ಕಾಂತರಾಜು ವರದಿಗೂ, ಈ ಸಮೀಕ್ಷೆಗೂ ಸಂಬಂಧ ಇಲ್ಲ: ಸಚಿವ ಹೆಚ್​​ಸಿ ಮಹದೇವಪ್ಪ

ಬೆಂಗಳೂರು

   ಕರ್ನಾಟಕ ಒಳಮೀಸಲಾತಿ ಜಾತಿ ಗಣತಿ ಸಮೀಕ್ಷೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಒಳಮೀಸಲಾತಿ ಬಗ್ಗೆ ನಿಖರವಾದ ವರದಿ ಕೊಡಲು ಆಯೋಗ ರಚಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸದ್ಯ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಮಾಜಕಲ್ಯಾಣ ಸಚಿವ ಹೆಚ್​ಸಿ ಮಹದೇವಪ್ಪ  , ಕಾಂತರಾಜು ವರದಿಗೂ ಈ ಸಮೀಕ್ಷೆಗೂ ಸಂಬಂಧ ಇಲ್ಲ. ಇದು ಪರಿಶಿಷ್ಟಜಾತಿ ಸಮುದಾಯಕ್ಕೆ ಮಾಡುತ್ತಿರುವ ಸಮೀಕ್ಷೆ ಎಂದು ಅವರು ಹೇಳಿದ್ದಾರೆ.

    ಎಸ್​​ಸಿ ಒಳ ಮೀಸಲಾತಿ ಸಂಬಂಧ ಇಂದಿನಿಂದ ಸಮೀಕ್ಷೆ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಸಚಿವ ಹೆಚ್​ಸಿ ಮಹದೇವಪ್ಪ, ಇದು ಎಸ್​​ಸಿ ಅವರಿಗೆ ಮಾತ್ರ ಈ ಸಮೀಕ್ಷೆ. ಇದು ಎಂಪರಿಕಲ್ ಡಾಟಾ ಕಲೆಕ್ಟ್ ಮಾಡುವುದು ಅಷ್ಟೇ. ಈ ಸಮೀಕ್ಷೆಗೆ ಎಡಗೈ ಮತ್ತು ಬಲಗೈನವರ ಒಮ್ಮತ ಇದೆ. ಯಾರು ಕೂಡ ಸುಳ್ಳು ಹೇಳೋಕೆ‌ ಆಗಲ್ಲ ಎಂದಿದ್ದಾರೆ. ಕಾಂತರಾಜು ವರದಿಯಲ್ಲಿ, ನ್ಯಾಷನಲ್ ಸಮೀಕ್ಷೆಯಲ್ಲಿ ಅಂಕಿ-ಅಂಶ ಇಲ್ಲ. ಹೀಗಾಗಿ ಯಾರು ಕೂಡ ಅನುಮಾನ ಪಡುವ ಹಾಗಿಲ್ಲ. ಯಾರು, ಎಷ್ಟು ಜನ ಇದ್ದಾರೆ ಅಂತಾ ಯಾರಿಗೂ ಸಹ ಗೊತ್ತಿಲ್ಲ ಎಂದು ಹೇಳಿದ್ದಾರೆ. 

   ಪರಿಶಿಷ್ಟ ಜಾತಿ ಅನ್ನೋದು ಜಾತಿ ಅಲ್ಲ, ಅದೊಂದು ಗುಂಪು. ಎಸ್​ಸಿ ಒಳ ಮೀಸಲಾತಿ ಸಮೀಕ್ಷೆ ಇದೊಂದು ಚಾರಿತ್ರಿಕವಾದದ್ದು. ಪರಿಶಿಷ್ಟ ಜಾತಿ ಸಮುದಾಯದ ದತ್ತಾಂಶಗಳ ಸಂಗ್ರಹಕ್ಕಾಗಿ ಸುಪ್ರೀಂಕೋರ್ಟ್​ ನಿರ್ದೇಶನದಂತೆ ಸಮೀಕ್ಷೆ ಮಾಡಲಾಗುತ್ತಿದೆ. ಪರಿಶಿಷ್ಟ ಜಾತಿಗಳಲ್ಲಿನ 101 ಜಾತಿಗಳ ಜನಸಂಖ್ಯೆ ತಿಳಿಯಲು ಒಳಮೀಸಲಾತಿ ಜಾರಿಗೆ ಗಣತಿ ಮಾಡುತ್ತಿದ್ದೇವೆ. ಗಣತಿ ಕಾರ್ಯಕ್ಕೆ ಅಂದಾಜು 100 ಕೋಟಿ ರೂ ಹಣ ಖರ್ಚು ಆಗಲಿದೆ ಎಂದು ತಿಳಿಸಿದ್ದಾರೆ. 

   ಜಾತಿಗಣತಿ ಕುರಿತು ಕೇಂದ್ರ ಕೈಗೊಂಡ ನಿರ್ಧಾರಕ್ಕೆ ಸ್ವಾಗತವಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್ ಹೇಳಿದ್ದಾರೆ. ಯಾವ ಪಕ್ಷ ಅನ್ನೋ ವಿಚಾರ ಇಲ್ಲಿ ಬರಲ್ಲ, ಜಾತಿಗಣತಿ ಮಾಡಲೇಬೇಕು. ಸಾಮಾಜಿಕ, ಶೈಕ್ಷಣಿಕ ವರದಿಯಲ್ಲಿ ಜಾತಿ ಸೇರಿಸಿದರೆ ಜಾತಿಗಣತಿ ಆಗಲ್ಲ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಜಾತಿ ಗಣತಿ ಅಂತ ಪರಿಗಣಿಸಲು ಬರುವುದಿಲ್ಲ. ಜಾತಿ ಜೊತೆಗೆ ಇತರೆ ಅಂಶಗಳನ್ನು ಸೇರಿಕೊಂಡಿವೆ ಎಂದಿದ್ದಾರೆ. 

   ಉದ್ಯೋಗ, ಆರ್ಥಿಕತೆ ಸೇರಿದಂತೆ ಎಲ್ಲವೂ ಒಳಗೊಂಡಂತೆ, ಸಾಮಾಜಿಕ ಶೈಕ್ಷಣಿಕ ಅಂಶಗಳು ಪರಿಗಣಿಸಿದರೆ ರಾಜ್ಯ ಜನಗಣಿತಿಗೆ ಮಾನ್ಯ. ಉದ್ಯೋಗ, ಅರ್ಥಿಕ ಎಲ್ಲವೂ ಒಳಗೊಂಡಿದಂತೆ ಸಾಮಾಜಿಕ ಶೈಕ್ಷಣಿಕ ಅಂತ ಆಗಿದೆ. ರಾಜ್ಯದಲ್ಲಿರುವ ಹಿಂದುಳಿದವರ ಪಟ್ಟಿ ಬೇರೆ, ರಾಷ್ಟ್ರದ್ದು ಬೇರೆ. 1996ರಲ್ಲಿ ಮಾಡಿರುವ ಸಮೀಕ್ಷೆಯನ್ನ ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ ಎಂದು ಹೇಳಿದರು.

Recent Articles

spot_img

Related Stories

Share via
Copy link