ಬೆಂಗಳೂರು:

ಮುಂದಿನ ದಿನಗಳಲ್ಲಿ ಸರ್ಕಾರ, ಕರ್ನಾಟಕ ಎಜುಕೇಷನ್ ಆಕ್ಟ್ ನಲ್ಲಿ ಗೊಂದಲವಿದ್ದದ್ದನ್ನು, ಹೈಕೋರ್ಟ್ ತೀರ್ಪಿನ ಆಧಾರದ ಮೇಲೆ ಬದಲಾವಣೆ ಮಾಡಲಾಗುತ್ತದೆ. ಸಮವಸ್ತ್ರವು ಒಂದು ರಾಷ್ಟ್ರೀಯ ಮಾನಸಿಕತೆಯನ್ನು ತರೋದ್ರಲ್ಲಿ ಸಾಕಷ್ಟು ಸಹಕಾರಿ ಎಂದು ನಮಗೆ ಗೊತ್ತಿದೆ.
ಆ ನಿಟ್ಟಿನಲ್ಲಿಯೇ ಸಮವಸ್ತ್ರ ನೀತಿ ಸಂಹಿತೆ ಜಾರಿಗೊಳಿಸಲಾಗಿತ್ತು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.
ಇಂದು ಹಿಜಾಬ್ ಅನುಮತಿ ಕುರಿತ ಹೈಕೋರ್ಟ್ ತೀರ್ಪಿನ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಹಿಜಾಬ್ ಅನುಮತಿ ವಿವಾದದ ಬಗ್ಗೆ ಹೆಣ್ಣುಮಕ್ಕಳಿಗೆ ತಪ್ಪು ಮಾಹಿತಿ ತಲುಪಿತ್ತು. ಅವರ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡುತ್ತೇವೆ. ಅವರು ಶಾಲೆಗೆ ಬಂದು ತರಗತಿಗೆ ಹಾಜರಾಗಿ, ವಿದ್ಯಾಭ್ಯಾಸ ಮುಂದುವರೆಸಲಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಸರಿ ಹೋಗಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








