗಿದೆ. ಗಾಂಜಾ ಗಿಡಗಳನ್ನು ಮಿಡಿಗೇಶಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಂಜಾ ಬೆಳೆದಿರುವ ಜಮೀನಿಗೆ ಡಿವೈಎಸ್‍ಪಿ ಪ್ರವೀಣ್, ಸಿಪಿಐ ಸರ್ದಾರ್ ಭೇಟಿ ನೀಡಿದ್ದಾರೆ. ಪಿಎಸ್‍ಐ ಹನುಮಂತರಾಯಪ್ಪ ಪ್ರಕರಣ ದಾಖಲಿಸಿದ್ದಾರೆ. ಜಮೀನಿನ ಮಾಲೀಕ ತಲೆ ಮರೆಸಿ ಕೊಂಡಿರುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link