ಪ್ರಧಾನಿ ಮೋದಿ ಸರ್ವ ಪಕ್ಷ ಸಭೆ ಕರೆಯಲಿ : ಖರ್ಗೆ

ಕಲಬುರಗಿ :

    ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಘೋಷಣೆಯಾಗಲು ಇತರರ ಒತ್ತಡವಿತ್ತ ಹಾಗೂ ಇತರೆ ಕಾರಣಗಳಿವೆಯೇ ಎನ್ನುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಮೋದಿಯವರು ಸರ್ವ ಪಕ್ಷ ಸಭೆ ಕರೆಯಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.

    ನಗರದಲ್ಲಿ ಮಂಗಳವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕ ಅಧ್ಯಕ್ಷ ಟ್ರಂಪ್ ಕದನ ವಿರಾಮಕ್ಕೆ ಪ್ರಯತ್ನ ಮಾಡಿರುವ ಕುರಿತು ಟೆಲಿಫೋನ್ ಕರೆಗಳ ಮಾಹಿತಿಯೂ ಕೂಡ ನಮ್ಮ ಬಳಿ ಇದೆ. ಈ ನಿಟ್ಟಿನಲ್ಲಿ ಸರ್ವಪಕ್ಷ ಸಭೆ ಕರೆದು ಪ್ರಧಾನಮಂತ್ರಿ ಯವರು ತಮ್ಮ ಹೇಳಿಕೆ ನೀಡಲಿ ಬಳಿಕ ನಾವು ನಮ್ಮ ಮಾಹಿತಿಯನ್ನ ಆಧರಿಸಿ ಅವರೊಂದಿಗೆ ಚರ್ಚಿಸುತ್ತೇವೆ. ಆಗ ನಿಜವಾದ ಮಾಹಿತಿ ದೇಶದ ಮುಂದೆ ಬರಲಿದೆ ಎಂದರು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಸಭೆಯು ದೆಹಲಿಯಲ್ಲಿ ನಡೆಯುತ್ತಿದ್ದು, ತಾವು ಅಲ್ಲಿಗೆ ತೆರಳುತ್ತಿರುವುದಾಗಿ ಹೇಳಿದರು. ಕಾಂಗ್ರೆಸ್ ಪಕ್ಷದ ಸಭೆಯಲ್ಲೂ ಕೂಡ ಸರ್ವಪಕ್ಷಗಳ ಸಭೆ ಕರೆಯುವ ಕುರಿತು ಚರ್ಚೆ ನಡೆಯಲಿದೆ ಎಂದರು

Recent Articles

spot_img

Related Stories

Share via
Copy link