ಬೆಂಗಳೂರು:
ದರ್ಶನ್ ಅಭಿಮಾನಿಗಳು ಹಾಗೂ ನಟಿ ರಮ್ಯಾ ಮತ್ತು ನಟ ಪ್ರಥಮ್ ಅವರ ಜಟಾಪಟಿ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದ್ದು ಆರೋಪ ಪ್ರತ್ಯಾರೋಪಗಳಿಂದಾಗಿ ವಿವಾದ ಸೃಷ್ಟಿ ಆಗುತ್ತಿವೆ, ಇತ್ತಿಚೆಗೆ ನಡೆದ ಕೆಲ ಬೆಳವಣಿಗೆಯಲ್ಲಿ ಪ್ರಥಮ ಸಾಮಾಜಿಕ ಜಾಲತಾಣದಲ್ಲಿ ‘ನಾಳೆ ದೊಡ್ಡದಾಗಿ ಅಗುತ್ತೆ! ತುಂಬಾ ದೊಡ್ಡ ನಿರ್ಧಾರ!’ ಎಂದು ಪೋಸ್ಟ್ ಮಾಡಿದ್ದು ಮತ್ತಷ್ಟು ಜಟಾಪಟಿಯಾಗುವ ಗೋಚರವಾಗಿದೆ.
ನಟ ಪ್ರಥಮ ದರ್ಶನ ಅಭಿಮಾನಿಗಳು ನನ್ನ ಮೇಲೆ ಹಲ್ಲೆ ಯತ್ನ ಮಾಡಿದರು ಎಂಬ ಆರೋಪಕ್ಕೆ ದರ್ಶನ ಅಭಿಮಾನಿಗಳು ಪ್ರತಿಕ್ರಿಯೆ ನೀಡಿ ಪ್ರಥಮ್ ಮೇಲೆ ಹಲ್ಲೆ ಪ್ರಕರಣದ ಸತ್ಯ ಹೊರಬಂದಿದ್ದು, ರೌಡಿಗಳ ಜೊತೆ ಹೋಗಿ ಅವರ ಕಾರ್ಯಕ್ರಮದಲ್ಲಿ ಅವರ ಹತ್ತಿರನೇ ತಿಂದು, ಅವರಿಗೆ ರೇಗಿಸಿ ಬ್ರೆಡ್ ಚಿಪ್ಸ್ ಕೇಳಿ, ಖಾರ ಬನ್ ತಿಂದ ಪ್ರಕರಣವಿದು ಎಂದು ಪ್ರಥಮ್ಗೆ ಟಾಂಗ್ ನೀಡಿದ್ದರು.
ಇನ್ನೂ ಹಲ್ಲೆಯ ನಂತರ ಪೊಲೀಸ್ರಿಗೆ ದೂರು ನೀಡದಿರಲು ಕಾರಣವೇನು ಎಂದು ಪ್ರಶ್ನಿಸಿದ್ದು, ದೂರು ನೀಡಲು ವೈದ್ಯರ ವರದಿ ಬೇಕು. ಸರ್ಕಾರಿ ಆಸ್ಪತ್ರೆಗೆ ಹೋದರೆ ವೈದ್ಯರ ಪರೀಕ್ಷೆಯಲ್ಲಿ ಕುಡಿದಿರುವುದು ಬೆಳಕಿಗೆ ಬರುತ್ತದೆ. ಕುಡುಕರ ಗಲಾಟೆ ಎಂದು ವರದಿ ನೀಡುತ್ತಾರೆ. ಎರಡು ಮೂರು ದಿನ ಕಳೆದರೆ ಸತ್ಯ ಯಾರಿಗೂ ತಿಳಿಯುವುದಿಲ್ಲ. ಇದು ನಿಮ್ಮ ಗೇಮ್ ಹಾಗೂ ನಿಮಗೆ ಪ್ರೋತ್ಸಾಹ ಧನ ಸಹಾಯ ಮಾಡುವವರ ಹುನ್ನಾರ. ಹೇಗಿದ್ರೂ ನೀವು ನಿರ್ದೇಶಕರು ಅಲ್ಲವೇ ಸ್ವಾಮಿ. ಕಥೆ ಚಿತ್ರಕಥೆ ಸಂಭಾಷಣೆ ಚೆನ್ನಾಗಿ ರಚನೆ ಮಾಡಿದ್ದೀರಿʼ ಎಂದು ರೇಗಿಸಿದ್ದಾರೆ.
ಇನ್ನು ನಟ ಪ್ರಥಮ ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್ ಮಾಡುವ ಮೂಲಕ ಉತ್ತರ ನೀಡುತ್ತಿದ್ದಾರೆ, ಕಳೆದರಾತ್ರಿ “Morning ತನಕ time ಇದೆ! ಸುಳ್ಳು ಸುದ್ಧಿ ನಿಲ್ಲಿಸಿದ್ರೆ ಸರಿ!ನಾಳೆ ಅಧಿಕೃತವಾಗಿ SP ತಪ್ಪು ಮಾಡಿದವರ ಮೇಲೆactionತಗೊಳೋ ತನಕ ಸುಮ್ಮನಿದ್ರೆ ಸರಿ! ನಾನು ಸುಮ್ಮನಿದ್ರೂsocial mediaಲಿ ಏನೇನೋ ಹಾಕ್ತಿದೀರಾ! ಹೀಗೇ ಸುಳ್ಳು ಸುದ್ಧಿ ಹಬ್ಬಿಸ್ತಾ ಇದ್ರೆ ಯಾವ ನಟರcompany ಆ ನಟರ ಮೇಲೆ FIR ಮಾಡ್ತೀನಿ; ನನ್ನ ಪಾಡಿಗೆ ಸುಮ್ನೆ ಬಿಟ್ಟುಬಿಡಿ!” ಎಂದು ಎಚ್ಚರಿಸಿದ್ದರು.
ಇಂದು ಬೆಳಗ್ಗೆ ಮಾಡಿರುವ ಪೋಸ್ಟ್ನಲ್ಲಿ “ಎಲ್ಲರೂ ನೆನ್ನೆ ನೆಮ್ಮದಿಯಾಗಿ ಮಲಗಿದ್ದು ಎದ್ರಾ?ಸಂತೋಷ!ಇನ್ಮೇಲೆ ಸ್ವಲ್ಪ ನಿದ್ರೆ ಕಷ್ಟ ಆಗ್ಬೋದು! ಸ್ವಲ್ಪ ಹೊತ್ತಲ್ಲೇ ಗೊತ್ತಾಗುತ್ತೆ ಈ ಸಲ ತಗೊಳೋ step complaintಥರ ಇರಲ್ಲ! ನನ್ನ triggerಮಾಡಿದ ಪರಿಣಾಮ ನಿಮ್ಮ ದೊಡ್ಡ ನಟರಿಗೆ ತಟ್ಟಲಿದೆ! ಸ್ವಲ್ಪ ಸಮಯ ಕೊಡಿ,ನಾವು ಬಾಡಿಗೆ ಕಟ್ಟುತೀವಾ ಇಲ್ಲಾ ಕಟ್ಟುಸ್ತೀವಾ ಎಲ್ಲಾ ಗೊತ್ತಾಗುತ್ತೆ” ಎಂದು ಎಚ್ಚರಿಸಿದ್ದಾರೆ.
ಸಮಾಜಕ್ಕೆ ಮನರಂಜನೆ ಹಾಗೂ ಮಾರ್ಗದಶರ್ನದ ತಾಣವಾಗಬೇಕಿದ್ದ ಸಾಮಾಜಿಕ ಜಾಲತಾಣಗಳು, ನಿಂಧನೆ ಆರೋಪ ಪ್ರತ್ಯಾರೋಪಗಳಿಗೆ ವೇದಿಕೆಯಾಗಿ ಮಾನಸಿಕ ಸ್ಥಿತಿಗಳನ್ನು ಸಂಕುಚಿತ ಮಾಡುತ್ತಿರುವುದು ಅಪಾಯಕರಿಯೇ ಸರಿ, ಸಾಮಾಜಿಕ ಜಾಲತಾಣಗಳು ಸಾರ್ವಜನಿಕ ಚರ್ಚೆ ಮತ್ತು ಅಭಿಪ್ರಾಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆಯಾದರು. ಕೆಲ ನಿರ್ಬಂಧಗಳು ಅನಿವಾರ್ಯವೇ ಎಂಬಂತಾಗಿದೆ.








