ಮುಂಬೈ:

ವಿಶ್ವದ ಗಮನ ಸೆಳೆದಿರುವ ಶಕ್ತಿಯುತ ಸೇನೆಗಳಲ್ಲಿ ಒಂದಾಗಿರುವ ಭಾರತೀಯ ನೌಕಾದಳಕ್ಕೆ ಮತ್ತಷ್ಟು ಬಲ ಹೆಚ್ಚಿಸಲು ಸ್ಕಾರ್ಪಿಯನ್ ಕ್ಲಾಸ್ ನ ಸಬ್ ಮೆರಿನ್ ಆದ ವೇಲಾ ಅಧಿಕೃತವಾಗಿ ಭಾರತೀಯ ನೌಕಾದಳಕ್ಕೆ ಸೇರ್ಪಡೆಯಾಗಿದೆ.
ಮಡಗಾಂವ್ ಡಾಕ್ ಲಿಮಿಟೆಡ್ ನಲ್ಲಿ ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ವೇಲಾವನ್ನು ಅಧಿಕೃತವಾಗಿ ನೌಕಾದಳಕ್ಕೆ ಸೇರಿಸಲಾಯಿತು. ಇದು ನೌಕಾದಳಕ್ಕೆ ಸೇರ್ಪಡೆಯಾದ ಸ್ಕಾರ್ಪಿಯನ್ ಕ್ಲಾಸ್ ಸರಣಿಯ ನಾಲ್ಕನೇ ಜಲಾಂತರ್ಗಾಮಿ ನೌಕೆಯಾಗಿದೆ.
ಈ ಹಿಂದೆ ಇದೇ ಸರಣಿಯ ಮೂರು ಜಲಾಂತರ್ಗಾಮಿ ನೌಕೆಗಳನ್ನು ಸೇನೆಗೆ ಸೇರ್ಪಡೆಗೊಳಿಸಲಾಗಿತ್ತು. ಸ್ಕಾರ್ಪಿಯನ್ ನೌಕೆಗಳು ಸಂಪೂರ್ಣ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನೌಕೆಗಳಾಗಿದ್ದು, ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಈ ನೌಕೆಗಳನ್ನು ಮುಂಬೈನ ಮಡಗಾಂವ್ ಡಾಕ್ ಲಿಮಿಟೆಡ್ ನಲ್ಲಿ ತಯಾರು ಮಾಡಲಾಗಿತ್ತು.
ಈ ಹಿಂದೆ ಇದೇ ಸ್ಕಾರ್ಪಿಯನ್ ಸರಣಿಯ ಮೊದಲ ಜಲಾಂತರ್ಗಾಮಿ ನೌಕೆ ಐಎನ್ ಎಸ್ ಕಲ್ವರಿ, ಕಳೆದ ಸೆಪ್ಚೆಂಬರ್ ನಲ್ಲಿ ಸೇನೆಗೆ ಸೇರ್ಪಡೆಯಾಗಿತ್ತು. ಇದರ ಬೆನ್ನಲ್ಲೇ ೨ನೇ ಜಲಾಂತರ್ಗಾಮಿ ನೌಕೆಯಾದ ಐಎನ್‌ಎಸ್ ಕಂದೇರಿ ಡಿಸೆಂಬರ್‌ನಲ್ಲಿ ನೌಕಾಪಡೆಯನ್ನು ಸೇರ್ಪಡೆಗೊಂಡಿತ್ತು. ಆ ಬಳಿಕ 2018 ಜನವರಿಯಲ್ಲಿ ಕಾರಂಜ್ ನೌಕೆಯನ್ನು ಸೇನೆಗೆ ಸೇರ್ಪಡೆ ಮಾಡಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
