ಹುಳಿಯಾರು :
ಹುಳಿಯಾರು ಪಟ್ಟಣ ಪಂಚಾಯ್ತಿ ಚುನಾವಣೆಗೆ ಅಮ್ ಆದ್ಮಿ ಪಕ್ಷ ಹಾಗೂ ರೈತ ಸಂಘದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಅಮ್ ಆದ್ಮಿ ಪಕ್ಷದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಮುಖಂಡ ಸಾಸಲು ನಿಂಗರಾಜು ತಿಳಿಸಿದ್ದಾರೆ.
ಹುಳಿಯಾರು ಕೋಡಿಪಾಳ್ಯದ ಧ್ಯಾನನಗರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿ ಹುಳಿಯಾರಿನ 16 ವಾರ್ಡ್‍ಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಅಮ್ ಆದ್ಮಿ ಪಕ್ಷ ಇಚ್ಚಿಸಿದೆ. ಈಗ 7 ನೇ ವಾರ್ಡ್‍ಗೆ ದಾಸಪ್ಪ ಅವರು ಕಣಕ್ಕಿಳಿಯಲು ಆಸಕ್ತಿ ಹೊಂದಿರುವುದರಿಂದ ಅವರನ್ನು ಎಎಪಿ ಪಕ್ಷದಿಂದ ಚುನಾವಣೆಗೆ ಕಣಕ್ಕಿಳಿಸುವುದಾಗಿ ತಿಳಿಸಿದ್ದಾರೆ.
ಅಮ್ ಆದ್ಮಿ ಪಕ್ಷದ ಧ್ಯೇಯವೇ ಚುನಾವಣೆಗೆ ಹಣ ಹಂಚುವುದಿಲ್ಲ, ಗೆದ್ದ ಮೇಲೆ ಹಣ ದೋಚುವುದಿಲ್ಲ ಎನ್ನುವುದಾಗಿದೆ. ಹಾಗಾಗಿ ಕ್ರೇಜಿವಾಲ್ ಅವರು ಯಾವುದೇ ಕಪ್ಪುಚುಕ್ಕಿ ಇಲ್ಲದೆ ದೆಹಲಿಯನ್ನು ಅಭಿವೃದ್ಧಿ ಪಡಿಸಿದ ರೀತಿಯಲ್ಲಿ ಹುಳಿಯಾರು ಪಟ್ಟಣವನ್ನು ಅಭಿವೃದ್ಧಿ ಪಡಿಸುವ ಕನಸು ಕಂಡಿರುವವರು ಸ್ಪರ್ಧಿಸಲು ಇಚ್ಚಿಸಿದರೆ ಅಮ್ ಆದ್ಮಿ ಪಕ್ಷದಿಂದ ಟಿಕೆಟ್ ಕೊಡಲಾಗುವುದು. ಅಲ್ಲದೆ ವಿಭಿನ್ನ ರೀತಿಯಲ್ಲಿ ಪ್ರಚಾರ ಸಹ ಮಾಡಿ ಮತದಾರರ ಮನವೊಲಿಸುವ ಕಾರ್ಯ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆಂಕೆರೆ ಸತೀಶ್, ಅಮ್ ಆದ್ಮಿ ಪಕ್ಷದ ಪ್ರಸನ್ನಕುಮಾರ್, ರೈತ ಮುಖಂಡರಾದ ಮಲ್ಲಿಕಾರ್ಜುನ್, ಬನಶಂಕರಯ್ಯ, ಮರುಳಸಿದ್ಧಪ್ಪ, ಶಿವಣ್ಣ, ಪಾತ್ರೆ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ