ರೈತರ ಮಾರ್ಗದರ್ಶನಕ್ಕೆ ಏಕೀಕೃತ ಸಹಾಯವಾಣಿ : ಕೃಷಿ ಸಚಿವ

ಬೆಂಗಳೂರು :

    ಕೃಷಿ ಇಲಾಖೆಯಲ್ಲಿ ರೈತರ ಮಾಹಿತಿ, ಸಲಹೆ, ಮಾರ್ಗದರ್ಶನಕ್ಕೆ ಏಕೀಕೃತ ಸಹಾಯವಾಣಿ ಇಂದಿನಿಂದ ಕಾರ್ಯಾರಂಭಗೊಂಡಿದೆ. ಬೆಂಗಳೂರಿನ ಕೃಷಿ ಇಲಾಖೆ ಆಯುಕ್ತಾಲಯದಲ್ಲಿ ಸ್ಥಾಪಿಸಿರುವ ಏಕೀಕೃತ ಸಹಾಯವಾಣಿ ಕರೆ ಕೇಂದ್ರಕ್ಕೆ ಕೃಷಿ ಸಚಿವ ಎನ್. ಚೆÀಲುವರಾಯಸ್ವಾಮಿ ಚಾಲನೆ ನೀಡಿದರು.

     ಇಲಾಖೆಯಲ್ಲಿ ವಿವಿಧ 8 ಯೋಜನೆಗಳ ಮಾಹಿತಿಗಳಿಗೆ ಇದ್ದ ಪ್ರತ್ಯೇಕ ದೂರವಾಣಿ ಸಂಖ್ಯೆಗಳನ್ನು ಒಗ್ಗೂಡಿಸಿ ಒಂದೇ ಸಂಖ್ಯೆಯಲ್ಲಿ ಎಲ್ಲ ಮಾಹಿತಿಗಳು ಲಭ್ಯವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ನೂತನ ರೈತ ಸಹಾಯವಾಣಿ ಕರೆ ಸಂಖ್ಯೆ 1800425355ಕ್ಕೆ ಸಂಪರ್ಕಿಸಿ ಮಾಹಿತಿ, ಮಾರ್ಗದರ್ಶನ ಪಡೆಯಬಹುದಾಗಿದೆ.

     ಮುಂದಿನ ದಿನಗಳಲ್ಲಿ ರೈತರಿಗೆ ಇನ್ನೂ ಹೆಚ್ಚಿನ ಅನುಕೂಲವಾಗುವ Iಗಿಖ-ಒಐ ಮತ್ತು ಂI ಆಧಾರಿತ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಮಾಹಿತಿ, ಪರಿಹಾರಗಳನ್ನು ಮತ್ತಷ್ಟು ಸುಲಭ ಹಾಗೂ ಪರಿಣಾಮಕಾರಿಯಾಗಿ ರೈತರಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿವ ಚೆಲುವರಾಯಸ್ವಾಮಿ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ