ನೆಲಮಂಗಲ :
ಮಗಳ ಅಂತರ್ಜಾತಿ ವಿವಾಹಕ್ಕೆ ಮನನೊಂದ ದಂಪತಿ ಮನೆ ಸಂಪ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹಾರೋಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಶಿವಲಿಂಗಪ್ಪ(51),ಚಂದ್ರಕಲಾ(45) ಎಂದು ಗುರುತಿಸಲಾಗಿದೆ. ಶಿವಲಿಂಗಸ್ವಾಮಿ ಅವರು ಗಾರ್ಮೆಂಟ್ಸ್ ವೊಂದರಲ್ಲಿ ಸೂಪರ್‍ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಗೃಹಿಣಿ.
ಬೆಳಗ್ಗೆ ಇವರ ಮನೆಯಲ್ಲಿ ಯಾರೂ ಓಡಾಡುವುದು ಕಾಣಿಸದ ಕಾರಣ ಅಕ್ಕಪಕ್ಕದವರು ಬಂದು ನೋಡಿದ್ದಾರೆ. ಮನೆಯ ಸಂಪ್ ಮುಚ್ಚಳ ತೆರೆದಿರುವುದನ್ನು ಕಂಡು ಅಲ್ಲಿ ನೋಡಿದಾಗ ದಂಪತಿ ಶವ ನೀರಿನಲ್ಲಿ ಕಂಡುಬಂದಿದೆ. ತಕ್ಷಣ ಅಕ್ಕಪಕ್ಕದ ನಿವಾಸಿಗಳು ಮಾದನಾಯಕನಹಳ್ಳಿ ಠಾಣೆ ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲಿಸಿ ಸಂಪ್‍ನಲ್ಲಿದ್ದ ಮೃತ ದೇಹಗಳನ್ನು ತೆಗೆದು ನೆಲಮಂಗಲ ಆಸ್ಪತ್ರೆಗೆ ರವಾನಿಸಿದ್ದಾರೆ.
ಪೊಲೀಸರು ಮನೆಯನ್ನು ಪರಿಶೀಲಿಸಿದಾಗ ಅಲ್ಲಿ ಡೆತ್‍ನೋಟ್ ಪತ್ತೆಯಾಗಿದೆ. ನಮ್ಮ ಸಾವಿಗೆ ನಾವೇ ಕಾರಣ ಎಂದು ದಂಪತಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ದಂಪತಿಯ ಪುತ್ರಿ ಸೌಮ್ಯ ಇತ್ತೀಚೆಗೆ ಅಂತರ್ಜಾತಿ ವಿವಾಹವಾಗಿದ್ದಳು. ಜೊತೆಗೆ ಮದುವೆ ಬಳಿಕ ಹುಡುಗನ ಜೊತೆ ಮನೆ ತೊರೆದಿದ್ದಳು. ಈ ಬಗ್ಗೆ ಮನನೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
