ಬೆಂಗಳೂರು:
ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ನಡೆದಿದ್ದು 11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಈ ಕುರಿತಂತೆ ಕರ್ನಾಟಕ ಸರಕಾರ ಅಧಿಸೂಚನೆ ಹೊರಡಿಸಿದ್ದು, ಐಎಎಂ ಸ್ಪೆಷಲ್ ಆಫೀಸರ್ ಆಗಿದ್ದಂತ ಅಮಲಾನ್ ಅದಿತ್ಯ ಬಿಸ್ವಾಸ್ ಅವರನ್ನು ಪಿಡಬ್ಲ್ಯುಡಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶಿಸಿದೆ.
ನವೀನ್ ರಾಜ್ ಸಿಂಗ್ ಅವರನ್ನು ಯವನಿಕದ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿದ್ದರೆ, ವಿ ಅನ್ಬುಕುಮಾರ್ ಅವರನ್ನು ಕೆ ಎಸ್ ಆರ್ ಟಿಸಿ ಎಂಡಿ ಸ್ಥಾನದಿಂದ ವರ್ಗಾವಣೆ ಮಾಡಿ ಹೌಸಿಂಗ್ ಡಿಪಾರ್ಟಮೆಂಟ್ ಸೆಕ್ರೆಟರಿ ಹಾಗೂ ವೆಟರ್ನರಿ ಸೈನ್ಸ್ ಆಂಡ್ ಫಿಷರಿಂಗ್ ಇಲಾಖೆಯ ಸೆಕ್ರೆಟರಿಯಾಗಿ ನೇಮಕ ಮಾಡಲಾಗಿದೆ.
ಸಮೀರ್ ಶುಕ್ಲ ಅವರನ್ನು ಎಂಎಸ್ಎಂಇ ಮತ್ತು ಮೈನಿಂಗ್ ಕಾರ್ಯದರ್ಶಿ ಹುದ್ದೆಗೆ ನೇಮಸಿದ್ದರೆ, ರಂದೀಪ್ ಚೌದರಿ ಅವರನ್ನು ಕೆಪಿಎಸ್ಸಿ ಕಾರ್ಯದರ್ಶಿ ಹುದ್ದೆಯಿಂದ ವರ್ಗಾವಣೆ ಮಾಡಿ, ಸೆಕ್ರೆಟರಿ ಪ್ಲಾನಿಂಗ್, ಪ್ರೋಗ್ರಾಂ ಮಾನಿಟರಿಂಗ್ ಮತ್ತು ಸ್ಟಾಟಿಟಿಕ್ಸ್ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಐಎಎಸ್ ಅಧಿಕಾರಿ ರಂದೀಪ್ ಡಿ ಅವರನ್ನು ಯವನಿಕದ ಕಾರ್ಯದರ್ಶಿ ಹುದ್ದೆಯಿಂದ ವರ್ಗಾವಣೆ ಮಾಡಿ ಎಸ್ಟಿ ವೆಲ್‌ಫೇರ್ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಪೊಮ್ಮಲ ಸುನೀಲ್ ಕುಮಾರ್ ಅವರನ್ನು ಕಂದಾಯ ಇಲಾಖೆಯ ಕಮೀಷನರ್ ಹುದ್ದೆಯಿಂದ ನೋಂದಣಿ ಮತ್ತು ಮುದ್ರಣಾಂಕ ಇಲಾಖೆಯ ಐಜಿಯಾಗಿ ನೇಮಕ ಮಾಡಲಾಗಿದೆ.








