ಭಾರತ್ ಬಂದ್; ರೈತರೊಂದಿಗೆ ಮಾತನಾಡಲು ಸಿದ್ಧರಾದ ಅಮಿತ್​ ಷಾ!!

ನವದೆಹಲಿ : 

     ದೇಶಾದ್ಯಂತ ರೈತ ಹೋರಾಟದ ಕಿಚ್ಚು ಹೆಚ್ಚಾಗುತ್ತಿದ್ದಂತೆಯೇ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ರೈತರೊಂದಿಗೆ ಸಭೆ ನಡೆಸಲು ಮುಂದಾಗಿದ್ದಾರೆ. 

     ಕೇಂದ್ರ ಸರ್ಕಾರದ ವಿವಾದಾತ್ಮಕ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ದೇಶದ   ತರು ಕರೆ ಕೊಟ್ಟಿರುವ “ದೆಹಲಿ ಚಲೋ” ಹೋರಾಟ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ಈ ನಡುವೆ ಇಂದು ಕರೆ ನೀಡಲಾಗಿದ್ದ ಭಾರತ್​ ಬಂದ್​ ಸಹ ಯಶಸ್ವಿಯಾಗಿದೆ.

    ಪ್ರತಿಭಟನೆಯ ನಡುವೆಯೂ ಸರ್ಕಾರ ಮತ್ತು ರೈತ ಹೋರಾಟಗಾರರ ನಡುವೆ ಈವರೆಗೆ ಐದು ಬಾರಿ ಮಾತುಕತೆ ನಡೆದಿದೆ. ಆದರೆ, ಈವರೆಗೆ ಯಾವ ಮಾತುಕತೆಯೂ ಫಲ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಸ್ವತಃ ಗೃಹ ಸಚಿವ ಅಮಿತ್​ ಶಾ ಇಂದು ಸಂಜೆ ರೈತರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ.

     ಅಮಿತ್​ ಷಾ ಅವರಿಂದ ಕರೆ ಬಂದಿದ್ದು, ಡಿಸೆಂಬರ್​ 8ರ ಸಂಜೆ 7ಕ್ಕೆ ಸಭೆ ಸೇರಲು ಕೋರಲಾಗಿದೆ ಎಂದು ರೈತ ಮುಖಂಡ ರಾಕೇಶ್ ಟಿಕೈಟ್ ಅವರು ತಿಳಿಸಿದ್ದಾರೆ. ವಿವಿಧ ರೈತ ಸಂಘಟನೆಗಳ ಮುಖಂಡರು ಈ ಸಭೆಯಲ್ಲಿ ಭಾಗವಹಿಸುವುದಾಗಿ ಅವರು ಮಾಹಿತಿ ನೀಡಿದ್ದಾರೆ.

     ಭಾರತ್​ ಬಂದ್ ಬೆನ್ನಿಗೆ ಸಚಿವ ಅಮಿತ್​ ಶಾ ಅವರ ಈ ನಡೆ ಇದೀಗ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link