ಸಭೆಗೆ ಬಾರದ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ; ನಿಗಧಿಯಾಗಿದ್ದ ಸಭೆ ರದ್ದು!!

 ಮಿಡಿಗೇಶಿ :

     ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹಾಗೂ ಬೇಡತ್ತೂರು ಗ್ರಾ.ಪಂ ಗೆ ಸೇರಿದ ನಾರಪನಪನಹಳ್ಳಿ ಗ್ರಾಮಗಳನ್ನು ಜಿಲ್ಲಾ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳ ವರ್ಗ ಮೈಕ್ರೋ ಕಂಟೈನ್‍ಮೆಂಟ್ ಝೋನ್ ಗ್ರಾಮಗಳೆಂದು ತಾಲ್ಲೂಕಿನಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರನ್ನೊಳಗೊಂಡ ಗ್ರಾಮಗಳೆಂದು ಗುರ್ತಿಸಿದ್ದು ಸದರಿ ಗ್ರಾಮಗಳಲ್ಲಿ ತಾ 25-05-2021 ರಂದು “ವೈದ್ಯರ ನಡೆ ಹಳ್ಳಿಯ ಕಡೆ’’ ಎಂಬುದಾಗಿ ಘೋಷಿಸಿದ್ದು ಸರಿಯಷ್ಠೇ ಸದರಿ ಕಾರ್ಯಕ್ರಮದ ಬಗ್ಗೆ ಮೊದಲಿಗೆ ಮಿಡಿಗೇಶಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಟಾಸ್ಕ್ ಫೋರ್ಸ್ ಸಭೆಯನ್ನು ನಿಗಧಿ ಪಡಿಸಲಾಗಿತ್ತು.

      ಸದರಿ ಸಭೆಗೆ ವೈದ್ಯಾಧಿಕಾರಿ ಡಾ|| ಬಾಲಾಜಿ, ಸುರೇಶ್ ಬಾಬು ಹೆಲ್ತ್ ಇನ್ಸ್ ಪಕ್ಟರ್, ಉಪತಹಶೀಲ್ದಾರ್ ಡಾ|| ಗೌತಮ್, ಕಂದಾಂiÀi ತನಿಖಾಧಿಕಾರಿ ವೇಣುಗೋಪಾಲ್, ಕಮಲಮ್ಮ ಕಿರಿಯ ಆರೋಗ್ಯ ಸಹಾಯಕಿ, ಗ್ರಾಮಲೆಕ್ಕಿಗ ಹರೀಶ್, ಪಿ.ಡಿ.ಓ ಜುಂಜೇಗೌಡ, ಮಂಜುನಾಥ್ ನೋಡಲ್ ಅಧಿಕಾರಿ, ಎ.ಎನ್,ಎಂ ಗಳಾದ ನಾಗಮಣಿ, ಸಂದ್ಯಾ ಹಾಗೂ ಈ ಭಾಗದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ನೌಕರ ವರ್ಗ, ಎಲ್ಲರೂ ಸಭೆಗೆ ಆಗಮಿಸಿದರು ಕೆಲ ಸಮಯ ಕಾಲಕಳೆದರು ಇನ್ನೇನು ಸಭೆ ಪ್ರಾರಂಭವಾಗಬೇಕು ಎನ್ನುವಂತಿತ್ತು. ಸಭೆಗೆ ಅತಿಮುಖ್ಯವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರು ಬರಲೇ ಇಲ್ಲ ಸ್ವಲ್ಪ ಸಮಯ ಕಾದು ನೋಡಿದರು ತದನಂತರ ಟಾಸ್ಕ್ ಫೋರ್ಸ್ ಸಭೆಯನ್ನು ರದ್ದು ಪಡಿಸಿ ಸಭೆಗೆ ಆಗಮಿಸಿದ್ದ ಈ ಮೇಲ್ಕಂಡ ಅಧಿಕಾರಿಗಳವರು ಬಂದ ದಾರಿಗೆ ಸುಂಕ ಇಲ್ಲವೆಂದು ವಾಪಸ್ಸಾಗುವುದು ಅನಿವಾರ್ಯವೂ ಆಗಿತ್ತು, ತದನಂತರ ಮಿಡಿಗೇಶಿ ಗ್ರಾಮದಲ್ಲಿ ಕೊರೊನಾ ಕಾಯಿಲೆಯಿಂದ ಸೋಂಕಿತರ, ಪಾಸಿಟಿವ್ ಬಂದು ಗುಣಮುಖರಾಗಿ ಬಂದಂತಹವರು ಇತ್ಯಾದಿಗಳವರ ಮನೆ ಮನೆ ಭೇಟಿ ನೀಡಿ ಕೊರೊನಾ ಬಗ್ಗೆ ಅನುಸರಿಸಬೇಕಾದ ಕಟ್ಟು ನಿಟ್ಟಿನ ಸರ್ಕಾರದ ಸುತ್ತೋಲೆಗಳ ಬಗ್ಗೆ ತಿಳುವಳಿಕೆ ನೀಡಿದರು.

     ಅಧ್ಯಕ್ಷಿಣಿ ಮತ್ತು ಉಪಾಧ್ಯಕ್ಷರು ಮೇ 25 ರಂದು ಟಾಸ್ಕ್ ಫೋರ್ಸ್ ಸಭೆಗೆ ಬಾರದಿರಲು ಕಾರಣ ತಾ 24-05-2021 ರಂದು ಪಿ.ಡಿ.ಓ ರವರು ವಾಟ್ಸಾಪ್ ಮೂಲಕ ಮೇ 25 ರಂದು ಮಿಡಿಗೇಶಿ ಗ್ರಾ.ಪಂ ಕಟ್ಟಡ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಟಾಸ್ಕ್ ಫೋರ್ಸ್ ಸಭೆಗೆ “ವೈದ್ಯರ ನಡೆ ಹಳ್ಳಿಯ ಕಡೆಗೆ’’ ಮಾನ್ಯ ಟಾಸ್ಕ್ ಫೋರ್ಸ್ ಸಮಿತಿಯ ಎಲ್ಲಾ ಸದಸ್ಯರು ಹಾಜರಾಗುವಂತೆ ತಿಳಿಸಿದ್ದು ಸದರಿ ಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರ ಹೆಸರನ್ನಾಗಲೀ ನಮೂದಿಸದೆಯೇ ಕಾಟಾಚಾರಕ್ಕೆ ಎಲ್ಲಾ ಸದಸ್ಯರಿಗೆ ತಿಳಿಸದಂತೆ ಅಧ್ಯಕ್ಷ-ಉಪಾಧ್ಯಕ್ಷರನ್ನು ಕಡೆಗಣಿಸಿ ಅವಮಾನಿಸಲಾಗಿದೆ ಎಂಬುದಾಗಿ ಸದರಿ ಸಭೆಗೆ ಗೈರುಹಾಜರಾಗಿರುತ್ತಾರೆಂಬುದಾಗಿ ತಿಳಿದು ಬಂದಿದೆ, ಅಧ್ಯಕ್ಷರನ್ನು ಪತ್ರಿಕೆ ಪ್ರಶ್ನಿಸಲಾಗಿ ಪಿ.ಡಿ.ಓ ರವರು ನಮ್ಮಗಳ ಗ್ರಾ.ಪಂ ನಲ್ಲಿನ ಅಧಿಕಾರದ ಸ್ಥಾನ ಗುರ್ತಿಸದೇ ವರ್ತಿಸುತ್ತಿರುವುದು ನಮಗೆ ಬೇಸರ ತಂದಿದೆಯೆಂಬುದಾಗಿ ತಿಳಿಸಿರುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link