ಬೆಂಗಳೂರು:

ಇಂದು ರಾತ್ರಿಯೇ ಸಚಿವ ಸ್ಥಾನಕ್ಕೆ ಕೆ.ಎಸ್. ಈಶ್ವರಪ್ಪ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದ್ದ, ವಿ.ಪ ಒತ್ತಡ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಬಿಎಸ್ವೈ ಜೊತೆಗೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.
ಈ ನಡುವೆ ನನ್ನ ಗಂಡನ ಸಾವಿಗೆ ಈಶ್ವರಪ್ಪನೇ ಕಾರಣ ಅಂತ ಸಚಿವ ಈಶ್ವರಪ್ಪನ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಂಡಿರುವ ಮೃತ ಗುತ್ತಿಗೆದಾರ ಸಂತೋಷ್ ಪತ್ನಿ ಜಯಶ್ರೀ ಹೇಳಿದ್ದಾರೆ.
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಸಚಿವ ಈಶ್ವರಪ್ಪ ವಿರುದ್ಧ FIR ದಾಖಲು
ಈ ಬಗ್ಗೆ ಅವರು ಮಾಧ್ಯಮಗಳ ಜೊತೆಗೆ ಮಾತನಾಡುತ್ತ ತಿಳಿಸಿದ್ದು, ನನ್ನ ಪತಿ ಈಶ್ವರಪ್ಪನವರ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡುತ್ತಿದ್ದು, ಶೇ.40 ರಷ್ಟು ಲಂಚ ಕೊಟ್ಟರೆ ಮಾತ್ರವೇ ಬಿಲ್ ಪಾಸ್ ಮಾಡುತ್ತೇನೆ ಅಂತ ಹೇಳಿದ್ದರು, ಈ ಬಗ್ಗೆ ಮಾತನಾಡಲು ಅವರ ಬಳಿ ಹೋದ್ರೆ ಅವರು ಇಂದು ನಾಳೇ ಅಂಥ ಆಟವಾಡುತ್ತಿದ್ದರು ಅಂತ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ನಿಯೋಗ ರಾಜ್ಯಪಾಲರನ್ನು ಭೇಟಿಯಾಗಿ ಸಲ್ಲಿಸಿದ ಮನವಿ ಪತ್ರ
ಇದೇ ವೇಳೇ ಸಂತೋಷ್ ಯಾರು ಎಂಬುದೇ ಗೊತ್ತಿಲ್ಲ ಎಂದಿದ್ದಾರೆ. ಯಾರು ಎಂಬುದೇ ಗೊತ್ತಿಲ್ಲ ಎಂದಾದರೆ ಫೋಟೋದಲ್ಲಿ ಹೇಗೆ ತಾನೆ ಕಾಣಿಸಿಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿ ದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








