ನವದೆಹಲಿ :
ಯಾಹೂ ಡಾಟ್ ಕಾಮ್ ಇದೀಗ ತೀವ್ರ ನಷ್ಟ ಅನುಭವಿಸುತ್ತಿದ್ದು, ಇನ್ನೆರಡು ತಿಂಗಳಿನಲ್ಲಿ ಮುಚ್ಚಲಿದೆ ಎಂದು ಯಾಹೂ ಡಾಟ್ ಕಾಮ್ ಒಡೆತನದಲ್ಲಿ ಇರುವ ವೆರಿಜೋನ್ ಈ ವಿಷಯವನ್ನ ಪ್ರಕಟಿಸಿದೆ.
ಹೌದು, ಕಳೆದ ಹಲವಾರು ವರ್ಷಗಳಿಂದ ಬಳಕೆದಾರರ ಕೊರತೆಯಿಂದಾಗಿ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 15ರಿಂದ ಈ ಇ- ಮೇಲ್ ಸ್ಥಗಿತಗೊಳಿಸಲಾಗುವುದು ಎಂದು ಹೇಳಿದೆ.
ಈ ಹಿಂದೆ 2017ರಲ್ಲಿ ವೆರಿಜೋನ್ ಕಂಪೆನಿ ಯಾಹೂವನ್ನ ಖರೀದಿ ಮಾಡಿತ್ತು. ಜಿ-ಮೇಲ್‌ಗಳ ಅಬ್ಬರದಿಂದ ಇ- ಮೇಲ್‌ಗಳ ಬಳಕೆ ಮಾಡುವವರಿಲ್ಲ ಎನ್ನುವಂತಾಗಿದೆ. ಹಿಂದೊಮ್ಮೆ ಅತಿದೊಡ್ಡ ಸಂದೇಶ ಬೋರ್ಡ್ ಎಂದೇ ಪ್ರಸಿದ್ಧಿ ಪಡೆದಿದ್ದ ಯಾಹೂ ಇದೀಗ ತನ್ನ ಆಟ ಮುಗಿಸಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
