ಚುನಾವಣೆಯಲ್ಲಿ ಗೆಲ್ಲಿಸಿ ರಾಜಕೀಯವಾಗಿ ಬೆಳಸಿ

ಹುಳಿಯಾರು:


ಕೃಷಿ ಮಾಡುವ ಮಹದಾಸೆಯಿಂದ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದೆ. ಆದರೆ ಜನಸೇವೆ ಮಾಡಲು ನಿರ್ಧರಿಸಿ ವಿಧಾನ ಪರಿಷತ್ ಚುನಾವಣೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದೇನೆ. ಚುನಾವಣೆಯಲ್ಲಿ ಗೆಲ್ಲಿಸಿ ರಾಜಕೀಯವಾಗಿ ಬೆಳಸುವ ಹೊಣೆ ಜಿಲ್ಲೆಯ ಮತದಾರರದು. ಗೆಲ್ಲಿಸಿದರೆ ಮತದಾರರ ಖುಣ ತೀರಿಸುವ ಜವಾಬ್ದಾರಿ ನನ್ನದು ಎಂದು ಅನಿಲ್ ತಿಳಿಸಿದರು.

ಹುಳಿಯಾರಿನ ಶ್ರೀ ಸೀತರಾಮ ಕಲ್ಯಾಣ ಮಂಟಪದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ದೇವೇಗೌಡ ಮತ್ತು ಕುಮಾರಸ್ವಾಮಿಯವರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜಿಲ್ಲೆಯಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೀರಿ. ಆದರೆ ಗೆದ್ದ ನಂತರ ಬೇರೆ ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಆದರೆ ನಾನು ಜೆಡಿಎಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟುವ ಕೆಲಸ ಮಾಡುತ್ತೇನೆ. ಅಲ್ಲದೆ ನೀವು ಕೊಡುವ ಅಧಿಕಾರವನ್ನು ಜಿಲ್ಲೆಯ ಅಭಿವೃದ್ಧಿಗೆ ಸಮರ್ಥವಾಗಿ ಬಳಸಿಕೊಳ್ಳುತ್ತೇನೆ ಎಂದರು.

ಮಾಜಿ ಶಾಸಕ ಸಿ.ಬಿ.ಸುರೇಶ್‍ಬಾಬು ಅವರು ಮಾತನಾಡಿ 2-3 ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೀರಿ. ಈ ಬಾರಿಯೂ ಸಹ ಅನಿಲ್ ಅವರನ್ನು ಗೆಲ್ಲಿಸಿ ಜಿಲ್ಲೆ ಜೆಡಿಎಸ್ ಭದ್ರಕೋಟೆ ಎಂಬುದನ್ನು ಸಾಬೀತು ಪಡಿಸಬೇಕು ಎಂದರಲ್ಲದೆ ಜೆಡಿಎಸ್ ಒಕ್ಕಲಿಗರ ಪಕ್ಷ ಎನ್ನುತ್ತಾರೆ. ಆದರೆ ಪಕ್ಷವು ಒಕ್ಕಲಿಗರಿಗಿಂತ ಹೆಚ್ಚಾಗಿ ಇತರೆ ಜಾತಿಗಳಿಗೆ ಹೆಚ್ಚು ಅವಕಾಶ ನೀಡಿ ಬೆಳಸುತ್ತದೆ. ಅದರಲ್ಲೂ ತಳ ಸಮುದಾಯದವರಿಗೆ ಹೆಚ್ಚು ರಾಜಕೀಯ ಪಾಲು ನೀಡುತ್ತದೆ. ಇದಕ್ಕೆ ಈಗ ಘೋಷಿಸಿರುವ ವಿಧಾನ ಪರಿಷತ್ ಚುನಾವನಾ ಅಭ್ಯರ್ಥಿಗಳ ಪಟ್ಟಿಯೆ ನಿದರ್ಶನ ಎಂದರು.

ಜೆಡಿಎಸ್ ಅಭ್ಯರ್ಥಿ ಅನಿಲ್ ಅವರು ಚಿಕ್ಕನಾಯಕನಹಳ್ಳಿ ಶಾಲೆಯಲ್ಲೆ ಓದಿದವರಾಗಿದ್ದು, ಇಲ್ಲಿನ ಜನರಿಗೆ ಪರಿಚಿತರು. ರಾಜಕೀಯಕ್ಕೆ ಬಂದು ಜನ ಸೇವೆ ಮಾಡುವ ಸಲುವಾಗಿ ಚುನಾವಣೆಗೆ ನಿಂತಿದ್ದಾರೆ. ಅವರನ್ನು ಗೆಲ್ಲಿಸುವ ಮೂಲಕ ಹೊಸ ಮುಖಗಳಿಗೆ ಅವಕಾಶ ನೀಡೋಣ ಎಂದರಲ್ಲದೆ ಕಳೆದ ಚುನಾವಣೆಯಲ್ಲಿ 1,000 ಮತಗಳಿಗೂ ಹೆಚ್ಚಿನ ಅಂತರಲ್ಲಿ ಜೆಡಿಎಸ್ ಗೆದ್ದಿತ್ತು. ಇದಕ್ಕೆ ಜಿಲ್ಲೆಯಲ್ಲಿ ಜೆಡಿಎಸ್ ಸದಸ್ಯರು ಹೆಚ್ಚಾಗಿರುವುದು ಕಾರಣವಾಗಿದೆ. ಈ ಚುನಾವಣೆಯಲ್ಲೂ ಸಹ ಜೆಡಿಎಸ್ ಅಭ್ಯರ್ಥಿ ಗೆಲ್ಲುವುದರಲ್ಲಿ ಅನುಮಾನವಿಲ್ಲ ಎಂದರು.
ಪಪಂ ಸದಸ್ಯ ಮಂಜಣ್ಣ, ಕಾವ್ಯ, ತಾಪಂ ಮಾಜಿ ಸದಸ್ಯರುಗಳಾದ ಏಜೆಂಟ್‍ಕುಮಾರ್, ಪ್ರಸನ್ನಕುಮಾರ್, ಯತೀಶ್, ಗ್ರಾಪಂ ಮಾಜಿ ಅಧ್ಯಕ್ಷ ನಂದಿಹಳ್ಳಿ ದೇವರಾಜು, ಯುವ ಜೆಡಿಎಸ್ ಅಧ್ಯಕ್ಷ ಗೌಡಿ, ಮುಖಂಡರಾದ ಏಜಾಸ್, ರಾಘವೇಂದ್ರ, ಮಂಜುನಾಥ್ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link