ತುಮಕೂರು:
ರಾಜೇಂದ್ರರನ್ನು ಎತ್ತಿಕುಣಿದ ಅಭಿಮಾನಿಗಳು, ಕಾರ್ಯಕರ್ತರು
ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತಿದ್ದಂತೆ ತುಮಕೂರು ನಗರ, ಮಧುಗಿರಿ ಸೇರಿ ಜಿಲ್ಲಾದÀ್ಯಂತ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೆಎನ್‍ಆರ್ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.
ಮಂಗಳವಾರ ಬೆಳಿಗ್ಗೆಯೇ ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮತ ಎಣಿಕೆ ಕೇಂದ್ರದ ಮುಂದೆ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ಗೆಲುವಿನ ನೀರಿಕ್ಷೆಯಲ್ಲಿದ್ದರು. ಮೊದಲ ಪ್ರಾಶಸ್ತ್ಯದಲ್ಲಿ ಕಾಂಗ್ರೆಸ್ ಮುನ್ನಡೆ ಎಂಬ ವಿಚಾರ ತಿಳಿದ ಕೂಡಲೇ ಬಿ.ಎಚ್.ರಸ್ತೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಹಾರಾಡಿದ ಕಾಂಗ್ರೆಸ್ ಬಾವುಟ, ಜೈಕಾರಗಳ ಉದ್ಘೋಷ: ದ್ವಿತೀಯ ಪ್ರಾಶಸ್ತ್ಯ ಮತದಲ್ಲಿಯೂ ಕಾಂಗ್ರೆಸ್ ಗೆಲುವು ಖಚಿತವಾಗುತ್ತಿದ್ದಂತೆ ಎಣಿಕೆ ಕೇಂದ್ರದ ಹೊರಗಡೆ ಬಂದ ಗೆದ್ದ ಅಭ್ಯರ್ಥಿ ರಾಜೇಂದ್ರ, ಮಾಜಿ ಶಾಸಕ ಕೆ.ಎನ್.ರಾಜಣ್ಣ, ಜಯಚಂದ್ರ, ಪರಮೇಶ್ವರ್ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಜೈಕಾರ ಕೂಗಿದ ಕಾರ್ಯಕರ್ತರು ಅಭ್ಯರ್ಥಿಯನ್ನು ಎತ್ತಿ ಕುಣಿದು ಸಂಭ್ರಮಿಸಿದರು.
ಕಾಂಗ್ರೆಸ್ ಬಾವುಟಗಳು ಬಿ.ಎಚ್.ರಸ್ತೆಯಲ್ಲಿ ರಾರಾಜಿಸಿದವು.ಕಾಂಗ್ರೆಸ್ ಕಚೇರಿವರೆಗೆ ಮೆರವಣಿಗೆ : ಕೆ.ಎನ್ . ರಾಜಣ್ಣ, ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರೊಂದಿಗೆ ಮತ ಕೇಂದ್ರದಿಂದ ಹೊರಬಂದ ರಾಜೇಂದ್ರ ಅವರಿಗೆ ಹೂವಿನ ಹಾರ ಹಾಕಿ ಹೆಗಲ ಮೇಲೆ ಹೊತ್ತ ಕಾರ್ಯಕರ್ತರು ಹಾಗೂ ಬೆಂಬಲಿಗರು ಡೋಲು, ಪಟಾಕಿಯೊಂದಿಗೆ ಕಾಂಗ್ರೆಸ್ ಕಚೇರಿವರೆಗೆ ತೆರೆದ ಜೀಪಿನಲ್ಲಿ ಮೆರವಣಿಗೆ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
