ಅಪಾರ ಜನರ ಮನ್ನಣೆ ಹಾಗೂ ಸ್ಥಳ ಮಹಾತ್ಮೆ ಹೊಂದಿರುವ ತಿರುಪತಿ ಬಳಿಯ ತಿರುಮಲ ಬೆಟ್ಟದಲ್ಲಿ ನೆಲೆಗೊಂಡಿರುವ ವೆಂಕಟರಮಣ ಸ್ವಾಮಿಯ ವಿಗ್ರಹ ಸಂಪೂರ್ಣವಾಗಿ ಸ್ವಯಂ ಉದ್ಭವಮೂರ್ತಿ. ಇದನ್ನು ಯಾರೂ ಸ್ಥಾಪನೆ ಮಾಡಿಲ್ಲ. ಈ ಹಿಂದೆ ತಿರುಪತಿ ತಿಮ್ಮಪ್ಪ ಹುತ್ತದಲ್ಲಿರುವಾಗ, ಸಾಕ್ಷಾತ್ ಈಶ್ವರನೇ ಹಸುವಿನ ರೂಪದಲ್ಲಿ ಬಂದು ಹಾಲುಣಿಸುತ್ತಿರುತ್ತಾನೆ.
ಬಲಗಡೆ ಶ್ರೀ ವೆಂಕಟೇಶ್ವರ ಸ್ವಾಮಿಯ ತಲೆಯ ಮೇಲೆ ಹೊಡೆದ ಗಾಯ ಈಗಲೂ ಇದೆ! ಆ ಕಾರಣದಿಂದನೇ ಸ್ವಾಮಿ ತಲೆಗೆ ಗಂಧವನ್ನು ಹಚ್ಚುವ ಸಂಪ್ರದಾಯ ಕೂಡಾ ನಡೆದು ಬಂದಿದೆ! ಇಂತಹ ಅನೇಕ ಅಚ್ಚರಿ ಸಂಗತಿಗಳು ಈ ದೇವಾಲಯದಲ್ಲಿ ಅಡಗಿದೆ… ಭಗವಂತ ನೆಲೆಸಿರುವ ವೈಕುಂಠ ನಿವಾಸವೇ ಒಂದು ದೊಡ್ಡ ಅಚ್ಚರಿ. ಇನ್ನೂ ಎಷ್ಟೊಂದು ಅಚ್ಚರಿಗಳು ಆ ಬೆಟ್ಟಗಳಲ್ಲಿ ಅಡಗಿದೆಯೋ ಆ ತಿಮ್ಮಪ್ಪನೇ ಬಲ್ಲ!