ದೇಗುಲಗಳಿಗೆ ಮುಕ್ತ ಪ್ರವೇಶ ನೀಡಿ ಅಸ್ಪೃಶತೆ ತೊಲಗಿಸಿ

ಕುಣಿಗಲ್ :

    ದೇವಸ್ಥಾನಗಳಿಗೆ ಸರ್ವ ಜನಾಂಗಕ್ಕೂ ಮುಕ್ತ ಪ್ರವೇಶ ಕಲ್ಪಿಸಿ ಅಸ್ಪೃಶತೆಯನ್ನು ಹೋಗಲಾಡಿಸಲು ಮುಂದಾಗಬೇಕು ಎಂದು ಕುಣಿಗಲ್ ಉಪ ವಿಭಾಗದ ಡಿವೈಎಸ್ಪಿ ರಮೇಶ್ ಅವರು ತಿಳಿಸಿದರು.

     ತಾಲ್ಲೂಕು ಆಡಳಿತ, ಮುಜರಾಯಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಪಟ್ಟಣದ ದಿವ್ಯ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಮುಜರಾಯಿ ದೇವಸ್ಥಾನಗಳಿಗೆ ಎಲ್ಲಾ ಜಾತಿ-ಜನಾಂಗಗಳಿಗೆ ಮುಕ್ತ ಅವಕಾಶ ಕಲ್ಪಿಸಲು ತಾಲ್ಲೂಕು ಆಡಳಿತವು ಹಮ್ಮಿಕೊಂಡಿದ್ದ ಅರ್ಚಕರಿಗೆ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಶತಮಾನಗಳಿಂದ ಅಸ್ಪೃಶ್ಯತೆ ನಿರ್ಮೂಲನೆಗೊಳಿಸಲು ಸರ್ಕಾರ ನಾನಾ ಕಾಯ್ದೆ-ಕಾನೂನುಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದರು.

      ಈ ಸಂದರ್ಭದಲ್ಲಿ ಅರ್ಚಕರುಗಳು ಮಾತನಾಡಿ ಯಾವುದೇ ಜಾತಿ-ಜನಾಂಗವನ್ನು ದೇವಸ್ಥಾನದ ಒಳಗಡೆ ಬರಬಾರದು ಎಂದು ನಾವು ತಾಕೀತು ಮಾಡಿರುವುದಿಲ್ಲ. ಕೆಲ ದಲಿತರು ದೇವಸ್ಥಾನದ ಒಳಗಡೆ ತಾವೇ ಬರುವುದಿಲ್ಲ. ಸರ್ವ ಜನಾಂಗಕ್ಕೂ ಮುಕ್ತ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

     ತಹಶೀಲ್ದಾರ್ ಮಹಾಬಲೇಶ್ವರ ಅವರು ಮಾತನಾಡಿ ಅರ್ಚಕರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ಪೊಲೀಸ್ ವೃತ್ತ ನಿರೀಕ್ಷಕರಾದ ಗುರುಪ್ರಸಾದ್, ಡಿ.ಎಲ್.ರಾಜು, ತಾಲ್ಲೂಕು ಅರ್ಚಕರ ಸಂಘದ ಅಧ್ಯಕ್ಷ ಮೋಹನ್, ಕಾರ್ಯದರ್ಶಿ ಕಾಶಿನಾಥ್ ಉಪಸ್ಥಿತರಿದ್ದರು.

     ಅರ್ಚಕರು ಅಸ್ಪೃಶ್ಯತೆ ವಿರುದ್ಧ ಕೈಜೋಡಿಸಿ : ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ದೇವಸ್ಥಾನಗಳಲ್ಲಿ ಅಸ್ಪೃಶ್ಯತೆ ಆಚರಣೆಯಿಂದ ಪೂಜೆ ಪುನಸ್ಕಾರ ಮಾಡಲು ಇತರೆ ಸಮಾಜದವರು ಅಡ್ಡಿ ಪಡಿಸುತ್ತಿರುವುವ ಬಗ್ಗೆ ಆತಂಕ ವ್ಯಕ್ತಪಡಿಸಿ ಇಂತಹ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಲು ಸಮಾಜದಲ್ಲಿರುವ ಎಲ್ಲಾ ಅರ್ಚಕರು ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಮುಜರಾಯಿ ಇಲಾಖೆಯ ದೇವಸ್ಥಾನಗಳು ಶ್ರೀಮಂತ ದೇವಾಲಯಗಳಾಗಿದ್ದು, ಹೆಚ್ಚಿನ ಭಕ್ತರು ಹಾಗೂ ಹೆಚ್ಚು ಆದಾಯ ದೇವಾಲಯಗಳಿಗೆ ಬರುತ್ತದೆ. ತಮ್ಮ ಯಾವುದೇ ಸಮಸ್ಯೆ ಇದ್ದರೂ ಸಹ ಅವುಗಳನ್ನು ಪರಿಹರಿಸಲು ಪೊಲೀಸ್ ಇಲಾಖೆ ತಾಲ್ಲೂಕಾಡಳಿತ ಇದ್ದು, ಮುಜರಾಯಿ ದೇವಸ್ಥಾನಗಳಲ್ಲಿ ಸಿಸಿ ಕ್ಯಾಮರಾವನ್ನು ಅಳವಡಿಸಿ, ನಾಮಫಲಕ ಅಳವಡಿಸಬೇಕೆಂದು ಡಿವೈಎಸ್ಪಿ ರಮೇಶ್ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap