ಬೆಂಗಳೂರು :
ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಇಂದು ಸಾರ್ವಜನಿಕರನ್ನು ಭೇಟಿಯಾಗದಿರಲು ನಿರ್ಧರಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಾರ್ಚ್ 31 ರ ವರೆಗೆ ಸರ್ಕಾರ ಸಾರ್ವಜನಿಕ ವಲಯಕ್ಕೆ ಬಂದ್ ಘೋಷಿಸಿದೆ. ಈ ನಡುವೆ ಸಿಎಂ ಬಿಎಸ್ ವೈ ಮನೆ ಬಳಿ ಸಾರ್ವಜನಿಕರು ಹಾಗೂ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಆದರೆ ಪೊಲೀಸರು ಅವರನ್ನು ವಾಪಸ್ ಕಳುಹಿಸುತ್ತಿದ್ದಾರೆ.
ಇನ್ನು ಸಿಎಂ ಮನೆ ಬಳಿ ಹೆಚ್ಚಿನ ಜನ ಸಂದಣಿ ಇಲ್ಲದ ಕಾರಣ ಸಿಎಂ ಭದ್ರತಾ ಸಿಬ್ಬಂದಿಗೂ ಸಹ ಬಿಡುವು ನೀಡಲಾಗಿದೆ. ಇನ್ನು ಕೆಲವು ಪೊಲೀಸರು ಮಾಸ್ಕ್ ಧರಿಸಿ ಕೆಲಸದಲ್ಲಿ ಭದ್ರತಾ ಕಾರ್ಯದಲ್ಲಿ ತೊಡಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ