ರಾಜಕೀಯಕ್ಕೆ ಬಳಕೆಯಾಗುತ್ತಿದೆ ಅಪ್ಪು ವರ್ಚಸ್ಸು : ಎಎಪಿ ಆರೋಪ

ಬೆಂಗಳೂರು

     ನಾಡಿನ ಚೇತನ ಪುನೀತ್ ರಾಜ್ ಕುಮಾರ್ ಹೆಸರು, ವರ್ಚಸ್ಸನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕ ಆರೋಪಿಸಿದೆ.

ಪುನೀತ್ ರಸ್ತೆ ನಾಮಕರಣ ಕಾರ್ಯಕ್ರಮ ಫ್ಲೆಕ್ಸ್ ನಲ್ಲಿ ಅಪ್ಪು ಫೋಟೋನೇ ಇಲ್ಲದೇ ರಾಜಕೀಯ ನಾಯಕರ ಫೋಟೋಗಳು ರಾರಾಜಿಸಿದ ವರದಿಯೊಂದನ್ನು ಎಎಪಿ ರಾಜ್ಯ ಅಧಿಕೃತ ಟ್ವೀಟರ್ ಖಾತೆಯಲ್ಲಿ  ಹಂಚಿಕೊಂಡಿದ್ದು, ಬಿಜೆಪಿ ರಾಜಕೀಯ ಹಪಾಹಪಿಗೆ ಅಂತ್ಯವೇ ಇಲ್ಲವೇ ಎಂದು ಕಿಡಿಕಾರಿದೆ.

    ಪುನೀತ್ ಹೆಸರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ರಾಜ್ಯ ಬಿಜೆಪಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಬೆಳಗಾವಿಯಲ್ಲಿ ನಾಡಿನ ಜನತೆಗೆ ಮೋಸ ಮಾಡಿದಿರಿ, ಬೆಂಗಳೂರಿನಲ್ಲಿ ಪುನೀತ್ ಅವರ ಹೆಸರಿಗೆ ಮೋಸ ಮಾಡುತ್ತಿದ್ದೀರಿ ಎಂದು ಆಮ್ ಆದ್ಮಿ ಪಕ್ಷ ರಾಜ್ಯ ಘಟಕ ಟೀಕಾ ಪ್ರಹಾರ ನಡೆಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link