ಹೊಸಪೇಟೆ :
ಟಿ ಬಿ ಡ್ಯಾಮ್ ನ 19ನೇ ಕ್ರಸ್ಟ್ ಗೇಟ್ ಕಿತ್ತು ಹೋದ ಹಿನ್ನೆಲೆ ತಾತ್ಕಾಲಿಕ ಕ್ರಸ್ಟ್ ಗೇಟ್ ಅಳವಡಿಕೆಗೆ ತಜ್ಞರು ಸಲಹೆ ನೀಡಿದ್ದು. ಅದರಂತೆ ಬಳ್ಳಾರಿಯ ಜಿಂದಾಲ್ನಿಂದ ಇಂದು ಬೆಳಗ್ಗೆ ಕ್ರಸ್ಟ್ ಗೇಟ್ನ ಎಲಿಮೆಂಟ್ಸ್ಅನ್ನು ಜಲಾಶಯದ ಆವರಣಕ್ಕೆ ತರಲಾಗಿದೆ.
ಕೊಪ್ಪಳ ಜಿಲ್ಲೆ ಹೊಸಳ್ಳಿಯ ಹಿಂದೂಸ್ಥಾನ ಇಂಜನಿಯರಿಂಗ್ ಮತ್ತು ಹೊಸಪೇಟೆಯ ನಾರಾಯಣ ಇಂಜನಿಯರಿಂಗ್ ಮತ್ತು ಜಿಂದಾಲ್ ಕಡೆಯಿಂದ ತಾತ್ಕಾಲಿಕ ಕ್ರಸ್ಟ್ ಗೇಟ್ ತಯಾರಿಸಲು ಯೋಜನೆ ರೂಪಿಸಲಾಗಿತ್ತು. ಅದರಂತೆ ನಿನ್ನೆ ರಾತ್ರಿಯೇ ಗೇಟ್ ಗಳು ಬರಬೇಕಿತ್ತು ಆದರೆ ವಿಪರೀತ ಮಳೆಯ ಕಾರಣ ಗೇಟ್ ತರಲು ಆಗಿರ್ಲಿಲ್ಲಾ.
ಸದ್ಯ ಜಿಂದಾಲ್ ನಿಂದ ಇಂದು ಬೆಳಗ್ಗೆ ಪೊಲೀಸ್ ಭದ್ರತೆಯಲ್ಲಿ ಜೀರೋ ಟ್ರಾಫಿಕ್ ಮೂಲಕ ಗೇಟ್ ಎಲಿಮೆಂಟ್ ಗಳನ್ನು ತರಲಾಗಿದ್ದು, ಅಳವಡಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.ತುಂಗಭದ್ರಾ ಜಲಾಶಯ ಒಟ್ಟು 105.788 ಟಿಸಿಎಂ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಕ್ರಸ್ಟ್ ಗೇಟ್ ಕಿತ್ತೋಗಿರುವ ಹಿನ್ನೆಲೆ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ.
ಇಲ್ಲಿಯವರೆಗೂ ಜಲಾಶಯದಿಂದ ಸುಮಾರು 36 ಟಿಎಂಸಿ ನೀರು ಹೊರಬಿಡಲಾಗಿದೆ. ಜಲಾಶಯಕ್ಕೆ ಈಗ 36,143 ಕ್ಯೂಸೆಕ್ ನೀರು ಒಳಹರಿದು ಬರುತ್ತಿದೆ. ಜಲಾಶಯದಿಂದ ಈಗ ನದಿಗೆ 1,00,245 ಕ್ಯೂಸೆಕ್ ನೀರು ಬಿಡಲಾಗುತ್ತಿದೆ ಎಂದು ವರದಿಯಾಗಿದೆ








