ಮಂಡ್ಯ : ಸುಮಲತಾ ವಿರುದ್ದ ಡಾ.ರವೀಂದ್ರ ವಾಗ್ದಾಳಿ

ಮಂಡ್ಯ: 

      ನೀವು ಬಿಜೆಪಿಗೆ ನನ್ನ ಸಂಪೂರ್ಣ ಬೆಂಬಲ ಎನ್ನುವ ಮೂಲಕ ಮಂಡ್ಯ ಜನರ ವಿಶ್ವಾಸಕ್ಕೆ ಮೋಸ ಮಾಡಿದ್ದೀರಿ  ಸ್ವಾಭಿಮಾನಿ ಅನ್ನೋ ಪದ ನಿಮಗೆ ಸರಿಯಲ್ಲ ಆದ್ದರಿಂದ ಆ ಪದವನ್ನು ಬಳಸಬೇಡಿ, ನೀವು ಕೊಲೆಗಡುಕರಾಗಿದ್ದೀರಿ, ಕತ್ತು ಹಿಸುಕುದ್ದೀರಿ. ತಾವೂ ಬೆನ್ನಿಗೆ ಚೂರಿ ಹಾಕುವವರು ಎನ್ನುವ ಮೂಲಕ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ರವೀಂದ್ರ  ವಾಗ್ದಾಳಿ ನಡೆಸಿದರು.

  ಸುಮಲತಾ ಅಂಬರೀಶ್ ಬಿಜೆಪಿಗೆ  ಬೆಂಬಲ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ಸುಮಲತಾ ಅವರಿಗೆ ಜಿಲ್ಲೆಯ ಅಸ್ಮಿತೆ, ಸ್ವಾಭಿಮಾನಕ್ಕಾಗಿ 249 ಕಿ.ಮೀ ಪಾದಯಾತ್ರೆ ಮಾಡಿದ್ದೆ. ಹಲವರ ಹೋರಾಟದಿಂದಾಗಿ ಸುಮಲತಾ ಅವರು ಗೆಲುವು ಸಾಧಿಸಿದ್ದಾರೆ. ಆದರೆ ಅವರು ಗೆಲುವು ಸಾಧಿಸಿದ ಬಳಿಕ ಜಿಲ್ಲೆಗೆ ಏನಾದರೂ ಅಭಿವೃದ್ಧಿ ಕೆಲಸವನ್ನು ಮಾಡಬೇಕು ಎನ್ನುವ ಪ್ರಯತ್ನವನ್ನು ಮಾಡಲಿಲ್ಲ.

   ಅಷ್ಟೇ ಅಲ್ಲದೇ ಅವರಿಗೆ ಅದ್ಯಾರು ಮಾರ್ಗದರ್ಶಕರು ಗೊತ್ತಿಲ್ಲ, ಜಿಲ್ಲೆಯ ಬೆಳವಣಿಗೆಗೆ ಏನು ಬೇಕು ಎಂದು ನಮಗೆ ಹೇಳಬೇಕಿತ್ತು. ಆ ಯೋಗ್ಯತೆ ನಮಗಿಲ್ಲ ಅಂತಾ ಯಾಕೆ ಅನ್ಕೊಂಡರು? ಇವತ್ತು ಯಾಕೆ ಸ್ವಾಭಿಮಾನಿ ಅಂತಾ ಪದೇ ಪದೇ ಬಳಸುತ್ತಾರೆ. ಸ್ವಾಭಿಮಾನಕ್ಕೂ ಅವರಿಗೂ ಎಲ್ಲಿಂದೆಲ್ಲಿ ಸಂಬಂಧ ಯಾವ ಸ್ವಾಭಿಮಾನಿ ಕೆಲಸವನ್ನು ಅವರು ಮಾಡಿದ್ದಾರೆ. ಅವರು ಇವತ್ತು ಬರುತ್ತಾರೆ, ನಾಳೆ ಬರುತ್ತಾರೆ ಎಂದು ಕಾದಿದ್ದು ಒಂದೇ ಜಿಲ್ಲೆಗೆ ಭಾಗ್ಯ ಎಂದು ಕಿಡಿಕಾರಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link