ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್ ಎಕ್ಸ್​​ಚೇಂಜ್ ದಂಧೆ ಬೆಳಕಿಗೆ..!

ಬೆಂಗಳೂರು

    ಹೊಸ ವರ್ಷ ಅಂದ ಕೂಡಲೇ ಪಾರ್ಟಿ, ಸೆಲೆಬ್ರೇಷನ್ ಇದ್ದೇ ಇರುತ್ತೆ. ಅದರಲ್ಲೂ ಇಂದಿನ ಯುವಕರ ಕಾರುಬಾರು, ಮೋಜು ಮಸ್ತಿ ಕೇಳಬೇಕಾ? ಅವರದ್ದು ಬೇರೆಯದ್ದೇ ಲೇವಲ್ ಇರುತ್ತೆ. ಈ ಹೊಸ ವರ್ಷಕ್ಕೆ ಅಂತಾನೆ ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಗರ್ಲ್ ಫ್ರೆಂಡ್ ಎಕ್ಸ್​​ಚೇಂಜ್ ದಂಧೆ ಬೆಳಕಿಗೆ ಬಂದಿದೆ. ಹೌದು… ಅಚ್ಚರಿ ಅನ್ನಿಸಿದರೂ ಸತ್ಯ. ‘ಸ್ವಿಂಗರ್ಸ್’ ಎನ್ನುವ ಹೆಸರಿನಲ್ಲಿ ಪಾರ್ಟಿಗೆ ಎಂದು ಕರೆದು ಪರಸ್ಪರ ಗರ್ಲ್ ಫ್ರೆಂಡ್ ಎಕ್ಸ್ ಚೇಂಜ್ ಮಾಡಿಕೊಳ್ಳುವ ಈ ದಂಧೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಳಕಿಗೆ ಬಂದಿದೆ. ಈ ಸಂಬಂಧ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ವಿಚಾರಣೆ ವೇಳೆ ಆಘಾತಕಾರಿ ಮಾಹಿತಿ ಪತ್ತೆಯಾಗಿದೆ.

   ಯುವಕನೋರ್ವ ಪರಿಚಯಸ್ಥ ಯುವತಿಯನ್ನ ಪಾರ್ಟಿಗೆ ಎಂದು ಕರೆದು ಬಳಿಕ ಸ್ನೇಹಿತನ ಜೊತೆಗೆ ಸಹಕರಿಸುವಂತೆ ಬಲವಂತ ಮಾಡಿದ್ದಾನೆ. ಇದಕ್ಕೆ ಒಪ್ಪದಿದ್ದಕ್ಕೆ ಸ್ನೇಹಿತರ ಜೊತೆಗೆ ಸೇರಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇನ್ನೂ ನೊಂದ ಯುವತಿ ಘಟನೆ ಸಂಬಂಧ ಸಿಸಿಬಿಗೆ ದೂರು ನೀಡಿದ್ದು, ಕೂಡಲೇ ಅಲರ್ಟ್ ಆದ ಪೊಲೀಸರು ಕರಾಳ ದಂಧೆ ನಡೆಸುತ್ತಿದ್ದ ಕಾಮುಕರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಹರೀಶ್,ಹೇಮಂತ್ ಎಂದು ಗುರುತಿಸಲಾಗಿದೆ. 

 
   ಘಟನೆಯಿಂದ ಬೇಸತ್ತ ಯುವತಿ ಸಿಸಿಬಿಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಸಿಸಿಬಿ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳ ಮೊಬೈಲ್‌ ಪರಿಶೀಲನೆ ವೇಳೆ ಭಯಾನಕ‌ ಸತ್ಯ ಬಯಲಾಗಿದೆ. ಮೊಬೈಲ್ ನಲ್ಲಿ ಹತ್ತಾರು ಯುವತಿಯರ ಬೆತ್ತಲೆ ಫೋಟೊ ಪತ್ತೆಯಾಗಿವೆ. ಇನ್ನು ಏಕಾಂತದಲ್ಲಿದ್ದ ವಿಡಿಯೋಗಳನ್ನು ಸಹ ಆರೋಪಿಗಳು ರೆಕಾರ್ಡ್​ ಮಾಡಿಟ್ಟುಕೊಂಡಿರುವುದು ಪತ್ತೆಯಾಗಿದೆ. ಅದೇ ವೀಡಿಯೋ ತೋರಿಸಿ ಯುವತಿಗೆ ಬ್ಲಾಕ್ ಮೇಲ್ ಮಾಡುತ್ತಿರುವುದಾಗಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.ಒಟ್ಟಾರೆಯಾಗಿ ಇಂತಹ ನೀಚ ಕಾಮುಕರನ್ನು ನಂಬಿ ಪಾರ್ಟಿ, ಮೋಜು ಮಸ್ತಿ ಎಂದು ಹೋಗುವ ಹೆಣ್ಮಕ್ಕಳು ಯುವತಿಯರು ಸ್ವಲ್ಪ ಹುಷಾರಾಗಿರುವುದು ಒಳಿತು. ಎಲ್ಲರೂ ಹಾಗೇ ಇರುವುದಿಲ್ಲ. ಆದರೂ ಎಚ್ಚರಿದಿಂದ ಇರಬೇಕಷ್ಟೇ.

Recent Articles

spot_img

Related Stories

Share via
Copy link