ಸಾವಿರಾರು ಗೀತೆ ಹಾಡಿದ್ದ ಖ್ಯಾತ ಗಾಯಕ ಮಾಣಿಕ ವಿನಾಯಗಂ ನಿಧನ

ತಮಿಳು:

ತಮಿಳು ಸಿನಿಮಾರಂಗದ ಖ್ಯಾತ ಗಾಯಕ ಮಾಣಿಕ ವಿನಾಯಗಂ ವಿಧಿವಶರಾಗಿದ್ದಾರೆ.

ಭಾನುವಾರ (ಡಿ.26) ರಾತ್ರಿ ಅವರು ಕೊನೆಯುಸಿರು ಎಳೆದರು. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ನಿಧನರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾಣಿಕ ವಿನಾಯಗಂ ನಿಧನಕ್ಕೆ ಸೂಕ್ತ ಕಾರಣ ಏನೆಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಅವರ ಅಗಲಿಕೆಗೆ ತಮಿಳು ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದ್ದಿದ್ದಾರೆ.

ನಾಟ್ಯಾಚಾರ್ಯ ಪದ್ಮಶ್ರೀ ವಳುವೂರ್​ ಬಿ ರಾಮಯ್ಯ ಪಿಳೈ ಅವರ ಕಿರಿಯ ಪುತ್ರನಾಗಿದ್ದ ಮಾಣಿಕ ವಿನಾಯಗಂ ಅವರಿಗೆ 73 ವರ್ಷ ವಯಸ್ಸಾಗಿತ್ತು. 800ಕ್ಕೂ ಅಧಿಕ ಸಿನಿಮಾ ಗೀತೆಗಳಿಗೆ ಅವರು ಧ್ವನಿ ನೀಡಿದ್ದರು. ಸಾವಿರಾರು ಭಕ್ತಿಗೀತೆಗಳು ಅವರ ಕಂಠದಲ್ಲಿ ಮೂಡಿಬಂದಿದ್ದವು. ಗಾಯನದ ಜೊತೆಯಲ್ಲಿ ನಟನಾಗಿಯೂ ಅವರು ಗುರುತಿಸಿಕೊಂಡಿದ್ದರು.

2001ರಲ್ಲಿ ಹಾಡುಗಾರಿಕೆ ಆರಂಭಿಸಿದ ಮಾಣಿಕ ವಿನಾಯಗಂ ಅವರು ಅನೇಕ ಸೂಪರ್​ ಹಿಟ್​ ಹಾಡುಗಳನ್ನು ನೀಡಿದ್ದರು. ಭಕ್ತಿ ಗೀತೆ ಮತ್ತು ಜಾನಪದ ಗೀತೆಗಳ ಮೂಲಕ ಅವರು ಫೇಮಸ್​ ಆಗಿದ್ದರು.

‘ತಿರುಡ ತಿರುಡಿ’ ಚಿತ್ರದಲ್ಲಿ ಧನುಷ್​​ಗೆ ತಂದೆ ಆಗಿ ಅವರು ನಟಿಸಿದ್ದರು. ಆನಂತರ ಅನೇಕ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದರು. ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್​ ಅವರು ಮಾಣಿಕ ವಿನಾಯಗಂ ಅವರ ಅಂತಿಮ ದರ್ಶನ ಪಡೆಯಲಿದ್ದಾರೆ ಎಂದು ವರದಿ ಆಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap