ಬೆಂಗಳೂರು
ಕೆಲಸ ಮಾಡದೇ ಬಿಲ್ ಕೊಡುವುದು ಕಾಂಗ್ರೆಸ್ ಚಾಳಿ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನೆಗುಂದಿಯಲ್ಲಿ ಕಾಮಗಾರಿಗೆ 125 ಕೋಟಿ ಮಂಜೂರು ಮಾಡಿದ್ದು ಬಿಡುಗಡೆಯಾಗಿಲ್ಲ ಎಂದು ವಿರೋಧ ಪಕ್ಷದವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕೆಲಸ ಹೇಗೆ ನಡೆಯುತ್ತದೆ ಎಂಬ ಕಲ್ಪನೆ ಇರಬೇಕು. ಅನುಮೋದನೆಯಾಗಿ ಸರ್ಕಾರಿ ಆದೇಶವಾಗಿ ಟೆಂಡರ್ ಆಗಿದೆ. ಅನಂತರ ಬಿಲ್ ಕೊಡುತ್ತಾರೆ ಎಂದರು.
ಮಾಜಿ ಸಿಎಂ ಆಪ್ತರ ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಹೇಳಿಕೆ ಕೊಟ್ಟವರು ಅದಕ್ಕೆ ಜವಾಬ್ದಾರರು ಎಂದರು.ಸಚಿವ ವಿ.ಸೋಮಣ್ಣ ಅವರು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಸ್ನೇಹಿತರು ಎಂದಿರುವ ಬಗ್ಗೆ ಉತ್ತರಿಸಿ ಅವರೊಂದಿಗೆ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ಸೋಮಣ್ಣ ನಮ್ಮದು 35 ವರ್ಷಗಳ ಸಂಬಂಧ ಎಂದರು. ಅದು ಸತ್ಯ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
