ಶಿರಾ ಕ್ಷೇತ್ರದ ಶಾಸಕರು ಆಯ್ಕೆಗೊಂಡಿರುವುದು ಎಸ್.ಆರ್.ಗೌಡರ ಭಿಕ್ಷೆ

ಶಿರಾ :

      ಕಳೆದ ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಚುನಾಯಿತರಾಗಿ ಆಯ್ಕೆಯಾದ ಈ ಕ್ಷೇತ್ರದ ಶಾಸಕರು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿರುವುದು ಒಂದು ರೀತಿಯಲ್ಲಿ ಈಗಿನ ರೇಷ್ಮೆ ಅಭಿವೃದ್ಧಿ ಮಂಡಳಿಯಯ ಅಧ್ಯಕ್ಷ ಎಸ್.ಆರ್.ಗೌಡ ರವರ ಭಿಕ್ಷೆ ಇದ್ದಂತೆ ಎಂದು ಬಿಜೆಪಿ ಪಕ್ಷದ ಮುಖಂಡ ಜಗದೀಶ್ ಚೌಧರಿ ಹೇಳಿದರು.

      ನಗರದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ರೇಷ್ಮೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಆರ್.ಗೌಡ ರವರ ಹುಟ್ಟುಹಬ್ಬದ ಅಂಗವಾಗಿ ಯುವಕರ ತಂಡವು ಬುಧವಾರ ಆಯೋಜಿಸಲಾಗಿದ್ದ ಹುಟ್ಟುಹಬ್ಬ ಆಚರಣೆಯ ನಂತರ ಸುದ್ದಿಗಾರರೊಂದಿಗೆ ಜಗದೀಶ್ ಚೌಧÀರಿ ಮಾತನಾಡಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

       ಕಳೆದ 2018 ರ ಶಿರಾ ವಿಧಾನಸಭಾ ಕೇತ್ರದ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ನಾನೂ ಕೂಡ ಬಿಜೆಪಿ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದೆನು. ಆದರೆ ಎಸ್.ಆರ್.ಗೌಡ ನಮಗಿಂತಲೂ ಪ್ರಬಲ ಅಭ್ಯರ್ಥಿ ಎಂದು ತಿಳಿದು ಅವರಿಗೆ ಟಿಕೆಟ್ ನೀಡಿದ ಪರಿಣಾಮ ಅವರನ್ನು ನಾವು ಸಂಪೂರ್ಣವಾಗಿ ಬೆಂಬಲಿಸಿದೆವು. ಆದರೆ ಪಕ್ಷದ ಮುಖಂಡರು ಹೆಚ್ಚಾಗಿ ಅವರ ಬೆಂಬಲಕ್ಕೆ ನಿಲ್ಲಲಿಲ್ಲ. ಇತ್ತೀಚೆಗಷ್ಟೆ ನಡೆದ ಉಪ ಚುನಾವಣೆಯಲ್ಲಿ ಎಸ್.ಆರ್.ಗೌಡ ಮತ್ತೊಮ್ಮ ಪ್ರಬಲ ಆಕಾಂಕ್ಷಿಯಾಗಿದ್ದರು. ಅವರನ್ನು ಆಯ್ಕೆಗೊಳಿಸಲು ನನ್ನಂತಹ ಅನೇಕ ಮಂದಿ ಪಕ್ಷದ ಮುಖಂಡರು ಟೊಂಕಕಟ್ಟಿ ನಿಂತಿದ್ದೆವು. ಆದರೆ ಆಗಿನ ಪರಿಸ್ಥಿತಿಯೆ ಬೇರೆಯಾಗಿತ್ತು. ಡಾ.ಸಿ.ಎಂ.ರಾಜೇಶ್‍ಗೌಡ ಅವರಿಗೆ ಟಿಕೆಟ್ ನೀಡಲಾಯಿತು. ಒಂದು ಹಂತದಲ್ಲಿ ಈಗಿನ ಶಾಸಕರು ಆಯ್ಕೆಯಾಗಿರುವುದು ಎಸ್.ಆರ್.ಗೌಡರವರು ನೀಡಿದ ಒಂದು ರೀತಿಯ ಭಿಕ್ಷೆ ಎಂದರೂ ತಪ್ಪಾಗಲಾರದು ಎಂದು ಜಗದೀಶ್‍ಚೌಧರಿ ತಿಳಿಸಿದ್ದಾರೆ.

      ಎಸ್.ಆರ್.ಗೌಡರಿಗೆ ಮುಂದೆ ಭವಿಷ್ಯವಿದೆ. ನಾವು ಎಲ್ಲೋ ಎಡವಿದ್ದೇವೆ. ಅದನ್ನು ಸರಿಪಡಿಸಿಕೊಳ್ಳುವ ಅಗತ್ಯವೂ ಇದೆ. ಈಗಿನ ಶಿರಾ ಕ್ಷೇತ್ರದ ಶಾಸಕರು ಎಸ್.ಆರ್.ಗೌಡ ಅವರ ರಾಜಕೀಯ ಋಣವನ್ನು ಜೀವಮಾನ ಪರ್ಯಂತ ತೀರಿಸಲಾಗದು ಎಂದು ಜಗದೀಶ್‍ಚೌಧರಿ ಛೇಡಿಸಿದ್ದಾರೆ. ಅವರು ಈ ಹೇಳಿಕೆ ನೀಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಕಳೆದ ಎರಡು ದಿನಗಳಿಂದ ಸಾಕಷ್ಟು ಹರಿದಾಡುತ್ತಿದ್ದು, ಬಿಜೆಪಿ ಪಕ್ಷದಲ್ಲಿ ಅವರ ಈ ಹೇಳಿಕೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link