ಪರಿಷತ್ ಚುನಾವಣೆ: ವೇಳಾಪಟ್ಟಿ ಘೋಷಣೆ

ತುಮಕೂರು:

ರವಿ ಬೆ.ಗ್ರಾ.

ರಘು ಆಚಾರ್ ಚಿತ್ರದುರ್ಗ

ಕಾಂತರಾಜು

ಕೆ.ಸಿ.ಕೊಂಡಯ್ಯ

ಕೋಟಾ ಶ್ರೀನಿವಾಸ ಪೂಜಾರಿ

ಎಸ್. ಆರ್. ಪಾಟೀಲ್

ಮನೋಹರ್ ಚಿಕ್ಕಬಳ್ಳಾಪುರ

 

ನೀತಿ ಸಂಹಿತೆ ಜಾರಿ: ಅಭಿವೃದ್ಧಿ ಕಾರ್ಯಕ್ರಮಗಳ ಚಾಲನೆ ಮುಂದಕ್ಕೆ…
ಸ್ಲಗ್: ಜಿಪಂ –ತಾಪಂ ಸದಸ್ಯರಿಲ್ಲದೆ ಸ್ಥಳೀಯಸಂಸ್ಥೆ ಕ್ಷೇತ್ರಗಳಿಗೆ ಡಿ.10ರಂದು ಮತ

2022 ಜ.5ರಂದು ತೆರವಾಗುವ ವಿಧಾನಪರಿಷತ್ ಸ್ಥಳೀಯಸಂಸ್ಥೆಗಳ ಕ್ಷೇತ್ರದ 25 ಸದಸ್ಯ ಸ್ಥಾನಗಳ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಮಂಗಳವಾರ ವೇಳಾಪಟ್ಟಿ ಘೋಷಣೆ ಮಾಡಿದ್ದು, ತಕ್ಷಣದಿಂದಲೇ ನೀತಿ ಸಂಹಿತೆ ಸಹ ಜಾರಿಗೊಂಡು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಿಲಾನ್ಯಾಸ, ಉದ್ಘಾಟನೆ ಕಾರ್ಯಕ್ರಮಗಳು ಮುಂದೂಡಿಕೆಯಾಗಿವೆ. ಜಿಪಂ ತಾಪಂ ಚುನಾಯಿತ ಸದಸ್ಯರಿಲ್ಲದೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಪರಿಷತ್ ಚುನಾವಣೆ ನಡೆಯುತ್ತಿರುವುದು ಈ ಅವಧಿಯ ವಿಶೇಷವೆನಿಸಿದೆ. ಗ್ರಾಪಂ ಸದಸ್ಯರು, ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು, ಶಾಸಕರು, ಸಂಸದರು, ಪರಿಷತ್ ಸದಸ್ಯರು ಮಾತ್ರ ಮತ ಚಲಾವಣೆ ಹಕ್ಕನ್ನು ಹೊಂದಿದ್ದಾರೆ.

ನ.16ರಂದು ಚುನಾವಣೆ ಅಧಿಕಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಕೆಗೆ ನ.23 ಕಡೇ ದಿನವಾಗಿದೆ. ನ.24 ನಾಮಪತ್ರಗಳ ಪರಿಷ್ಕರಣೆ ನಡೆಯಲಿದ್ದು, ನ.26ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನವಾಗಿದೆ. ಡಿ.10ರಂದು ಬೆಳಿಗ್ಗೆ 8 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಡಿ.14ರಂದು ಮಂಗಳವಾರ ಮತ ಎಣಿಕೆ ನಡೆಯಲುದೆ. ಡಿ.16ರಂದು ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಚುನಾವಣಾ ಆಯೋಗದ ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಚುನಾವಣೆ ನಡೆಸಬೇಕು ಎಂದು ಆಯೋಗ ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳಿಗೆ ನಿರ್ದೇಶಿಸಿದೆ.

ರಾಜ್ಯದಲ್ಲಿ ತುಮಕೂರು, ಚಿಕ್ಕಬಳ್ಳಾಪುರ-ಕೋಲಾರ, ಚಿತ್ರದುರ್ಗ, ಬೀದರ, ಗುಲ್ಬರ್ಗ, ಉತ್ತರಕನ್ನಡ, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಕೊಡಗಿನ ತಲಾ 1 ಸ್ಥಾನಗಳು, ಬಿಜಾಪುರ, ಬೆಳಗಾವಿ, ಧಾರವಾಡ, ದಕ್ಷಿಣಕನ್ನಡ, ಮೈಸೂರಿನ 2 ಸ್ಥಾನಗಳು ಸೇರಿ ಒಟ್ಟು 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

75 ಸದಸ್ಯ ಬಲದ ವಿಧಾನಪರಿಷತ್‍ನಲ್ಲಿ ಹಾಲಿ 32 ಬಿಜೆಪಿ, 29 ಕಾಂಗ್ರೆಸ್, ಸಭಾಪತಿ ಸೇರಿ 13 ಜೆಡಿಎಸ್, ಓರ್ವ ಪಕ್ಷೇತರ ಸದಸ್ಯರಿದ್ದು, ಸ್ಥಳೀಯ ಸಂಸ್ಥೆಗಳಿಂದ ಗೆಲುವು ಸಾಧಿಸಿದ್ದ ವಿಧಾನಪರಿಷತ್ ವಿಪಕ್ಷ ನಾಯಕ ಕಾಂಗ್ರೆಸ್‍ನ ಎಸ್.ಆರ್.ಪಾಟೀಲ್, ವಿಜಯ್‍ಸಿಂಗ್, ಬಿಜೆಪಿಯ ಸಚಿವ ಕೋಟಾ ಶ್ರೀನಿವಾಸಪೂಜಾರಿ, ತುಮಕೂರು- ಬೆಮೆಲ್ ಕಾಂತರಾಜ್, ಚಿತ್ರದುರ್ಗ-ರಘು ಆಚಾರ್, ಕೋಲಾರ-ಚಿಕ್ಕಬಳ್ಳಾಪುರದ ಸಿ.ಆರ್.ಮನೋಹರ್, ಬಳ್ಳಾರಿಯ ಕೆ.ಸಿ.ಕೊಂಡಯ್ಯ ಸೇರಿ 25 ಸದಸ್ಯರ ಅವಧಿ ಜ.5 2022ಕ್ಕೆ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಅವಧಿಗೆ ಮುಗಿಯುವ ಮುಂಚೆ ಹೊಸ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಆಡಳಿತರೂಢ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‍ಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಲಿದ್ದು, ಪರಿಷತ್‍ನಲ್ಲಿ ತಮ್ಮ ಬಲ ಹೆಚ್ಚಿಸಿಕೊಳ್ಳಲು ಮೂರು ಪಕ್ಷಗಳು ಸೆಣಸಾಡುವುದಂತೂ ನಿಶ್ಚಿತವಾಗಿದೆ.

ಧಾನಪರಿಷತ್ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಸದಸ್ಯಸ್ಥಾನಕ್ಕೆ ವೇಳಾಪಟ್ಟಿ ಮಂಗಳವಾರ ಘೋಷಣೆಯಾದ ತಕ್ಷಣದಿಂದಲೇ ನೀತಿ ಸಂಹಿತೆಯೂ ಅನ್ವಯವಾಗಿರುವುದಾಗಿ ಚುನಾವಣಾ ಆಯೋಗ ಹೇಳಿರುವುದರಿಂದ ಇಂದು ನಡೆಯಬೇಕಿದ್ದ ಮಹಾನಗರಪಾಲಿಕೆ ನೂತನ ಆಡಳಿತ ಕಚೇರಿ ಉದ್ಘಾಟನೆ, ಸ್ಮಾರ್ಟ್ ಸಿಟಿ ನೂತನ ಸಭಾಂಗಣ, ವಸತಿ ಸಂಕೀರ್ಣ ಲೋಕಾರ್ಪಣೆ ಕಾರ್ಯಕ್ರಮವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ. ಮಧುಗಿರಿಯಲ್ಲಿ ನ.13ರಂದು ನಡೆಯಬೇಕಿದ್ದ ಗಡಿನಾಡಿನಲ್ಲಿ ಕನ್ನಡ ಜಾಗೃತಿ ಸಾಂಸ್ಕøತಿಕ ಉತ್ಸವವನ್ನು ಮುಂದೂಡಲಾಗಿದೆ ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link