ಹರಿಹರಪುರ ಗೇಟ್ ಬಳಿ ಆಯೋಜಿಸಿದ್ದ ಗೋಪೂಜೆ ನೆರವೇರಿಸಿದ ಸಚಿವರು

 

 ಚಿಕ್ಕಬಳ್ಳಾಪುರ:

ಕೃಷಿ ಸಚಿವ  ಬಿ.ಸಿ. ಪಾಟೀಲ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಮಂಗಳವಾರ  ತಾಲ್ಲೂಕಿನ  ಹರಿಹರಪುರ ಗೇಟ್ ಬಳಿ ಆಯೋಜಿಸಿದ್ದ ಗೋಪೂಜೆಯನ್ನು  ನೆರವೇರಿಸಿದರು. 

ವೇಳೆ   ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ ಮಳೆಯಾಶ್ರಿತ ಪ್ರದೇಶಾಭಿವೃದ್ಧಿ ಯೋಜನೆಯಡಿಯ ಸಹಾಯಧನದಲ್ಲಿ  ಹಸುಗಳನ್ನು  ಪಡೆಯಲು  35 ಫಲಾನುಭವಿಗಳಿಗೆ  ಹಾಗೂ ಕುರಿಗಳನ್ನು ಪಡೆಯಲು 19 ಫಲಾನುಭವಿಗಳಿಗೆ   ಮಂಜೂರಾತಿ  ಆದೇಶ  ಪತ್ರಗಳನ್ನು  ಕೃಷಿ  ಸಚಿವರು ವಿತರಿಸಿದರು.

 ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾವು‌ ಮತ್ತು ಮಾರುಕಟ್ಟೆ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷ ಕೆ.ವಿ.ನಾಗರಾಜು, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಕೃಷಿ ಇಲಾಖೆಯ ಜಂಟಿ ಉಪನಿರ್ದೇಶಕಿ ರೂಪಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link