ಗೋಪಾಲ್ ಖೇಮ್ಕಾ ಹತ್ಯೆ; ಕೊಲೆ ಮಾಡಿ ಅಂತ್ಯಕ್ರಿಯೆಗೆ ಹಾರ ಹಿಡಿದು ಬಂದ ಆರೋಪಿ!

ಪಟನಾ:

     ಬಿಹಾರದ ಉದ್ಯಮಿ ಹಾಗೂ ಬಿಜೆಪಿ ಮುಖಂಡ ಗೋಪಾಲ್ ಖೇಮ್ಕಾ ಅವರ ಹತ್ಯೆಯ   ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಗೋಪಾಲ್ ಖೇಮ್ಕಾ ಅವರ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಗಳ ಪೈಕಿ ಒಬ್ಬನನ್ನು ಬಂಧಿಸಲಾಗಿದೆ. ಆರೋಪಿ ಅವರ ಅಂತ್ಯಕ್ರಿಯೆಗೆ ಹೂವಿನ ಹಾರದೊಂದಿಗೆ ತೆರಳಿದ್ದಾನೆ. ಆಗ ಪೊಲೀಸರ ಬಂಧಿಸಿದ್ದಾರೆ. ಕೃತ್ಯ ಎಸಗುವ ಮೊದಲು ಪಾಟ್ನಾದ ದಾಲ್ಡಾಲಿ ಪ್ರದೇಶದ ಚಹಾ ಅಂಗಡಿಯ ಬಳಿ ಮೂವರು ಇದ್ದರು ಎಂದು ತಿಳಿದು ಬಂದಿದೆ. ಅಲ್ಲಿ ಚಹಾ ಕುಡಿದ ಬಳಿಕ ಅವರು ಖೇಮ್ಕಾ ನಿವಾಸದ ಬಳಿಗೆ ತೆರಳಿದ್ದಾರೆ.

ಖೇಮ್ಕಾ ಅವರನ್ನು ಜುಲೈ 4 ರಂದು ರಾತ್ರಿ 11.40 ಕ್ಕೆ ಗಾಂಧಿ ಮೈದಾನ ಪ್ರದೇಶದಲ್ಲಿರುವ ಅವರ ಮನೆಯ ಹೊರಗೆ ಅಪರಿಚಿತ ಶಸ್ತ್ರಸಜ್ಜಿತ ದುಷ್ಕರ್ಮಿಯೊಬ್ಬರು ಗುಂಡಿಕ್ಕಿ ಕೊಂದರು. ಅವರು ಕಾರಿನಿಂದ ಇಳಿಯಲು ಮುಂದಾದಾಗ ಈ ಘಟನೆ ನಡೆದಿದೆ. ಜುಲೈ 6 ರಂದು ಪಾಟ್ನಾದ ಗುಲ್ಬಿ ಘಾಟ್‌ನಲ್ಲಿ ಅವರ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆ ನಡೆಸಲಾಗಿದೆ. ಖೇಮ್ಕಾ ಅವರ ಅಂತ್ಯಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯ ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದರು. ಖೇಮ್ಕಾ ಹತ್ಯೆಯ ನಂತರ ರಾಜ್ಯದ ಹಲವಾರು ಉದ್ಯಮಿಗಳು ಭದ್ರತೆಯ ಕುರಿತು ಕಳವಳ ವ್ಯಕ್ತಪಡಿಸಿದ ಬಳಿಕ ಬಿಹಾರ ಸರ್ಕಾರ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿತ್ತು.

ಗಾಂಧಿ ಮೈದಾನ ಪೊಲೀಸ್ ಠಾಣೆ ಬಳಿ ಖೇಮ್ಕಾ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದ್ದರೂ, ಪೊಲೀಸರು ಸ್ಥಳಕ್ಕೆ ತಲುಪಲು ಹಲವು ಗಂಟೆಗಳು ಬೇಕಾಯಿತು ಎಂದು ಬಿಹಾರ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (ಬಿಸಿಸಿಐ) ಉಪಾಧ್ಯಕ್ಷ ಆಶಿಶ್ ಶಂಕರ್ ಆರೋಪಿಸಿದ್ದಾರೆ.

ಭಾನುವಾರ ಖೇಮ್ಕಾ ಅವರ ಮನೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೈಗಾರಿಕೋದ್ಯಮಿ ಅಜಯ್ ಸಿಂಗ್, ಕ್ರಿಮಿನಲ್‌ಗಳಿಂದ ತಮಗೆ ಬೆದರಿಕೆ ಕರೆಗಳು ಬಂದಿವೆ ಮತ್ತು ಈ ವಿಷಯವನ್ನು ಮುಖ್ಯಮಂತ್ರಿ ಮತ್ತು ಗೃಹ ಇಲಾಖೆಯ ಗಮನಕ್ಕೆ ತಂದರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಹೇಳಿದ್ದಾರೆ. ಇಂತಹ ದೂರುಗಳಿಗೆ ಯಾವುದೇ ಪರಿಹಾರ ವ್ಯವಸ್ಥೆ ಇಲ್ಲ. ನಾವು ಜಂಗಲ್-ರಾಜ್ ಬಗ್ಗೆ ಕೇಳುತ್ತಿದ್ದೆವು. ಆದರೆ ಸ್ಪಷ್ಟವಾಗಿ, ರಾಜ್ಯದ ಪ್ರಸ್ತುತ ಪರಿಸ್ಥಿತಿ ಭಿನ್ನವಾಗಿಲ್ಲ. ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಪರಿಸ್ಥಿತಿಯನ್ನು ಸುಧಾರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಸಿದ್ದರು.

Recent Articles

spot_img

Related Stories

Share via
Copy link