ಮೊದಲ ಹಂತದಲ್ಲಿ ರೋಪ್ ವೇ ಕಾಮಗಾರಿಯನ್ನು ಆರಂಭಿಸಿ : ಸಹಕಾರ ಸಚಿವ ಕೆ ಎನ್ ರಾಜಣ್ಣ ಸೂಚನೆ

ಮಧುಗಿರಿ :

    ಮೊದಲ ಹಂತದಲ್ಲಿ ರೋಪ್ ವೇ ಕಾಮಗಾರಿಯನ್ನು ಆರಂಭಿಸುವಂತೆ ಸಹಕಾರ ಸಚಿವ ಕೆ ಎನ್ ರಾಜಣ್ಣ ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ನ್ಯಾಯಾಲಯಗಳ ಸಂಕೀರ್ಣ ಗಳ ಸಮೀಪ ಇರುವ ರೋಪ್ ವೇ ಕಾಮಗಾರಿಯ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಾತನಾಡಿದ ಅವರು,

   10 ವರ್ಷಗಳ ಹಿಂದೆಯೇ ರೋಪ್ ವೇ ಕಾಮಗಾರಿಗಾಗಿ 9 ಎಕರೆ ಸ್ಥಳವನ್ನು ನಿಗಧಿಪಡಿಸಲಾಗಿತ್ತು. ಈ ಕಾಮಗಾರಿಯು ಮೂರು ಹಂತಗಳಲ್ಲಿ ಮುಕ್ತಾಯಗೊಳಿಸ ಬೇಕು.ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ರೋಪ್ ವೇ ಕಾಮಗಾರಿಗಳಿಗಾಗಿ ಪ್ರತ್ಯೇಕ ವಾಗಿ ಪ್ರಾಧಿಕಾರವನ್ನು ಸ್ಥಾಪಿಸಲಾಗಿದ್ದು ಆ ಇಲಾಖೆಯ ಮಾನದಂಡಗಳಂತೆ ರೋಪ್ ವೇ ಕಾಮಗಾರಿಗಳನ್ನು ರಾಜ್ಯದಲ್ಲಿ ನಿರ್ವಹಣೆ ಮಾಡಲಾಗುವುದು.

   ಮೊದಲ ಹಂತದಲ್ಲಿ ರೋಪ್ ವೇ ಕಾಮಗಾರಿ ಯನ್ನು ಆರಂಭಿಸಿ ಈ ಕಾಮಗಾರೊಗಾಗಿ 50ಕೋಟಿ ರೂಗಳು ನಿಗಧಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಲಾಗುವುದು.ಪ್ರಥಮ ಆದ್ಯತೆಯನ್ನು ರೋಪ್ ವೇ ಕಾಮಗಾರಿಗೆ ನೀಡುವುದರ ಮೂಲಕ ಪೂರ್ಣಗೊಳಿಸಬೇಕೆಂದರು.ಈ ಮೂರು ಹಂತಗಳಲ್ಲಿ ರೋಪ್ ವೇ ನಿರ್ಮಾಣ ಮತ್ತು ಮೂಲಭೂತ ಸೌಕರ್ಯಗಳು ಒದಗಿಸಲಾಗುವುದು ಎರಡನೇ ಹಂತದಲ್ಲಿ ಪುಡ್ ಪಾರ್ಕ್ , ಅಮ್ಯೂಸ್ ಮೆಂಟ್ ಪಾರ್ಕ್ , ಸ್ಮಿಮಿಂಗ್ ಪುಲ್ ನಿರ್ಮಾಣ ಮಾಡಲಾಗುವುದು.

   ಕಾಮಗಾರಿ ಆರಂಭಕ್ಕೆ ಅಗತ್ಯವಿರುವ ವಿದ್ಯುತ್ , ರಸ್ತೆ ಮತ್ತಿತರ ಸೌಕರ್ಯಗಳನ್ನು ಒದಗಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.ಪುರಸಭಾಧ್ಯಕ್ಷ ಲಾಲಪೇಟೆ ಮಂಜುನಾಥ್,ದೆಹಲಿ ರೈಟ್ ಕಂಪನಿಯ ಎನ್ ಕೆ ಕೌಶಿಕ್, ವ್ಯವಸ್ಥಾಪಕರಾದ ಸಾಹೀಲ್ ಶರ್ಮ, ಎಂಜಿನಿಯರ್ ಮಣಿ ಮಲೈ , ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ,ತಹಸೀಲ್ದಾರ್ ಶೀರೀನ್ ತಾಜ್,ಬೆಸ್ಕಾಂ ಇಇ ಜಗದೀಶ್, ನಾಗರಾಜರಾವ್ ,ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ ಮೊಹಮದ್ ಇಮ್ರಾನ್ ಮುಖ್ಯಾಧಿಕಾರಿ ಸುರೇಶ್, ಅರಣ್ಯ ಇಲಾಖೆಯ ಹೆಚ್ ಎಂ ಸುರೇಶ್,ಮುತ್ತುರಾಜು, ಮುಖಂಡರುಗಳಾದ ಎಂ ಕೆ ನಂಜುಂಡಯ್ಯ, ಎನ್ ಗಂಗಣ್ಣ, ಜಗದೀಶ್ ಕುಮಾರ್ , ಗಂಗರಾಜು, ಕಿಶೋರ್,ಶಂಕರನಾರಾಯಣ,ಲಕ್ಷ್ಮೀನಾರಾಯಣ್ ಮತ್ತಿತರರು ಇದ್ದರು