ಚೇಳೂರು
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದ ಆರೋಪಿಗಳಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗುರ್ಲಾನಿಗೆ ಜಾಮೀನು ನೀಡಬೇಕು ಹಾಗೂ ಡಿಜೆಹಳ್ಳಿ ಮತ್ತು ಕೆಜಿಹಳ್ಳಿ ಪ್ರಕರಣದ ಆರೋಪಿಗಳಿಗೂ ಜಾಮೀನು ನೀಡಬೇಕು ಇಲ್ಲದಿದ್ದರೆ ಕೋರ್ಟ್ ಅನ್ನೆ ಸ್ಪೋಟಿಸುವುದಾಗಿ ಕೀಡಿಗೇಡಿಗಳು ಗುಬ್ಬಿ ತಾಲ್ಲೂಕು ಚೇಳೂರಿನ ಅಂಚೆ ಕಚೇರಿಯಿಂದ ಪಾರ್ಸೆಲ್ ಕಳಿಹಿಸಿದ್ದ ಮಾಹಿತಿ ವರದಿಯಾಗಿದೆ.
ಆ ಪಾರ್ಸೆಲ್ ಆ 11 ರಂದು ಸಂಜೆ 4.15 ರ ಸುಮಾರಿಗೆ ಸಿಟಿ ಸಿವಿಲ್ ಕೋರ್ಟ್ ಅವರಣದಲ್ಲಿರುವ 16 ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶರಾದ ಸೀನಪ್ಪ ಅವರ ಕಚೇರಿಗೆ ಪಾರ್ಸೆಲ್ವೊಂದು ಬಂದಿದ್ದು ಅದರ ಹಿನ್ನೇಲೆಯಲ್ಲಿ ಶೀಘ್ರವೇ ತನಿಖಾಧಿಕಾರಿಗಳ ತಂಡ ಅರೋಪಿಗಳ ಪತ್ತೆಗೆ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಂಡು ನಂತರ ಕಾರ್ಯಚರಣೆಯಲ್ಲಿ ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿ ಹರಿವೇಸಂದ್ರ ಗ್ರಾಮದ ರಮೇಶ್. ಶಿವಕುಮಾರ್. ಹಾಗಲಾವಾಡಿಯ ವೇದಾಂತ್ ತಿಪಟೂರು ತಾಲ್ಲೂಕಿನ ಲಿಂಗದಹಳ್ಳಿಯ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ ರಾಜಶೇಖರ್ನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ರಾಜಶೇಖರ್ ಮೇಲೆ ಚೇಳೂರು ಪೊಲೀಸ್ ಠಾಣೆ ದಿನಾಂಕ 2.5.2019 ರಲ್ಲಿ 2012 ಪೋಸ್ಕೋ ಕಾಯ್ದೆ 8 ಸಿ ಮತ್ತು ಕಲಂ ಪಿಯಲ್ಲಿ ಪ್ರಕರಣ ದಾಖಲಾಗಿದೆ.
ಹಿನ್ನೆಲೆ
ರಾಜಶೇಖರ್ ಹಾಗಲವಾಡಿ ಹೊಬಳಿ ಕುರೇಹಳ್ಳಿ ಗ್ರಾಮದ ಬಸವಲಿಂಗಯ್ಯ ನವರ ಮೊದಲ ಹೆಂಡತಿಯ ಮಗಳನ್ನು ಮದುವೆಯಾಗಿದ್ದು ಲಿಂಗದಹಳ್ಳಿಯಲ್ಲಿ ವಾಸಸಿತ್ತಿದ. ತನ್ನ ಮಾವನ ಜೊತೆಗೆ ವಾಸ ಮಾಡುತ್ತಿದ್ದ ಎರಡನೇ ಹೆಂಡತಿ ಹಾಗೂ ಮಗಳನ್ನು[ನಾದಿನಿ] ಇರುವ ಮನೆ ತೊಟದಲ್ಲಿದ್ದು ಶಾಲೆಗೆ ದೂರವಿದ್ದುದ್ದರಿಂದ ಪ್ರತಿ ದಿನ ಶಾಲೆಗೆ ಓಡಾಡಲು ತೊಂದರೆಯಾಗುತ್ತಿದ ಕಾರಣ ನಾದಿನಿಯನ್ನು 8ನೇ ತರಗತಿಯಿಂದ 10 ನೇ ತರಗತಿಯವರೆಗೂ ವಿದ್ಯಾಭ್ಯಾಸ ಸಲುವಾಗಿ ತನ್ನ ಗ್ರಾಮವಾದ ಲಿಂಗದಹಳ್ಳಿಗೆ ಕರೆದುಕೊಂಡು ವ್ಯಾಸಂಗವನ್ನ ಮಾಡಿಸುತ್ತಿದ್ದ.
ಮದುವೆಯಾಗು ಎಂದು ನಾದಿನಿಗೆ ಕಿರುಕುಳ ನೀಡುತ್ತಿದ್ದ, ಕುಡಿದು ಬಂದು ಹೊಡೆಯುವುದು, ಕೆಟ್ಟದಾಗಿ ವರ್ತಿಸುವುದು, ಪರೀಕ್ಷೆ ಸಮಯದಲ್ಲಿ ಹೊಡೆದು ರಾತ್ರಿ ವೇಳೆ ಅಚೆ ಹಾಕಿದ್ದು ಹೇಗೆ ಅನೇಕ ರೀತಿಯಿಂದ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಅಂದಿನ ಮಹಿಳಾ ಸಂರಕ್ಷಣಾಧಿಕಾರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನೊಂದ ಹುಡುಗಿ ಹೇಳಿಕೆ ನೀಡಿದ್ದು ಇದರ ಬಗ್ಗೆ ಚೇಳೂರು ಪೊಲೀಸ್ ಠಾಣೆಯಲ್ಲಿ 2.5.2019 ರಲ್ಲಿ 2012ರ ಪೋಸ್ಕೋ ಕಾಯ್ದೆ 8 ಸಿ ಮತ್ತು ಕಲಂ ಪಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ನಾದಿನಿಗೆ ಹರವೇಸಂದ್ರ ಗ್ರಾಮದ ರಮೇಶ್ ಎಂಬುವವರ ಜೊತೆಗೆ ಮದುವೆಯಾಗಿದ್ದು ನಾದಿನಿ ಹಾಗು ಆಕೆಯ ಗಂಡನ ಮೇಲಿನ ದ್ವೇಷದ ಮೇಲೆ ಅವರ ಹೆಸರಿನ ಅಧಾರ್ ಕಾರ್ಡ್ ಬಳಿಸಿಕೊಂಡು ಇಂತಹ ಕೃತ್ಯವನ್ನು ನಡೆಸಿದ್ದ ಎನ್ನಾಲಾಗಿದೆ. ಇನ್ನೂ ಹೆಚ್ಚಿನ ತನಿಖೆಯ ನಂತರ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








