ಸಚಿವ ಸಂಪುಟ ರಚನೆ : ಹಳೆ ಮೈಸೂರು ಭಾಗವನ್ನು ಕಡೆಗಣಿಸಿದ ಸಿಎಂ.!

ಬೆಂಗಳೂರು

    ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ರಚಿಸಿರುವ ಸಚಿವ ಸಂಪುಟದಲ್ಲಿ ಹಳೆ ಮೈಸೂರು ಭಾಗ ಹಾಗೂ ಮಧ್ಯ ಕರ್ನಾಟಕ ಭಾಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಈ ಭಾಗದ ಯಾವೊಬ್ಬ ಶಾಸಕರಿಗೆ ಸಚಿವ ಸ್ಥಾನ ಸಿಗದಿರುವುದು ಆಕಾಂಕ್ಷಿಗಳ ಆಕ್ರೋಶ ಭುಗಿಲೇಳುವಂತೆ ಮಾಡಿದೆ.

     ಮೈಸೂರು ಭಾಗದ ಮೈಸೂರು, ಚಾಮರಾಜನಗರ, ಮಡಿಕೇರಿ, ರಾಮನಗರ, ಹಾಸನ ಜಿಲ್ಲೆಗಳಲ್ಲಿ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ. ಮೈಸೂರು, ಚಾಮರಾಜನಗರ, ಮಡಿಕೇರಿ, ರಾಮನಗರ, ಹಾಸನ ಜಿಲ್ಲೆಗಳಲ್ಲಿ 8 ಜನ ಶಾಸಕರಿದ್ದರೂ ಯಾರೊಬ್ಬರಿಗೂ ಸಂಪುಟದಲ್ಲಿ ಸ್ಥಾನ ದೊರಕದಿರುವುದು ಸಹಜವಾಗಿಯೇ ಅಸಮಾಧಾನಕ್ಕೆ ಎಡೆ ಮಾಡಿಕೊಟ್ಟಿದೆ. ಎಸ್.ಎ ರಾಮದಾಸ್ ಅವರಿಗೆ ಮಂತ್ರಿ ಸ್ಥಾನ ಖಚಿತ ಎಂದೇ ಹೇಳಲಾಗುತ್ತಿತ್ತು.

      ಕೊನೇ ಕ್ಷಣದಲ್ಲಿ ಅವರಿಗೆ ಸಚಿವ ಸ್ಥಾನ ತಪ್ಪಿ ಹೋಗಿರುವುದು ಅವರ ಬೆಂಬಲಿಗರಲ್ಲಿ ಅಸಮಾಧಾನ ಸ್ಫೋಟಗೊಳ್ಳು ವಂತಾಗಿದೆ. ರಾಮ್‍ದಾಸ್ ಅವರ ಮೇಲಿರುವ ಪ್ರಕರಣಗಳು ಎಚ್. ವಿಶ್ವನಾಥ್ ವಿರೋಧ ಕಟ್ಟಿಕೊಂಡಿರುವುದು, ಅನಂತ್ ಕುಮಾರ್ ನಿಧನರಾಗಿರುವುದು ಹಾಗೂ ಆರ್‍ಎಸ್‍ಎಸ್‍ನಲ್ಲಿ ಅವರ ಪರವಾಗಿ ಯಾರೂ ಮಾತನಾಡದಿರುವುದರಿಂದ ರಾಮ್‍ದಾಸ್ ಅವರಿಗೆ ಸಚಿವ ಸ್ಥಾನ ತಪ್ಪಿದೆ ಎಂದು ಹೇಳಲಾಗುತ್ತಿದೆ.

     ಇನ್ನು ಮಧ್ಯಕರ್ನಾಟಕದ ದಾವಣಗೆರೆ ಜಿಲ್ಲೆಗೂ ಯಾವುದೇ ಸಚಿವ ಸ್ಥಾನ ಸಿಕ್ಕಿಲ್ಲ. 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಬಿಜೆಪಿ ಸರ್ಕಾರದ ಹಿಂದಿನ ಅವಧಿಯಲ್ಲಿ 3 ಸಚಿವರು 1 ನಿಗಮ ಮಂಡಳಿ ಸ್ಥಾನ ದೊರಕಿತ್ತು. ಈ ಬಾರಿ ಅಷ್ಟೇ ಪ್ರಮಾಣದ ಹಾಗೂ ಇನ್ನೂ ಹೆಚ್ಚಿನ ಸ್ಥಾನಮಾನದ ನಿರೀಕ್ಷೆಯಲ್ಲಿದ್ದವರಿಗೆ ತಣ್ಣೀರೆರಚಿದಂತಾಗಿದೆ.

    ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತರಾದ ಎಸ್.ಎ. ರವೀಂದ್ರನಾಥ್, ಎಂ.ಪಿ ರೇಣುಕಾಚಾರ್ಯ ಅವರಿಗೆ ಸಚಿವ ಸ್ಥಾನ ದೊರಕದಿರುವುದು ಬೆಂಬಲಿಗರಲ್ಲಿ ನಿರಾಸೆ ಮೂಡಿಸಿದೆ. ಅದೇ ರೀತಿ ಮಾಡಾಲ್ ವಿರೂಪಾಕ್ಷಪ್ಪ, ಎಸ್.ವಿ ರಾಮಚಂದ್ರ, ಕರುಣಾಕರ ರೆಡ್ಡಿ, ಪ್ರೊ. ಲಿಂಗಣ್ಣ ಸೇರಿದಂತೆ ಜಿಲ್ಲೆಯ ಯಾವೊಬ್ಬ ಶಾಸಕರಿಗೂ ಸಚಿವ ಸ್ಥಾನ ದೊರೆತಿಲ್ಲ. ಹೀಗಾಗಿ, ಈ ಶಾಸಕರಲ್ಲಿ ಅಸಮಾಧಾನ ಸ್ಫೋಟಗೊಳ್ಳುವಂತಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಲ್ಲಿಸಿದ ಸಚಿವರ ಪಟ್ಟಿಯಲ್ಲಿ ಎಸ್.ಎ ರವೀಂದ್ರನಾಥ್ ಹೆಸರಿತ್ತು ಎನ್ನಲಾಗಿದ್ದು, ಅದು ಕೊನೇ ಕ್ಷಣದಲ್ಲಿ ಕೈ ತಪ್ಪಿರುವುದಕ್ಕೆ ಸ್ಥಳೀಯ ಬಿಜೆಪಿ ನಾಯಕರೇ ಕಾರಣ ಎನ್ನುವ ಆರೋಪವಿದೆ.

ಬೇಸರವಿಲ್ಲ :

    ವರಿಷ್ಠರ ತೀರ್ಮಾನಕ್ಕೆ ಬದ್ದನಾಗಿದ್ದೇನೆ. ಸಚಿವ ಸ್ಥಾನ ದೊರೆತಿಲ್ಲ ಎಂಬ ಬೇಸರವಿಲ್ಲ. ಆ ಬಗ್ಗೆ ಆಸಕ್ತಿಯೂ ಇಲ್ಲ. ಮುಂದಿನ ದಿನದಲ್ಲಿ ಸಚಿವ ಸ್ಥಾನ ದೊರೆತರೂ ನನಗೆ ಆಸಕ್ತಿಯಿಲ್ಲ. ನಮ್ಮ ಬಿಜೆಪಿ ಪಕ್ಷ ಅಧಿಕಾರದಲ್ಲಿರುವುದು ಮುಖ್ಯ.

ಎಂ.ಪಿ ರೇಣುಕಾಚಾರ್ಯ ಹೊನ್ನಾಳಿ ಶಾಸಕ.

ಅಸಮಾಧಾನವಿಲ್ಲ

      ಬಿಜೆಪಿ ಕಾರ್ಯಕರ್ತರಲ್ಲಿ ಯಾವುದೇ ಬೇಸರವಿಲ, ಅಸಮಾಧಾನವಿಲ. ಯಾರೇ ಸಚಿವರಾದರೂ ಅವರು ನಮ್ಮ ಬಿಜೆಪಿ ಪಕ್ಷದವರೇ. ಕೇವಲ ಅಭಿವೃದ್ದಿ ಮಾಡುವುದಷ್ಟೇ ನಮ್ಮ ಮುಖ್ಯ ಧ್ಯೇಯ. ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬ ಬಗ್ಗೆ ನಾವು ಕಾರ್ಯಕರ್ತರು ಬೇಸರಗೊಂಡಿಲ್ಲ. ರಾಜ್ಯದಲಿ ್ಲ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಅಭಿವೃದ್ದಿಯ ಕೆಲಸಗಳು ನಡೆಯಲಿವೆ.

ಯಶವಂತರಾವ್ ಜಾಧವ್ ಬಿಜೆಪಿ ಜಿಲ್ಲಾಧ್ಯಕ್ಷ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap