ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಸಿಹಿ ಸುದ್ದಿ…!

ಬೆಂಗಳೂರು 

   ರಶ್ಮಿಕಾ ಮಂದಣ್ಣ ಅವರಿಗೆ ಇನ್ನೂ 30 ತುಂಬಿಲ್ಲ. ಯಂಗ್ ಆಗಿದ್ದಾಗ ಅವರು ಚಿತ್ರರಂಗಕ್ಕೆ ಬಂದರು. ಮೊದಲು ಕರ್ನಾಟಕ ಕ್ರಶ್ ಆದರು. ಆ ಬಳಿಕ ಭಾರತದ ಕ್ರಶ್ ಎನಿಸಿಕೊಂಡರು. ಅವರು ‘ಅನಿಮಲ್’ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡರು. ಅವರು ಈಗ ಟಾಲಿವುಡ್, ಕಾಲಿವುಡ್​ ಹಾಗೂ ಬಾಲಿವುಡ್​ನಲ್ಲಿ ಬ್ಯುಸಿ ಇದ್ದಾರೆ. ಮುಂದಿನ 10 ತಿಂಗಳಲ್ಲಿ ಅವರ ನಟನೆಯ 5 ಸಿನಿಮಾಗಳು ರಿಲೀಸ್​ಗೆ ರೆಡಿ ಇವೆ. ಇದು ಅಚ್ಚರಿ ಎನಿಸಿದರೂ ನಿಜ.

   ರಶ್ಮಿಕಾ ಮಂದಣ್ಣ ಅವರು 2016ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಕೇವಲ 8 ವರ್ಷಗಳಲ್ಲಿ ಅವರು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಸ್ಟಾರ್ ಹೀರೋಗಳ ಜೊತೆ ಅವರು ನಟಿಸಿ ಗಮನ ಸೆಳೆಯುತ್ತಿದ್ದಾರೆ. ಅವರ ಶೂಟಿಂಗ್ ಶೆಡ್ಯೂಲ್ ಕೂಡ ಈಗ ಸಖತ್ ಟೈಟ್ ಇರುತ್ತದೆ. ಇದರ ಮಧ್ಯೆ ಮನೆಗೆ ಹೋಗಿ ಬಂದು ಮಾಡಲೂ ಅವರಿಗೆ ಸಮಯ ಇರೋದಿಲ್ಲ. ಅವರ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್ ರಿಲೀಸ್ ಆಗುತ್ತಿದೆ.

   ಸುಕುಮಾರ್ ನಿರ್ದೇಶನದ, ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಪುಷ್ಪ 2’ ಚಿತ್ರಕ್ಕೆ ರಶ್ಮಿಕಾ ನಾಯಕಿ. ಈ ಸಿನಿಮಾ ಡಿಸೆಂಬರ್ 5ರಂದು ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಅವರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಡಿಸೆಂಬರ್ 6ರಂದು ‘ಛವಾ’ ಹೆಸರಿನ ಹಿಂದಿ ಸಿನಿಮಾ ರಿಲೀಸ್ ಆಗುತ್ತಿದೆ. ಇದರಲ್ಲಿ ಅವರು ಪವರ್​ಫುಲ್ ಪಾತ್ರ ಮಾಡುತ್ತಿದ್ದಾರೆ. ಛತ್ರಪತಿ ಶಿವಾಜಿ ಪುತ್ರ ಸಾಂಭಾಜಿ ಅವರ ಪತ್ನಿ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ‘ಪುಷ್ಪ 2’ ಜೊತೆಗಿನ ಕ್ಲ್ಯಾಶ್ ತಪ್ಪಿಸಿಕೊಳ್ಳಲು ಇದರ ರಿಲೀಸ್ ಡೇಟ್ ಮುಂದಕ್ಕೆ ಹೋಗುತ್ತದೆ ಎನ್ನಲಾಗಿದೆ.

  ‘ದಿ ಗರ್ಲ್​ಫ್ರೆಂಡ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಹುಲ್ ರವೀಂದ್ರನ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಕಥೆ ಸಂಪೂರ್ಣವಾಗಿ ರಶ್ಮಿಕಾ ಮೇಲೆಯೇ ಸಾಗಲಿದೆ.  ಈ ಚಿತ್ರ ಮುಂದಿನ ಬೇಸಿಗೆಯಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

    ರಶ್ಮಿಕಾ ಮಂದಣ್ಣ ಅವರು ‘ಸಿಖಂದರ್’ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರಿಗೆ ಜೊತೆಯಾಗಿದ್ದಾರೆ. ಈ ಚಿತ್ರವನ್ನು ಎಆರ್​ ಮುರುಗದಾಸ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರ 2025ರ ಈದ್​ಗೆ ರಿಲೀಸ್ ಆಗಲಿದೆ. ಇದಲ್ಲದೆ, ತಮಿಳಿನಲ್ಲಿ ಧನುಷ್ ಹಾಗೂ ನಾಗಾರ್ಜುನ ನಟಿಸುತ್ತಿರುವ ‘ಕುಬೇರ’ ಸಿನಿಮಾದಲ್ಲೂ ನಟಿಸಿದ್ದಾರೆ. ಈ ಚಿತ್ರ ಕೂಡ ಮುಂದಿನ ವರ್ಷ ರಿಲೀಸ್ ಆಗಲಿದೆ. 

  ‘ರೇನ್​ಬೋ’ ಹೆಸರಿನ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಈ ಸಿನಿಮಾದ ಒಂದು ಹಂತದ ಶೂಟಿಂಗ್ ಮುಗಿದೆ. ಮುಂದೆ ಈ ಚಿತ್ರದ ಶೂಟಿಂಗ್ ನಡೆದಿದೆಯೋ ಅಥವಾ ಇಲ್ಲವೋ ಗೊತ್ತಿಲ್ಲ.

Recent Articles

spot_img

Related Stories

Share via
Copy link