ನಾಯಕನಹಟ್ಟಿ :
ನೋಂದಣಿಯಾಗದ ಹಾಗೂ ಕಳಪೆ ಬೀಜ ಕೀಟನಾಶಕ ಸಹ ಮಾರಾಟ ಮಾಡುವಂತಿಲ್ಲ. ತಮ್ಮ ಅಂಗಡಿಗಳಿಗೆ ರೈತರು ಬಂದಾಗ ಪ್ರೀತಿಯಿಂದ ವರ್ತಿಸಬೇಕು ಎಂದು ನಾಯಕನಹಟ್ಟಿ ಕೃಷಿ ಅಧಿಕಾರಿ ಮಂಜುನಾಥ ಕೀಟನಾಶಕ ಔಷಧಿ ಅಂಗಡಿ ಮಾಲೀಕರಿಗೆ ಕಿವಿ ಮಾತು ಹೇಳಿದರು.
ಪಟ್ಟಣದ ಶುಕ್ರವಾರ ಶ್ರೀಭವಾನಿ ಆಗ್ರೋ ಸರ್ವೀಸ್ ಸೆಂಟರ್ ಅಂಗಡಿಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರತಿಯೊಂದು ಕೀಟನಾಶಕ ಔಷಧಿ ಅಂಗಡಿಯ ಮುಂದೆ ದರ ಫಲಕ ಹಾಕಿ ಬರುಯಿಸಬೇಕು. ಯಾವುದೇ ಕಾರಣಕ್ಕೂ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆ ಮಾರಾಟ ಮಾಡಬಾರದು.
ಒಂದು ವೇಳೆ ಹೆಚ್ಚಿನ ದರಕ್ಕೆ ಮಾರಿದರೆ ಅಂತಹ ಅಂಗಡಿ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ರೈತರಿಗೆ ಅಧಿಕೃತವಾಗಿ ನೀಡಿದ ರಶೀದಿಯಲ್ಲಿ ರೈತರ ಸಹಿ ಪಡೆಯದೆ ಇರುವುದು ಕಂಡುಬAದರೆ ಅಂತಹ ಅಂಗಡಿ ಮಾಡಲೀಕರಿಗೆ ನೋಟೀಸ್ ಜಾರಿ ಮಾಡಲಾಗುವುದು ಎಂದು ತಿಳಿಸಿದರು.








