ರಾಜ್ಯ ‘ಹೈಕೋರ್ಟ್’ ಕಲಾಪ ಇನ್ಮುಂದೆ ‘ಯೂಟ್ಯೂಬ್’ನಲ್ಲಿ ಲೈವ್!!

ಬೆಂಗಳೂರು:

      ಜನಸಾಮಾನ್ಯರೆಲ್ಲರೂ ಯೂಟ್ಯೂಬ್ ಮೂಲಕ ರಾಜ್ಯ ಹೈಕೋರ್ಟ್ ಕಲಾಪವನ್ನು ನೇರಪ್ರಸಾರದ ಮೂಲಕ ವೀಕ್ಷಿಸಬಹುದಾಗಿದೆ. 

      ಇದುವರೆಗೆ ಕರ್ನಾಟಕ ಹೈಕೋರ್ಟ್ ಕಲಾಪ ಅಂದ್ರೆ.. ಕೋರ್ಟ್ ಹಾಲ್ ಗೆ ಮಾತ್ರವೇ ಸೀಮಿತವಾಗಿತ್ತು. ಜನಸಾಮಾನ್ಯರಿಗೆ ಕೋರ್ಟ್ ಕಲಾಪ ವೀಕ್ಷಿಸೋದಕ್ಕೂ ಕಷ್ಟವಾಗಿತ್ತು. 

    ಇದೇ ಮೊದಲ ಬಾರಿಗೆ ಕರ್ನಾಟಕ ಹೈಕೋರ್ಟ್ ಸೋಮವಾರ ಮಧ್ಯಾಹ್ನ 2.40 ಕ್ಕೆ ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಕೋರ್ಟ್ ಹಾಲ್ -1 ರ ಕಲಾಪಗಳನ್ನು ನೇರ ಪ್ರಸಾರ(ಲೈವ್ ಸ್ಟೀಮಿಂಗ್) ಪ್ರಾರಂಭಿಸಿದೆ. 

     ಈ ಬಗ್ಗೆ ರಾಜ್ಯ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದು,  ಇಂದಿನಿಂದ ರಾಜ್ಯ ಹೈಕೋರ್ಟ್ ನ ಕೋರ್ಟ್ ಹಾಲ್ ನಂ.1ರ ಕಲಾಪವನ್ನು ಯೂಟ್ಯೂಬ್ ಮೂಲಕ ನೇರಪ್ರಸಾರ ಮಾಡೋದಕ್ಕೆ ಚಾಲನೆ ನೀಡಿದ್ದಾರೆ. ಹೈಕೋರ್ಟ್ ನ ಕೋರ್ಟ್ ಹಾಲ್ ನಂ.1ರಲ್ಲಿನ ಕಲಾಪದ ನೇರ ಪ್ರಸಾರ ಯೂಟ್ಯೂಬ್ ನಲ್ಲಿ ಆಗಲಿದ್ದು, ಹೈಕೋರ್ಟ್ ಕಲಾಪವನ್ನು ನೀವು ಮನೆಯಲ್ಲಿಯೇ ಕುಳಿತು, ಯೂಟ್ಯೂಬ್ ನಲ್ಲಿ ನೇರ ಪ್ರಸಾರದಲ್ಲಿ ನೋಡಬಹುದಾಗಿದೆ. 

     ಯೂಟ್ಯೂಬ್ ಚಾನೆಲ್‌ನ ಲಿಂಕ್ (https://youtu.be/p-4vySjlTYY) ಅನ್ನು ಹೈಕೋರ್ಟ್ ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link