ಮತ್ತೆ ಆರಂಭವಾಯ್ತು ರಾಮೇಶ್ವರಂ :ಸೆಕ್ಯೂರಿಟಿ ಹೇಗಿದೆ ಗೊತ್ತಾ….?

ಬೆಂಗಳೂರು:

    ಬಾಂಬ್ ಸ್ಫೋಟ ಸಂಭವಿಸಿದ ವಾರದ ಬಳಿಕ ಬೆಂಗಳೂರಿನ ರಾಮೇಶ್ವರಂ ಮತ್ತೆ ಶುಕ್ರವಾರ ಕಾರ್ಯಾರಂಭ ಮಾಡಿದೆ.ಶಿವರಾತ್ರಿ ದಿನವೇ ಕೆಫೆ ಪುನರಾರಂಭ ಮಾಡುವುದಾಗಿ ಕೆಫೆ ಮಾಲೀಕರು ತಿಳಿಸಿದ್ದರು. ಅದರಂತೆ ಶುಕ್ರವಾರ ಬೆಳಿಗ್ಗೆಯೇ ಕೆಫೆ ಪುನರಾರಂಭಗೊಂಡಿದೆ.

   ಕೆಫೆಯಲ್ಲಿ ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ನೆರವೇರಿದವು. ಆ ಮೂಲಕ ಮತ್ತೆ ಗ್ರಾಹಕರಿಗೆ ಕೆಫೆ ಮುಕ್ತವಾಗಿದೆ.ಇನ್ನು ಬಾಂಬ್ ಸ್ಫೋಟದ ಘಟನೆಯಿಂದ ಎಚ್ಚೆತ್ತುಕೊಂಡಿರುವ ಕೆಫೆ ಮಾಲೀಕರು, ಇದೀಗ ಪುನರಾರಂಭದ ವೇಳೆ ಸೂಕ್ತ ಮುನ್ನೆಚ್ಚರಿಕೆ, ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

    ಕೆಫೆಯ ಪ್ರವೇಶ ದ್ವಾರದ ಬಳಿ 2 ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದೆ. ಶನಿವಾರದಿಂದ ಪ್ರತಿ ಗ್ರಾಹಕರನ್ನು ಹ್ಯಾಂಡ್ ಡಿಟೆಕ್ಟರ್ ಮೂಲಕ ತಪಾಸಣೆ ಮಾಡಿಯೇ ಒಳ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತದೆ. ಈ ನಡುವೆ ಕೆಫೆ ಸುತ್ತ ಅಳವಡಿಸಿದ್ದ ಬ್ಯಾರಿಕೇಡ್​ಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ.

   ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್​ 1ರಂದು ಶುಕ್ರವಾರ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಐದು ಮಂದಿ ಗಾಯಗೊಂಡಿದ್ದರು. ಬಾಂಬ್ ಇಟ್ಟು ಹೋಗಿದ್ದ ವ್ಯಕ್ತಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಘಟನೆ ಸಂಬಂಧ ತನಿಖೆಯೂ ಪ್ರಗತಿಯಲ್ಲಿದೆ.

Recent Articles

spot_img

Related Stories

Share via
Copy link
Powered by Social Snap