ಎರಡು ಕ್ಷೇತ್ರದಲ್ಲಿ ಗೆಲ್ಲಲೇಬೇಕು ಸಚಿವ ಸತೀಶ ಜಾರಕಿಹೊಳಿ ಹೇಳಿಕೆ

ಹಾನಗಲ್ಲ :

        ಹಾನಗಲ್ಲ ಹಾಗೂ ಸಿಂಧಗಿ ಚುನಾವಣೆ ನಮ್ಮ ಪಕ್ಷಕ್ಕೂ ಪ್ರತಿಷ್ಟೆಯ ಕಣವಾಗಿದ್ದು, ಈ ಕುರಿತಂತೆ ಹುಬ್ಬಳ್ಳಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮುಖಂಡರ ಸಭೆ ನಡೆಸಿ ಹಲವು ನಿರ್ದೇಶನಗಳನ್ನು ನೀಡಿದ್ದಾರೆ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಹಾನಗಲ್ಲಿನ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಸಾವಿರಾರು ಜನ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಬಿಜೆಪಿಗೆ ಗೆಲ್ಲಬೇಕಾದ ಪ್ರತಿಷ್ಠೆಯಷ್ಟೆ ಕಾಂಗ್ರೇಸ್‍ಗೂ ಕೂಡ ಅನಿವಾರ್ಯತೆಯಿದೆ. ಪಕ್ಷದ ಮುಖಂಡರು ಹಾನಗಲ್ಲಿನಲ್ಲಿ ಠಿಕಾಣಿ ಹೂಡಿ ಮಾನೆಯವರ ಗೆಲುವಿಗೆ ಶ್ರಮವಹಿಸಲಿದ್ದೇವೆ. ತಾಲೂಕ ಪಂಚಾಯತಿಗೆಲ್ಲಾ ಪಂಚಾಯತಿ ವಾರು ಕ್ಷೇತ್ರಗಳನ್ನು ಹಂಚಿಕೊಂಡು ಕಾರ್ಯಕ್ರಮ ರೂಪಿಸಲಾಗಿದೆ. ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸುವ ಗುರಿ ನಮ್ಮದಾಗಿದೆ.

ಡಿ.ಕೆ.ಶಿವಕುಮಾರ ಅವರ ಕುರಿತು ಉಗ್ರಪ್ಪ, ಸಲಿಂ ಅವರ ವಿಡಿಯೋ ಮಾತುಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಎಪ್ಪತ್ತು ವರ್ಷಗಳಿಂದ ಇಂತಹ ಘಟನೆಗಳು ಎಲ್ಲಾ ಪಕ್ಷಗಳಲ್ಲಿಯೂ ನಡೆದು ಬಂದಿವೆ. ಇದು ಚುನಾವಣೆಯ ಮೇಲೆ ಯಾವುದೇ ಪರಿಣಾಮವನ್ನು ಬಿರುವುದಿಲ್ಲ ಎಂದು ಸ್ಪಷ್ಠಪಡಿಸಿದರು. ಜೆಡಿಎಸ್ ಹಾನಗಲ್ಲ ಹಾಗೂ ಸಿಂಧಗಿಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರುವುದು ಬಿಜೆಪಿಯ ಕುತಂತ್ರವಾಗಿದೆ ಅವರ ಉದ್ದೇಶ ಕಾಂಗ್ರೇಸ್ ಮತದಾರರರಿಗೆ ಅರ್ಥವಾಗಿದೆ. ಇದರಿಂದ ಕಾಂಗ್ರೇಸ್ ಮತಗಳು ಹೊರಹೋಗುವುದಿಲ್ಲ, ಇಬ್ಬರು ಕಾಂಗ್ರೇಸ್ ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ಅವರನ್ನು ಹಿಂದೆ ಸರಿಸುವ, ಮನವೊಲಿಸುವ ಪ್ರಯತ್ನಗಳು ಮುಂದುವರೆದಿವೆ. ಆದರೆ ಅದು ಕಷ್ಟಸಾದ್ಯ ಎನಿಸಿದೆ. ಮಾಜಿ ಸಚಿವ ಮನೋಹರ ತಹಸಿಲ್ದಾರ ಅವರಿಬ್ಬರ ಮನವೊಲಿಸಲಿದ್ದಾರೆ ಎಂದು ಜಾರಕಿಹೊಳಿ ವಿವರಿಸಿದರು.

ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಗಳ ಧೊರಣೆಯಿಂದ ಜನ ಬೆಸತ್ತಿದ್ದಾರೆ. ಇಡಿ ದೇಶಾದ್ಯಂತ ಇಂಧನ ಬೆಲೆ ಏರಿಕೆ, ದಿನಬಳಿಕೆ ವಸ್ತುಗಳ ಬೆಲೆ ಗಗನಕ್ಕೆರಿರುವುದು ಇ ಚುನಾವಣೆ ಮೇಲೆ ಖಂಡಿತಾ ಪ್ರಭಾವ ಬಿರುತ್ತವೆ.
ಡಿಕೆಶಿ-ಸಿದ್ದರಾಮಯ್ಯ ಭೇಟಿ:
ಉಪಚುನಾವಣಾ ಪ್ರಚಾರಾರ್ಥವಾಗಿ ಹಾನಗಲ್ಲ ತಾಲೂಕಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗಮಿಸಲಿದ್ದು, ಅ.16 ಶನಿವಾರ ಬೆಳಿಗ್ಗೆ 10.30ಕ್ಕೆ ಮಲಗುಂದ, 12 ಗಂಟೆಗೆ ಹೇರೂರ, ಮದ್ಯಾಹ್ನ 3 ಗಂಟೆಗೆ ತಿಳವಳ್ಳಿ, ಸಂಜೆ 5 ಗಂಟೆಗೆ ಗೊಂದಿ ಗ್ರಾಮಗಳಲ್ಲಿ ಕಾಂಗ್ರೇಸ್ ಅಭ್ಯರ್ಥಿ ಶ್ರಿನಿವಾಸ ಮಾನೆ ಪರ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ 18 ಮತ್ತು 20 ರಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲಾ ಸೇರಿದಂತೆ ರಾಜ್ಯದ ಹಲವು ಮುಖಂಡರು ಚುನಾವಣಾ ಪ್ರಚಾರಕ್ಕೆ ಆಗಮಿಸಲಿದ್ದಾರೆಂದು ಪಕ್ಷದ ಅಧ್ಯಕ್ಷ ಆರ್.ಎಸ್.ಪಾಟೀಲ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರುಗಳಾದ ಮನೋಹರ ತಹಸೀಲ್ದಾರ, ರಮಾನಾಥ ರೈ, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ, ರಾಜ್ಯ ಎಸ್‍ಟಿ ಘಟಕದ ಅಧ್ಯಕ್ಷ ಕೆ.ಪಾಲಯ್ಯ, ಮುಖಂಡ ಚಂದ್ರಶೇಖರ ಜುಟ್ಟಲ, ಬ್ಲಾಕ್ ಅಧ್ಯಕ್ಷರುಗಳಾದ ಆರ್.ಎಸ್.ಪಾಟೀಲ, ಪುಟ್ಟಪ್ಪ ನರೇಗಲ್ ಉಪಸ್ಥಿತರಿದ್ದರು.

ಹಾನಗಲ್ಲನಲ್ಲಿ ಕಾಂಗ್ರೇಸ್ ಚುನಾವಣಾ ಕಾರ್ಯಲಯದಲ್ಲಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದರು. ರಮಾನಾಥ ರೈ, ಮನೋಹರ ತಹಸಿಲ್ದಾರ, ಎಮ್.ಎಮ್.ಹಿರೇಮಠ, ಕೆ.ಪಾಲಯ್ಯ, ಆರ್.ಎಸ್.ಪಾಟೀಲ ಇತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link