ಕೊರೊನಾ ನಿನ್ನೆ ನೆಗೆಟಿವ್ ಇಂದು ಪಾಸಿಟಿವ್ ; ಜನತೆಯಲ್ಲಿ ಮೂಡಿದ ಗೊಂದಲ!!

ಮಿಡಿಗೇಶಿ : 

      ಆರೋಗ್ಯ ಇಲಾಖೆಯ ಸುತ್ತೋಲೆ ಪ್ರಕಾರ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸೇರಿದ ಚಿನ್ನೇನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ವೀರಚಿನ್ನೇನಹಳ್ಳಿ ಗ್ರಾಮದ ವೀರಕ್ಯಾತಯ್ಯ ಮತ್ತು ಈತನ ಸಹೋದರಿ ಈರಮ್ಮ ಕೋಂ ಅಶ್ವತ್ಥಪ್ಪ ಇವರದು ಕೊರೋನಾ ಸೋಂಕು ನೆಗೆಟಿವ್ ಬಂದಿದ್ದು, ಆರೋಗ್ಯ ಇಲಾಖೆ ದಾಖಲೆ ಬಿಡುಗಡೆ ಮಾಡಿತ್ತು.

     ಆದರೆ ದಿಢೀರನೆ ಗ್ರಾಪಂ ಅಭಿವೃದ್ದಿ ಅಧಿಕಾರಿಯು ವೀರಕ್ಯಾತಯ್ಯ ಹಾಗೂ ಈರಮ್ಮರವರಿಗೆ ದೂರವಾಣಿ ಕರೆ ಮಾಡಿ ನಿಮ್ಮಿಬ್ಬರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ನೀವುಗಳು ಡಿ.27ರಂದು ನಡೆಯುವ ಗಾಪಂ ಚುನಾವಣೆಯಲ್ಲಿ ಮತದಾನ ಮಾಡುವಾಗ ಪಿಪಿ ಕಿಟ್‍ನ್ನು ಧರಿಸಿಕೊಂಡು ಬಂದು ಮತದಾನ ಮಾಡಬೇಕೆಂದು ತಿಳಿಸಿದ್ದಾರೆ.

     ಅವರ ಹೇಳಿಕೆಯಂತೆಯೇ ವೀರಕ್ಯಾತಯ್ಯ ಮತ್ತು ಈರಮ್ಮ ಕೋಂ ಅಶ್ವತ್ಥಪ್ಪ ಪಿಪಿ ಕಿಟ್ ಧರಿಸಿಕೊಂಡು ಮತ ಚಲಾವಣೆ ಮಾಡಿರುತ್ತಾರೆ. ಆರೋಗ್ಯ ಇಲಾಖೆಯವರು ಸೋಂಕು ಕುರಿತು ಮೊದಲ ದಿನ ನೆಗೆಟಿವ್ ವರದಿ ನೀಡಿದ್ದು, ಎರಡನೆ ದಿನವಾಗಲೇ ಪಾಸಿಟಿವ್ ವರದಿ ನೀಡಿರುತ್ತಾರೆ. ಇದರಲ್ಲಿ ಯಾವುದು ಸರಿ? ಯಾವುದು ತಪ್ಪು ಎನ್ನುವುದರ ಬಗ್ಗೆ ನಾಗರಿಕರಲ್ಲಿ ಗೊಂದಲ ಉಂಟಾಗಿದೆ. ಆರೋಗ್ಯ ಇಲಾಖೆಯು ಜನತೆಯ ಈ ಗೊಂದಲವನ್ನು ಪರಿಹರಿಸಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link