ಹಾವೇರಿ:
ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸಲು ಒಂದೇ ಭಾರತ ಒಂದೇ ತುರ್ತು ಕರೆ 112 ಸಹಾಯವಾಣಿ ಸಂಖ್ಯೆ ಇದೇ ಅಕ್ಟೋಬರ್ 1ರಿಂದ ಜಿಲ್ಲೆಯಲ್ಲಿ ಆರಂಭಗೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ ದೇವರಾಜು ಅವರು ತಿಳಿಸಿದರು.
ಒಂದೇ ಭಾರತ ಒಂದೇ ತುರ್ತು ಕರೆ ಪರಿಕಲ್ಪನೆಯ ತುರ್ತು ಸ್ಪಂದನಾ ಬೆಂಬಲ ವ್ಯವಸ್ಥೆಯನ್ನು ಕೇಂದ್ರ ಗೃಹ ಇಲಾಖೆ ಜಾರಿಗೆ ತಂದಿದೆ. ರಾಜ್ಯದ ಮೂರು ಜಿಲ್ಲೆಗಳಲ್ಲಿ ಪ್ರ್ರಾಯೋಗಿಕವಾಗಿ ಜಾರಿಯಾಗಿದೆ, ಇದರಲ್ಲಿ ಹಾವೇರಿ ಜಿಲ್ಲೆ ಒಳಗೊಂಡಿದೆ ಇನ್ನು ಮುಂದೆ ಜಿಲ್ಲೆಯ ಸಾರ್ವಜನಿಕರು ತುರ್ತು ಕರೆಗಾಗಿ ಪೊಲೀಸ್ ನೆರವು ಪಡೆಯಲು 112 ಸಂಖ್ಯೆಗೆ ಡಯಲ್ ಮಾಡಲು ಮನವಿ ಮಾಡಿಕೊಂಡರು
ಪೊಲೀಸ್ ನೆರವು, ಅಗ್ನಿಶಾಮಕದಳದ ನೆರವು ಅಥವಾ ಅಂಬ್ಯುಲೆನ್ಸ್ ಸೇವೆ ಸೇರಿದಂತೆ ಯಾವುದೇ ತುರ್ತು ಸಂದರ್ಭದಲ್ಲಿ ನೂತನವಾದ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಸಾಕು (ಇಆರ್‍ಎಸ್‍ಎಸ್) ಎಮೆರ್ಜೆನ್ಸಿ ರಸ್ಪಾನ್ಸ್ ಸಪೋರ್ಟ್ ಸಿಸ್ಟಂ ವ್ಯವಸ್ಥೆಯಡಿ ಎಲ್ಲಿಂದಲೇ ಕರೆ ಬಂದರೂ ತುರ್ತಾಗಿ ಅಲ್ಲಿಗೆ ತಲುಪಿಸಿ ರಕ್ಷನೆ ಇದಗಿಸಲು ಅನುಕೂಲವಾಗಲಿದೆ, 112ಕ್ಕೆ ಕರೆ ಮಾಡಿದರೆ ನೇರವಾಗಿ ಬೆಂಗಳೂರಿನಿಂದ ಏಕಿಕೃತ ತುರ್ತು ಸ್ಪಂದನಾ ಕೇಂದ್ರದ ಮೂಲಕ ಜಿಲ್ಲಾ ಸಮನ್ವಯ ಕೇಂದ್ರಕ್ಕೆ ಸಂಪರ್ಕಿಸಲಾಗುತ್ತದೆ. ಕರೆ ಸ್ವೀಕರಿಸಿದ ತಕ್ಷಣ ಘಟನಾ ಸ್ಥಳಕ್ಕೆ 15 ರಿಂದ 17 ನಿಮಿಷದಲ್ಲಿ ವಾಹನ ಅಲ್ಲಿಗೆ ತಲುಪುತ್ತದೆ ಎಂದು ತಿಳಿಸಿದರು.
ಜಿಲ್ಲೆಗೆ ಈ ಉದ್ದೇಶಕ್ಕಾಗಿ 14 ಬೀಟ್ ವಾಹನಗಳನ್ನು ಪೂರೈಸಲಾಗಿದೆ. ಒಂದು ವಾಹನದಲ್ಲಿ ಒಬ್ಬ ಎಎಸ್‍ಐ, ಒಬ್ಬ ಕಾನ್ಸ್‍ಟೇಬಲ್ ಹಾಗೂ ವಾಹನ ಚಾಲ ಸೇರಿ ಮೂರು ಜನ ಸಿಬ್ಬಂಧಿಗಳಿರುತ್ತಾರೆ, ಘಟನಾ ಸ್ಥಳದಲ್ಲಿ ಸಂರಕ್ಷಣಾ ಸಲಕರಣೆಗಳು ವಾಹದಲ್ಲಿರುತ್ತವೆ. ಹೈವೆ ಪೊಲೀಸ್, ಎಸ್ಪಿ, ಡಿವೈಎಸ್ಪಿ, ಸಿಪಿಐ, ಪಿಎಸ್‍ಐ ಸಮನ್ವದಿಂದ ಕಾರ್ಯನಿರ್ವಹಿಸುತ್ತಾರೆ.
30 ಜನ ಪುರುಷ, 4 ಜನ ಮಹಿಳಾ ಪೊಲೀಸ್ ಸಿಬ್ಬಂಧಿಗಳಿಗೆ ತರಬೇತಿ ನೀಡಲಾಗಿದೆ. ದಿನದ 24 ತಾಸುಗಳು ನಿರಂತರವಾಗಿ 2 ಪಾಳೆಯದಲ್ಲಿ ಪ್ರಾಯೋಗಿಕವಾಗಿ ಚಟುವಟಿಕೆ ಪ್ರಾರಂಭವಾಗಿದೆ ಎಂದು ತಿಳಿಸಿದರು.ಪ್ರತಿ ಚಟುವಟಿಕೆಯು ದಾಖಲಾಗುತ್ತದೆ, ಕರೆ ಸ್ವೀಕರಿಸಿದ ಎಷ್ಟು ಸಮಯಕ್ಕೆ ತಲುಪಲಾಗಲಿದೆ ಎಂಬ ಮಾಹಿತಿ ದಾಖಲಾಗುತ್ತದೆ, ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ವಾಹನದಲ್ಲಿ ಡಿಜಿಟಲ್ ತಂತ್ರಜ್ಞಾನದ ನೆರವು ಒದಗಿಸಲಾಗಿದೆ, ಕರೆ ಮಾಡಿದ ವ್ಯಕ್ತಿಯ ಸ್ಥಳವನ್ನು ಗುರುತಿಸುವ ತಂತ್ರಜ್ಞಾನ ಅಳವಡಿಸಲಾಗಿದೆ, ಇದರಿಂದ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಅನುಕೂಲವಾಗಲಿದೆ ಇನ್ನು ಮುಂದೆ ಕಂಟ್ರೋಲ್ ರೂಮ್ ಸಂಖ್ಯೆ 108 ಸಹಾಯವಾಣಿ ಸಂಖ್ಯೆ ನೂತನ ಸಹಾಯವಾಣಿ ಸಂಖ್ಯೆ112ರಲ್ಲಿ ವಿಲಿನವಾಗಲಿದೆ, ಯಾವುದೇ ಸಮ್ಸಯೆ ಇದ್ದರು ಸಾರ್ವಜನಿಕರು 112ಕ್ಕೆ ಕರೆ ಮಾಡಬವಹುದು ಎಂದು ತಿಳಿಸಿದರು.
ನೂತನ ಸಹಾಯವಾಣಿಯ ನೆರವು ಪಡೆಯುಯವ ಕುರಿತಂತೆ ಪೊಲೀಸ್ ಸಿಬ್ಬಂಧಿಗಳು ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಸಭೆ ನಡೆಸಿ ಅಲ್ಲಿ ಕರಪತ್ರಗಳನ್ನು ಹಂಚುವುದು ಮತ್ತು 112 ಸಹಾಯವಾಣಿ ಸಂಖ್ಯೆಯನ್ನು ಜನರ ಮೊಬೈಲ್‍ಗಳಲ್ಲಿ ಸೇವ್ ಮಾಡುವುದರ ಬಗ್ಗೆ ಜಾಗೃತಿ ಮಾಡಲಾಗುತ್ತಿದೆ. ಎಲ್ಲಾ ಅಪಘಾತ ಸಂದರ್ಭದಲ್ಲಿ 112 ವಾಹನ ಸಹಾಯ ಕಲ್ಪಿಸುತ್ತದೆ. ಪ್ರಾರಂಭಿಕ ಹಂತದಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸಿ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ತಿಳಿಸಿದರು.
ಸೇವೆ ಪಡೆಯುವ ಬಗೆ: 112 ತುರ್ತು ಸಹಾಯವಾಣಿ ನೆರವು ಪಡೆಯಲು ನೇರ ಕರೆ ಮಾಡಬಹುದು, ಅಥವಾ ಗೂಗಲ್ ಪ್ಲೇ ಸ್ಟೋರ್ ಮತ್ತು ಐಓಎಸ್ ಆ್ಯಪ್ ಸ್ಟೋರ್‍ನಲ್ಲಿ ಕೆಪಿಎಸ್ ಎಂದು ಹುಡುಕಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
