ಸಿಎಫ್‌ಐ ಅಧ್ಯಕ್ಷನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಪ್ರಮೋದ್ ಮುತಾಲಿಕ್

ಧಾರವಾಡ :

    ನ್ಯಾಯಾಲಯ ಇರೋದೆ ಸಂವಿಧಾನದ ಆಧಾರದ ಮೇಲೆ. ಆದ್ರೆ, ಅತಾವುಲ್ಲಾ ಗುಂಜಲಕಟ್ಟಿ ಜಡ್ಜ್ ಮತ್ತು ನ್ಯಾಯಾಲಯದ ವಿರುದ್ಧ ಮಾತನಾಡಿದ್ದಾರೆ. ಹೀಗಾಗಿ, ನ್ಯಾಯಾಂಗ ನಿಂದನೆ ಕೇಸ್​ ದಾಖಲು ಮಾಡಲಾಗುವುದು..

ಆದರೆ, ತೀರ್ಪಿನ ಕುರಿತು ಸಿಎಫ್​ಐ ರಾಜ್ಯಾಧ್ಯಕ್ಷ ಅತಾವುಲ್ಲಾ ಗುಂಜಲಕಟ್ಟಿ ವಿರುದ್ಧವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಡುಪಿಯ 6 ವಿದ್ಯಾರ್ಥಿನಿಯರು ಹಿಜಾಬ್​ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್​ಗೆ ಹೋಗಿದ್ರು. ನಿನ್ನೆ ಕೋರ್ಟ್​ ತೀರ್ಪು ಹೊರ ಬಿದ್ದಿದ್ದು, ಇದನ್ನು ಗೌರವಿಸದೇ ಸಿಎಫ್​ಐ ರಾಜ್ಯಾಧ್ಯಕ್ಷ ಅತಾವುಲ್ಲಾ ಗುಂಜಲಕಟ್ಟಿ ತೀರ್ಪಿನ ವಿರುದ್ಧ ಮಾತನಾಡಿದ್ದಾರೆ ಎಂದು ಆರೋಪಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿರುವ ಪ್ರಮೋದ್ ಮುತಾಲಿಕ್​ ನ್ಯಾಯಾಲಯ ಇರೋದೆ ಸಂವಿಧಾನದ ಆಧಾರದ ಮೇಲೆ. ಆದ್ರೆ, ಅತಾವುಲ್ಲಾ ಗುಂಜಲಕಟ್ಟಿ ಜಡ್ಜ್ ಮತ್ತು ನ್ಯಾಯಾಲಯದ ವಿರುದ್ಧ ಮಾತನಾಡಿದ್ದಾರೆ. ಹೀಗಾಗಿ, ನ್ಯಾಯಾಂಗ ನಿಂದನೆ ಕೇಸ್​ ದಾಖಲು ಮಾಡಲಾಗುವುದು.

ಈ ಸಂಬಂಧ ಅಡಿಷನಲ್ ಅಡ್ವೋಕೇಟ್ ಜನರಲ್ ಅವರಿಂದ ಅನುಮತಿ ತೆಗೆದುಕೊಳ್ಳಬೇಕಾಗುತ್ತದೆ. ಅಡಿಷನಲ್ ಅಡ್ವೋಕೇಟ್ ಜನರಲ್ ವಿದ್ಯಾವತಿ ಅವರಿಗೆ ಅನುಮತಿ ಅಪ್ಲಿಕೇಶನ್ ಕೊಟ್ಟಿದ್ದೇವೆ. ಅವರು ಬೆಂಗಳೂರಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದ್ದಾರೆ.

ಇದಕ್ಕೆ ಅನುಮತಿ ಸಿಗುತ್ತದೆ ಎಂಬ ನಂಬಿಕೆಯಿದೆ. ನಾವು ಅವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಕೋರ್ಟ್ ಮೊರೆ ಹೋಗಿದ್ದೇವೆ. ನಾನೇ ಸ್ವತಃ ಬೆಂಗಳೂರಿನ ಕೋರ್ಟ್​ಗೆ ಹಾಜರಾಗುತ್ತೇನೆ ಎಂದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link