1 ರೂ. ನಾಣ್ಯಗಳನ್ನೇ ನೀಡಿ ಡ್ರೀಮ್​ ಬೈಕ್​ ಖರೀದಿಸಿದ ಯುವಕ! ಹಣ ಎಣಿಸಲು ತೆಗೆದುಕೊಂಡ ಸಮಯವೆಷ್ಟು?

ಚೆನ್ನೈ: 

ಸಂಪೂರ್ಣ ಒಂದು ರೂಪಾಯಿ ನಾಣ್ಯಗಳನ್ನೇ ನೀಡಿ ತಮಿಳುನಾಡಿನ ಸೇಲಂ ಮೂಲದ ಯುವಕನೊಬ್ಬ 2.6 ಲಕ್ಷ ಮೌಲ್ಯದ ತನ್ನ ಕನಸಿನ ಬೈಕ್​ ಖರೀದಿ ಮಾಡಿದ್ದಾನೆ. ಅಚ್ಚರಿಯೆಂದರೆ, ಇಡೀ ನಾಣ್ಯವನ್ನು ಎಣಿಸಲು ಬರೋಬ್ಬರಿ 10 ಗಂಟೆ ಸಮಯ ಹಿಡಿದಿದೆ.

ಬೈಕ್​ ಖರೀದಿ ಮಾಡಿದ ಯುವಕನ ಹೆಸರು ವಿ ಭೂಪತಿ. ಕಳೆದ ಮೂರು ವರ್ಷಕ್ಕಿಂತಲೂ ಹೆಚ್ಚಿನ ಸಮಯದಿಂದ ಭೂಪತಿ 1 ರೂ. ನಾಣ್ಯವನ್ನು ಸಂಗ್ರಹಿಸಿಕೊಂಡು ಬರುತ್ತಿದ್ದರು. ತನ್ನ ಉಳಿತಾಯ ಹಣವನ್ನೆಲ್ಲ ಒಮ್ಮೆಲೆ ಸಂಗ್ರಹಿಸಿ ಬೈಕ್​ ಶೋರೋಮ್​ಗೆ ತೆರಳಿ ತನ್ನ ಕನಸಿನ ಬೈಕ್​ ನ್ಯೂ ಬಜಾಜ್​ ಡಾಮಿನರ್​ ಖರೀದಿ ಮಾಡಿದ್ದಾರೆ.

ಭಾರತದಲ್ಲಿ ಬೀದಿ ಬದಿ ಮಕ್ಕಳ ಸಂಖ್ಯೆ ಎಷ್ಟು? ಎನ್‌ಪಿಸಿಆರ್ ವರದಿ ಹೇಳುವುದೇನು?

ಭೂಪತಿ ತಂದಿದ್ದ ನಾಣ್ಯಗಳನ್ನು ಎಣಿಸಲು ಶೋರೂಮ್​ ಸಿಬ್ಬಂದಿ ಬರೋಬ್ಬರಿ 10 ಗಂಟೆ ಸಮಯ ತೆಗೆದುಕೊಂಡಿದ್ದಾಗಿ ಭಾರತ್​ ಏಜೆನ್ಸಿ ಕಂಪನಿಯ ಮ್ಯಾನೇಜರ್​ ಮಹಾವಿಕ್ರಾಂತ್​ ತಿಳಿಸಿದ್ದಾರೆ.

ಭೂಪತಿ ಬಿಸಿಎ ಪದವೀಧರರಾಗಿದ್ದು, ನಾಲ್ಕು ವರ್ಷಗಳ ಹಿಂದೆ ಯೂಟ್ಯೂಬ್ ಚಾನೆಲ್ ಆರಂಭಿಸುವ ಮುನ್ನ ಖಾಸಗಿ ಕಂಪನಿಯೊಂದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಿದ್ದರು. ಬೈಕ್ ಖರೀದಿಸುವ ಕನಸನ್ನು ಮೂರು ವರ್ಷಗಳ ಹಿಂದೆಯೇ ಹೊಂದಿದ್ದರು. ಆದರೆ, ಎರಡು ಲಕ್ಷ ಮೌಲ್ಯದ ಬೈಕ್​ ಖರೀದಿ ಮಾಡಲು ಅವರ ಬಳಿ ಅಷ್ಟೊಂದು ಮೊತ್ತ ಇರಲಿಲ್ಲ.

ಇದಾದ ಬಳಿಕ ಬೈಕ್​ ಖರೀದಿಸುವ ಕನಸಿನೊಂದಿಗೆ ಹಣ ಸಂಗ್ರಹಿಸಲು ಮುಂದಾದ ಭೂಪತಿ ಪ್ರತಿದಿನ ಸಿಕ್ಕಷ್ಟು ಒಂದೊಂದು ರೂಪಾಯಿ ನಾಣ್ಯವನ್ನು ಸಂಗ್ರಹಿಸಿದರು. ಅಂತಿಮವಾಗಿ ಬೈಕ್​ಗೆ ಬೇಕಾದಷ್ಟು ಹಣ ಸಂಗ್ರಹ ಮಾಡಿರುವ ಭೂಪತಿ ತನ್ನ ಇಚ್ಛೆಯ ಬೈಕ್​ ಖರೀದಿ ಮಾಡಿ ಕನಸನ್ನು ನನಸು ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)

ಅಂತಾರಾಷ್ಟ್ರೀಯ ವಿಮಾನ ಸಂಚಾರ ಪುನರಾರಂಭ; ವಾರಕ್ಕೆ 3,250 ಟ್ರಿಪ್ ಪ್ರಯಾಣ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link