ಸಿನಿಮಾ ಪ್ರಮೋಷನ್‌ ವಿವಾದ : ರಚಿತಾ ರಾಮ್‌ ಆರೋಪಕ್ಕೆ ನಾಗಶೇಖರ್‌ ಉತ್ತರ….!

ಬೆಂಗಳೂರು :

    ನಿರ್ದೇಶಕ ನಾಗಶೇಖರ್ ಅವರು ನಟಿ ರಚಿತಾ ರಾಮ್ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ‘ಸಂಜು ವೆಡ್ಸ್ ಗೀತಾ 2’  ಸಿನಿಮಾದ ಪ್ರಚಾರಕ್ಕೆ ರಚಿತಾ ರಾಮ್ ಬಂದಿಲ್ಲ ಎಂಬುದು ನಾಗಶೇಖರ್ ಅವರ ಅಸಮಾಧಾನಕ್ಕೆ ಕಾರಣ ಆಗಿತ್ತು. ಆ ಬಗ್ಗೆ ರಚಿತಾ ಕೂಡ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದರು.

    ಅಲ್ಲದೇ, ನಾಗಶೇಖರ್ ವಿರುದ್ಧ ರಚಿತಾ ರಾಮ್ ಪ್ರತ್ಯಾರೋಪ ಮಾಡಿದರು. ಅದಕ್ಕೆ ಈಗ ನಾಗಶೇಖರ್ ಪ್ರತಿಕ್ರಿಯಿಸಿದ್ದಾರೆ. ‘ಮ್ಯಾಟ್ನಿ ಸಿನಿಮಾದ ಪ್ರಚಾರಕ್ಕೆ ನಾನು ರಚಿತಾ ಅವರನ್ನು ಕಳಿಸಿಲ್ಲ ಎಂದು ರಚಿತಾ ಆರೋಪಿಸಿದ್ದಾರೆ. ದರ್ಶನ್ ಕೂಡ ಆ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದಾಗ ನಾನು ಅವರನ್ನು ಕಳಿಸಿದ್ದೆ. ಅವರೇ ದೊಡ್ಡವರು, ನಾನು ಕೆಟ್ಟವನು, ಕಾಲವೇ ನಿರ್ಧರಿಸಲಿ’ ಎಂದು ನಾಗಶೇಖರ್  ಹೇಳಿದ್ದಾರೆ.

Recent Articles

spot_img

Related Stories

Share via
Copy link