ಕೋಲಾರ:
ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೊಲಾರ ಕಾಂಗ್ರೆಸ್‍ನಲ್ಲಿ ನಾಯಕರ ನಡುವೆ ಭಿನ್ನಮತ ಬುಗಿಲೆದ್ದಿದ್ದೆ , ಕೋಲಾರದಲ್ಲಿ ಕೈ ನಾಯಕರೊಬ್ಬರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮತ್ತೊಬ್ಬ ಶಾಸಕರು ಆರೋಪಿಸಿದ್ದಾರೆ.
ಸುದ್ಧಿಘೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಾದ ವಿ.ಮುನಿಯಪ್ಪ ಸುಧಾಕರ್ ರೆಡ್ಡಿ, ಶ್ರೀನಿವಾಸಗೌಡ, ಕೊತ್ತೂರು ಮಂಜುನಾಥ್, ವೆಂಕಟಶಿವಾರೆಡ್ಡಿ, ಚೌಡರೆಡ್ಡಿ, ಎಂ.ನಾರಾಯಣಸ್ವಾಮಿ ಅವರನ್ನ ಮೂಲೆಗುಂಪು ಮಾಡಿದ್ದಷ್ಟೆ ಮುನಿಯಪ್ಪನವರ ಸಾಧನೆ. ಜಿಲ್ಲೆಗೆ ಮುನಿಯಪ್ಪ ಕೊಡುಗೆ ಕೂಡ ಶೂನ್ಯವಾಗಿದ್ದು ಏನು ಮಾಡಿದ್ದಾರೆಂದು ನಾವು ಓಟು ಕೇಳಬೇಕು ಎಂದು ಪ್ರಶ್ನಿಸಿದ್ದಾರೆ. ಹೀಗಾಗಿ ಬದಲಾವಣೆ ಬೇಕು ಎಂದು ಲೋಕಸಭೆ ಚುನಾವಣೆಗೆ ಹೆಚ್.ಸಿ ಮಹದೇವಪ್ಪರನ್ನು ಕಣಕ್ಕಿಳಿಸುವಂತೆ ಹೈಕಮಾಂಡ್‍ನಲ್ಲಿ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಹೈಕಮಾಂಡ್ ಮುನಿಯಪ್ಪನವರಿಗೆ ಟಿಕೆಟ್ ಖಚಿತ ಪಡಿಸಿದ್ದಲ್ಲಿ ,ನಾವೆಲ್ಲ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೈ ಕಮಾಂಡ್ ಗೆ ಸಂದೇಶ ರವಾನಿಸಿದ್ದಾರೆ , ಈ ಬಾರಿ ಪರಿಸ್ಥಿತಿ ವಿಭಿನ್ನವಾಗಿದೆ, ಯಾವುದೇ ಕಾರಣಕ್ಕೂ ಮುನಿಯಪ್ಪ ಅವರಿಗೆ ಬೆಂಬಲ ನೀಡಲ್ಲ ಎಂದು ಪರೋಕ್ಷವಾಗಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ